ಮುಡಾ (MUDA ) ಆಯುಕ್ತ ಡಾ.ನಟೇಶ್ ವರ್ಗಾವಣೆ ರದ್ದು …?

 

ಬೆಂಗಳೂರು, ಜೂ.21, 2021 : (www.justkannada.in news) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ನಟೇಶ್ ವರ್ಗಾವಣೆ ರದ್ದು ಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

jk

ಇದೇ ಶನಿವಾರ, ಜೂ. 19 ರಂದು ಕೆ.ಎ.ಎಸ್ (ಆಯ್ಕೆ ಶ್ರೇಣಿ/ಹಿರಿಯ ಶ್ರೇಣಿ/ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ರಾಜ್ಯ ಸರಕಾರ ಆದೇಶಿಸಿತ್ತು.

ಈ ಪೈಕಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ನಟೇಶ್ ಅವರನ್ನು ಪಶುಪಾಲನ ಇಲಾಖೆ ಜಂಟಿ ನಿರ್ದೇಶಕರನ್ನಾಗಿ ವರ್ಗಾಯಿಸಿ, ಆ ಸ್ಥಳದಲ್ಲಿದ್ದ ಶೀಲವಂತ ಎಂ.ಶಿವಕುಮಾರ್ ಅವರನ್ನು ಮುಡಾ ಆಯುಕ್ತರನ್ನಾಗಿ ನೇಮಿಸಲಾಗಿತ್ತು.

ಆದರೆ ಇದೀಗ ನಡೆದ ಬೆಳವಣಿಗೆಗಳ ಕಾರಣ, ಶನಿವಾರ ಹೊರಡಿಸಿದ್ದ ವರ್ಗಾವಣೆ ಆದೇಶ ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದ್ದು, ಡಾ.ನಟೇಶ್ ಅವರನ್ನೇ ಮತ್ತೆ ಮುಡಾ ಆಯುಕ್ತರನ್ನಾಗಿ ನೇಮಕಗೊಳಿಸಿ ಸದ್ಯದಲ್ಲೇ ಮರು ಆದೇಶ ಹೊರಡಿಸಲಾಗುತ್ತದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ENGLISH SUMMARY….

MUDA Commissioner Dr. Natesh’s transfer cancelled?
Bengaluru, June 21, 2021 (www.justkannada.in): According to sources, the transfer orders of MUDA Commissioner Dr. Natesh have been canceled.
The State Government had issued orders transferring several K.A.S. (selection grade/ senior grade/ junior grade) officers on Saturday, June 19, 2021, stating that the transfers are being made keeping in mind the interest of the public and administration.
The list of officers who were transferred also included the name of MUDA commissioner Dr. Natesh, who is transferred to the Department of Animal Husbandry as Joint Director. He was replaced by M. Shivakumar.
But according to reliable sources, the government has canceled the transfer order and has asked Dr. Natesh to continue as MUDA Commissioner. It is said that the new orders will be issued soon.
Keywords: MUDA Commissioner/ Dr. Natesh/ transfer/ cancelled

key words : mysore-MUDA-commissioner-natesh-transfer-cancelled-re-appoint