ಜ್ಯುಬಿಲಿಯಂಟ್ ಕಾರ್ಖಾನೆ ಕರೋನಾಗೆ ಚೈನಾ ಲಿಂಕ್ : ಪತ್ತೆ ಜವಾಬ್ದಾರಿಯನ್ನು ಸಿಬಿಐಗೆ ವಹಿಸಲು ಕಾಂಗ್ರೆಸ್ ಆಗ್ರಹ.

 

ಮೈಸೂರು, ಮೇ 19, 2020 : (www.justkannada.in news ) ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆ ಪುನರಾರಂಭ ವಿಚಾರಕ್ಕೆ ಸಂಬಂಧಿಸಿದಂತೆ, ಕಾರ್ಖಾನೆಯ ಆಮೀಷಕ್ಕೆ ಸರ್ಕಾರ ಒಳಗಾಗಿದೆ ಎಂದು ಕಾಂಗ್ರೆಸ್ ನ ಮಾಜಿ ಸಂಸದ ಧ್ರುವ ನಾರಾಯಣ್ ಗಂಭೀರ ಆರೋಪ ಮಾಡಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಂಸದ ಧ್ರುವ ನಾರಾಯಣ್ ಹೇಳಿದಿಷ್ಟು….

ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ಆಗಬೇಕು. ಕಾರ್ಖಾನೆ ಪುನರಾರಂಭಕ್ಕೆ ನಮ್ಮ ಯಾವುದೆ ಅಭ್ಯಂತರ ಇಲ್ಲ. ಆದ್ರೆ ಸಂಪೂರ್ಣ ತನಿಖೆ ಆಗಬೇಕು. 70 ಕ್ಕೂ ಹೆಚ್ಚು ಪ್ರಕರಣಗಳು ಈ ಕಾರ್ಖಾನೆಯಿಂದಲೆ ಹರಡಿದ್ದು. ಇದರ ಬಗ್ಗೆ ತನಿಖೆ ಮಾಡಬೇಕು ಎಂಬ ಒತ್ತಾಯ ಮಾಡಿದ್ದೇವು.

 mysore-nanjangudu-jubilant-factory-corona-CBI-inquiry-congress-demand

ಕಾರ್ಖಾನೆ ಎಂಡಿ ಯನ್ನ ಕರೆಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ ಸೋಮಣ್ಣ ಹೇಳಿದ್ರು. ನಂತರ ಅವರೆ ಬದಲಾವಣೆ ಆದ್ರು. ಸರ್ಕಾರ ಇಂಬ್ಬದಿ ನೀತಿ ಅನುಸರಿಸುತ್ತಿದೆ. ಸಾಕಷ್ಟು ಪ್ರಭಾವ ಒತ್ತಡ ಬಂತು ಅಂತ ಸ್ಥಳಿಯ ಶಾಸಕ ಹರ್ಷವರ್ಧನ್ ಹೇಳುತ್ತಿದ್ದಾರೆ. ಇದುವರವಿಗೂ ಕಾರ್ಖಾನೆ ಮೇಲೆ ಯಾವುದೇ ಕೇಸು ದಾಖಲಾಗಿಲ್ಲ. ಇದನ್ನ ಸಿಬಿಐ ತನಿಖೆಗೆ ಒಳಪಡಿಸಬೇಕು.ಉನ್ನತ ಮಟ್ಟದ ತನಿಖೆ ಆಗಬೇಕು.

ಚೈನಾದಿಂದ ಕಚ್ಚಾ ಪದಾರ್ಥಗಳು ಬಂದಿದೆ ಎಂಬುದನ್ನ ಸ್ಥಳೀಯ ಶಾಸಕರೆ ಹೇಳಿದ್ದಾರೆ. ದೆಹಲಿ ನಾಯಕರ ಒತ್ತಡಕ್ಕೆ ಸರ್ಕಾರ ಮಣಿದಿದೆ. ಪ್ರಕರಣದ ಸತ್ಯ ತಿಳಿಯಲು ಸರಕಾರವೇ ನೇಮಿಸಿದ್ದ ಹಿರಿಯ ಐಎಎಸ್ ಅಧಿಕಾರಿ ಹರ್ಷಾಗುಪ್ತ, ನಮ್ಮ ತನಿಖೆಗೆ ಜಿಲ್ಲೆಯ ಹಾಗೂ ಸ್ಥಳೀಯ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಹೇಳಿ ತನಿಖೆಯನ್ನೇ ಕೈಚೆಲ್ಲಿದ್ದಾರೆ.

mysore-nanjangudu-jubilant-factory-corona-CBI-inquiry-congress-demand

ಸರ್ಕಾರದ ಸಚಿವರುಗಳು ಒಂದೊಂದು ಹೇಳಿಕೆ ನೀಡುತ್ತಾ ಇದ್ದಾರೆ. ಸಚಿವ ಸುರೇಶ್ ಕುಮಾರ್ ಕೂಡ ವಿದೇಶದಿಂದ ಬಂದಿದ್ದಾರೆ ಅಂತ ಹೇಳಿದ್ದಾರೆ. ಆದ್ರೆ ಯಾಕೆ ಸರ್ಕಾರ ಈ ತನಿಖೆಯನ್ನ ಕೈಬಿಟ್ಟಿದ್ದೆ. ಸರ್ಕಾರಕ್ಕೆ ಮಾಜಿ ಸಂಸದ ಧ್ರುವನಾರಾಯಣ್ ಪ್ರಶ್ನೆ.?
ಈ ನಡವಳಿಕೆ ನೋಡಿದರೆ ಕಾರ್ಖಾನೆ ಮಾಲೀಕರ ಕಿಕ್ ಬ್ಯಾಕ್ ಆಮೀಷಕ್ಕೆ ಈ ಎಲ್ಲರು ಒಳಗಾಗಿದ್ದಾರೆಯೇ ಎಂದು ಮಾಜಿ ಸಂಸದ ಧ್ರುವನಾರಾಯಣ್ ಅನುಮಾನ ವ್ಯಕ್ತಪಡಿಸಿದರು.

key words : mysore-nanjangudu-jubilant-factory-corona-CBI-inquiry-congress-demand