ಮೈಸೂರು: ಹಳೆ ವೈಷಮ್ಯ ಹಿನ್ನಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆ ಬರ್ಬರ ಹತ್ಯೆ….

Promotion

ಮೈಸೂರು,ಆ,11,2019(www.justkannada.in): : ಹಳೆ ವೈಷಮ್ಯ ಹಿನ್ನಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆ ಬರ್ಬರವಾಗಿ  ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.

ನಂಜನಗೂಡು ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಗೌರಮ್ಮ (೪೫) ವರ್ಷ ಕೊಲೆಯಾದ ಮಹಿಳೆ. ಮಾರಾಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯನ್ನ ಕೊಲೆ ಮಾಡಲಾಗಿದೆ. ಮೈಸೂರಿನ ಶವಾಗಾರದ ಮುಂದೆ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದ್ದು ನೆರೆಯವರಿಂದಲೇ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ನಿನ್ನೆ ಮದ್ಯಹ್ನದ ವೇಳೆಯಲ್ಲಿ ಕೋಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು  ಕೊಲೆ ನಡೆದ ಮುರ್ನಾಲ್ಕು ಗಂಟೆಗಳ ಬಳಿಕ ಗ್ರಾಮದ ಹೊಲ ಒಂದರಲ್ಲಿ ಶವವಾಗಿ ಮಹಿಳೆ ಪತ್ತೆಯಾಗಿದ್ದಾರೆ. ನಂತರ ಕೌಲಂದೆ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದರು. ಈ ಕುರಿತು ಕಾಲಂದೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Mysore-Murder – Woman