ಸಿದ್ದರಾಮಯ್ಯ, ಡಿ. ದೇವರಾಜ ಅರಸುರನ್ನ ಹೊಗಳಿದ ಹೆಚ್.ವಿಶ್ವನಾಥ್: ಬಾಂಬೆ ಟೀಮ್ ನಲ್ಲಿ ಬಿರುಕು ಕುರಿತು ಸ್ಪಷ್ಟನೆ ನೀಡಿದ್ದು ಹೀಗೆ…

ಮೈಸೂರು,ಅಕ್ಟೋಬರ್,21,2020(www.justkannada.in): ತಂಗಳು ಅನ್ನಕ್ಕೆ ಹೋಟೆಲ್ ನಿಂದ ಸಾಂಬರ್ ತಂದು ತಿಂದ ಸಿದ್ದರಾಮಯ್ಯ ಸಿಎಂ ಆದ್ರು. ದೇವರಾಜ್ ಅರಸುರಂತ ಜನನಾಯಕ ಒಳ್ಳೆ ಕೆಲಸ ಜನರಿಗೆ ಗೊತ್ತಾಗಲಿಲ್ಲ. ಇವೆಲ್ಲವು ಪುಸ್ತಕದಲ್ಲಿ ದಾಖಲಾಗಬೇಕು  ಹೀಗೆ ಹೇಳಿದ್ದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್..jk-logo-justkannada-logo

ಇಂದು ಮೈಸೂರು ನಗರ ಪತ್ರಕರ್ತರ ಭವನದಲ್ಲಿ ಮತಭಿಕ್ಷೆ ಪುಸ್ತಕ ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಮೈಸೂರು ರಾಜಕಾರಣದ ಬಗ್ಗೆ ದಾಖಲೆಯಾಗಬೇಕು. ಮೈಸೂರಿನ ಇಬ್ಬರು ನಾಯಕರು ಸಿಎಂ ಆಗಿದ್ದಾರೆ. ತಂಗಳು ಅನ್ನಕ್ಕೆ ಹೋಟೆಲ್ ನಿಂದ ಸಾಂಬರ್ ತಂದು ತಿಂದ ಸಿದ್ದರಾಮಯ್ಯ ಸಿಎಂ ಆದ್ರು.ದೇವರಾಜ್ ಅರಸುರಂತ ಜನನಾಯಕ ಒಳ್ಳೆ ಕೆಲಸ ಜನರಿಗೆ ಗೊತ್ತಾಗಲಿಲ್ಲ. ಇವೆಲ್ಲವು ಪುಸ್ತಕದಲ್ಲಿ ದಾಖಲಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ದೇವರಾಜ ಅರಸರನ್ನ ಹೊಗಳಿದರು.

ಬಾಂಬೆ ಟೀಮ್ ನಲ್ಲಿ ಬಿರುಕು ಉಂಟಾಗಿದೆ ಎಂಬ ವಿಚಾರವನ್ನು ಅಲ್ಲಗಳೆದ ಎಚ್. ವಿಶ್ವನಾಥ್. ನಮ್ಮಲ್ಲಿ ಯಾವುದೇ ಬಿರುಕುಂಟಾಗಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದಲೇ ಇದ್ದೇವೆ. ನಮ್ಮಲ್ಲಿ ಬಿರುಕುಂಟಾಗಿದೆ ಎಂಬುದು ಕೇವಲ ವದಂತಿ ಎಂದು ಸ್ಪಷ್ಟನೆ ನೀಡಿದರು.

ವಿಶ್ವನಾಥ್ ರನ್ನು ಕಳ್ಳ ಹಕ್ಕಿ ಎಂದು ಟೀಕಿಸಿರುವ ಶಾಸಕ ಸಾ. ರಾ. ಮಹೇಶ್ ಹೇಳಿಕೆಗೆ ಉತ್ತರಿಸಲು ನಿರಾಕರಿಸಿದ ಎಚ್. ವಿಶ್ವನಾಥ್. ಸಾ. ರಾ. ಮಹೇಶ್ ಕೊಚ್ಚೆಗುಂಡಿ ಎಂದು ಈಗಾಗಲೇ ಹೇಳಿದ್ದೇನೆ. ನಾನು ಶುಭ್ರವಾಗಿದ್ದೇನೆ, ಕೊಚ್ಚೆಗುಂಡಿಗೆ ಕಲ್ಲು ಹಾಕಿ ನನ್ನ ಮೇಲೆ ಕೊಚ್ಚೆ ಹಾರಿಸಿಕೊಳ್ಳುವುದಿಲ್ಲ ಎಂದು ನುಡಿದರು.mysore-mlc-h-vishwanath-praising-siddaramaiah-d-devaraja-aras

ಸಮ್ಮಿಶ್ರ ಸರ್ಕಾರದ ಪತನ ಆಯಾ ಪಕ್ಷದ ನಾಯಕರ ವಿರುದ್ಧ ನಡೆದ ದಂಗೆ…

ಸಮ್ಮಿಶ್ರ ಸರ್ಕಾರ ಪತನಕ್ಕೆ  ಕಾರಣ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಮ್ಮಿಶ್ರ ಸರ್ಕಾರದ ಪತನ ಆಯಾ ಪಕ್ಷದ ನಾಯಕರ ವಿರುದ್ಧ ನಡೆದ ದಂಗೆ.ಇದು ಪಕ್ಷಾಂತರ ಅಲ್ಲ. ಸಮ್ಮಿಶ್ರ ಸರ್ಕಾರದ ಪತನದ ಬಗ್ಗೆ ಸರಿಯಾಗಿ ವಿಶ್ಲೇಷಣೆ ಆಗಲಿಲ್ಲ. ಬಾಂಬೆ ಡೇಸ್ ಎಂದು ಪುಸ್ತಕ ಬರೆಯುತ್ತಿದ್ದೇನೆ. ಈ ಪುಸ್ತಕದ ಬಗ್ಗೆ ವಕೀಲರೊಬ್ಬರು ಪಿಐಎಲ್‌ ಹಾಕಿದ್ದಾರೆ. ಸಿಎಂ ಯಡಿಯೂರಪ್ಪ ಬ್ಲಾಕ್ ಮೇಲ್ ಮಾಡಲು ಪುಸ್ತಕ ಬರೆಯುತ್ತಿದ್ದಾರೆ ಎಂದು ಪಿಐಎಲ್ ಹಾಕಿದ್ದಾರೆ ಎಂದರು.

ಸಿಎಂ ಬದಲಾವಣೆ ವಿಚಾರ: ಯತ್ನಾಳ್ ಹೇಳಿಕೆ ಕೇವಲ ಹೇಳಿಕಯಷ್ಟೇ…

ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಯತ್ನಾಳ್ ಹೇಳಿಕೆ ಕೇವಲ ಹೇಳಿಕಯಷ್ಟೇ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಸಿಎಂ ಬದಲಾವಣೆ ವಿಚಾರ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ನೂರಕ್ಕೆ ನೂರು ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದಾರೆ. ಸದ್ಯಕ್ಕೆ ಬದಲಾವಣೆ ವಿಷಯ ಇಲ್ಲ. ಯತ್ನಾಳ್ ಅವರ ಅನಿಸಿಕೆ, ಬಿಜೆಪಿಯವರ ಅನಿಸಿಕೆಯಲ್ಲ. ಪಕ್ಷದ ನಿರ್ಧಾರಗಳೇ ಬೇರೆ, ವೈಯಕ್ತಿಕ ಅಭಿಪ್ರಾಯಗಳೇ ಬೇರೆ ಎಂದು ಸ್ಪಷ್ಟನೆ ನೀಡಿದರು.

Key words: mysore- MLC- H. Vishwanath- praising -Siddaramaiah- D.Devaraja aras