ಬಹುನಿರೀಕ್ಷಿತ ಮಲ್ಟಿ ಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಕಾಮಗಾರಿ ವೀಕ್ಷಿಸಿದ ಸಂಸದ ಪ್ರತಾಪ್ ಸಿಂಹ….

ಮೈಸೂರು, ಜನವರಿ,4,2021(www.justkannada.in):  ಮೈಸೂರಿನ ಕಡಕೋಳ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಮಲ್ಟಿ ಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಕಾಮಗಾರಿಯನ್ನ ಸಂಸದ ಪ್ರತಾಪ್ ಸಿಂಹ ವೀಕ್ಷಣೆ ಮಾಡಿದರು.jk-logo-justkannada-mysore

ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ವತಿಯಿಂದ ಕಡಕೋಳ ಕೈಗಾರಿಕಾ ಪ್ರದೇಶದಲ್ಲಿ 61 ಎಕರೆ ವಿಸ್ತೀರ್ಣದಲ್ಲಿ 100ಕೋಟಿ ವೆಚ್ಚದ ಮಲ್ಟಿ ಮಾಡೆಲ್ ಲಾಜೆಸ್ಟಿಕ್ ಪಾರ್ಕ್ ನಿರ್ಮಾಣವಾಗುತ್ತಿದ್ದು, ಕಾರ್ಖಾನೆ ಬಾಗಿಲಿಗೆ ಕಚ್ಚಾವಸ್ತುಗಳನ್ನು ತಲುಪಿಸಲು ಲಾಜೆಸ್ಟಿಕ್ ಪಾರ್ಕ್ ಉಪಯೋಗವಾಗಲಿದೆ.

ಮೈಸೂರು ಸೇರಿ ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ ಜಿಲ್ಲೆಗಳ ಕೈಗಾರಿಕೆಗಳಿಗೆ ಲಾಜೆಸ್ಟಿಕ್ ಪಾರ್ಕ್ ಅಗತ್ಯವಿದ್ದು,  ಕಾರ್ಖಾನೆಗಳಿಗೆ ಡೋರ್ ಟು ಡೋರ್ ರಫ್ತು ಹಾಗೂ ಆಮದು ವ್ಯವಸ್ಥೆ ಇದಾಗಿದೆ.

ಕರ್ನಾಟಕದಲ್ಲೇ ಮೊದಲ ಕಂಟೇನರ್ ಡಿಪೋ ಇದಾಗಿದ್ದು, ಅತ್ಯಾಧುನಿಕ ವೇರ್ ಹೌಸ್ ಗಳ ನಿರ್ಮಾಣ ಮಾಡಲಾಗುತ್ತಿದೆ. ರೈಲ್ವೆ ಮೂಲಕ ಬಂದರು ಮತ್ತು ವಿವಿಧ ರಾಜ್ಯಗಳ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ  ಕಲ್ಪಸಲಾಗುತ್ತದೆ. ಮುಂದಿನ ದಿನಗಳಲ್ಲಿ  ಮೈಸೂರು ವಿಮಾನ ನಿಲ್ದಾಣದ ಮೂಲಕವೂ ರಫ್ತು ಮಾಡಲು ಅವಕಾಶ ನೀಡಲಾಗುತ್ತದೆ.mysore- mp-Pratap simha- watched -long-awaited -Multi Model Logistic Park- works.

ಸದ್ಯ ರೈಲ್ವೆ, ರಸ್ತೆ ಸಂಪರ್ಕದ ಅಭಿವೃದ್ಧಿ ಜೊತೆಗೆ ಮುಂದಿನ 25 ವರ್ಷಗಳ ಗುರಿಯೊಂದಿಗೆ ಎಂ.ಎಂಎಲ್.ಪಿ ನಿರ್ಮಾಣವಾಗುತ್ತಿದ್ದು, 24 ತಿಂಗಳಲ್ಲಿ ಕಾಮಗಾರಿ ಸಂಪೂರ್ಣವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಸದ ಪ್ರತಾಪ್ ಸಿಂಹ ಕೆಐಎಡಿಬಿ ಅಧಿಕಾರಿಗಳೊಂದಿಗೆ ಕಾಮಗಾರಿ ವೀಕ್ಷಣೆ ಮಾಡಿದರು.

Key words: mysore- mp-Pratap simha- watched -long-awaited -Multi Model Logistic Park- works.