ಕೊರೋನಾದಿಂದ ಸಾವು-ನೋವು ಹೆಚ್ಚಾಗಲು ಕಾಂಗ್ರೆಸ್ ಕಾರಣ- ಸಚಿವ ಸಿ.ಪಿ ಯೋಗೇಶ್ವರ್ ವಾಗ್ದಾಳಿ.

ರಾಮನಗರ,ಜೂನ್,21,2021(www.justkannada.in):  ಕೊರೋನಾದಿಂದ ಸಾವು ನೋವು ಹೆಚ್ಚಾಗಲು ಕಾಂಗ್ರೆಸ್ ಕಾರಣ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ವಾಗ್ದಾಳಿ ನಡೆಸಿದರು.jk

ಚನ್ನಪಟ್ಟಣದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್, ಕಾಂಗ್ರೆಸ್ ನಾಯಕರು ಪಾಪದ ಮೂಟೆ ಹೊರಬೇಕಿದೆ. ಕೋವಿಡ್ ಲಸಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿದರು. ಈಗ ಅವರ ಮನೆಯವರೇ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಈಗ ಜನರಿಗೆ ಎಲ್ಲವೂ ಗೊತ್ತಾಗಿದೆ. ಜನರು ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂದರು.

ಹೈಕಮಾಂಡ್ ಅರುಣ್ ಸಿಂಗ್ ವರದಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸಿ.ಪಿ ಯೋಗೇಶ್ವರ್, ನಾನು ರಾಜಕೀಯ ವಿಚಾರ ಮಾತನಾಡಲ್ಲ. ಅರುಣ್ ಸಿಂಗ್ ಜತೆ ಚರ್ಚಿಸಿದ್ದನ್ನು ಮಾತನಾಡಲ್ಲ. ವರದಿ ನೀಡಿರುವ ಬಗ್ಗೆ ಗೊತ್ತಿಲ್ಲ ಎಂದರು.

Key words: Congress — death – coronation – Minister -CP Yogeshwar