ಕೊರೋನಾ ಪಾಸಿಟಿವ್ : ಶಾಸಕ ಎಸ್.ಎ ರಾಮದಾಸ್ ಸ್ಪಷ್ಟನೆ….

ಮೈಸೂರು,ಏಪ್ರಿಲ್,15,2021(www.justkannada.in):  ಕೊರೋನಾ ಪಾಸಿಟವ್ ಆದರೂ ಸಹ ಕಾರ್ಯಕ್ರಮಗಳಲ್ಲಿ ಶಾಸಕ ಎಸ್.ಎ ರಾಮದಾಸ್ ಭಾಗಿಯಾಗಿದ್ದರು ಎಂಬ ಸುದ್ದಿ ಬಿತ್ತರವಾದ ಹಿನ್ನೆಲೆ ಈ ಕುರಿತು ಸ್ವತಃ ಶಾಸಕ ಎಸ್.ಎ ರಾಮದಾಸ್ ಸ್ಪಷ್ಟನೆ ನೀಡಿದ್ದಾರೆ.mysore-MLA-SA Ramadas-corona positive-clearify

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶಾಸಕ ಎಸ್.ಎ ರಾಮದಾಸ್, ನನಗೆ ಕೊರೊನಾ ಸೋಂಕು ದೃಢವಾಗಿರುವ ವಿಷಯದಲ್ಲಿ ಕೆಲವು ಪತ್ರಿಕೆಗಳಲ್ಲಿ ತಪ್ಪು ಸುದ್ದಿ ಬಿತ್ತರಿಸಲಾಗಿದ್ದು, ಕೆಲವು ಪತ್ರಿಕೆಗಳಲ್ಲಿ  ಕೆಲವು ದಿನಗಳ ಹಿಂದೆಯೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು, ಪರೀಕ್ಷೆ ಗೆ ಸ್ಯಾOಪಲ್ ಅನ್ನು ನೀಡಿ ವರದಿ ಬಂದಿಲ್ಲದೇ ಇದ್ದರೂ ಸಹ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದೆ ಎಂದು ಹಾಗೂ ನನಗೆ 2ನೇ ಬಾರಿ ಕೊರೋನಾ ದೃಢವಾಗಿದೆ ಎಂದು ತಪ್ಪು ವರದಿ ಬಿತ್ತರಿಸಲಾಗಿದೆ.

ದಿನಾಂಕ 14.04.2021 ರ ಬುಧವಾರದಂದು ಬೆಳಗ್ಗೆ ಜಿಲ್ಲಾಡಳಿತದ ವತಿಯಿಂದ ಅಂಬೇಡ್ಕರ್ ಜಯಂತಿ ಹಾಗೂ ಗುದ್ದಲಿ ಪೂಜೆ ಕಾಮಗಾರಿಯ ಭೂಮಿ ಪೂಜೆಯ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದು ಸರಿಯಷ್ಟೇ.. ತದನಂತರ ನನಗೆ ತಲೆ ನೋವು ಹಾಗೂ ಜ್ವರ ಬಂದಂತಾಗಿ ತಕ್ಷಣದಲ್ಲಿಯೇ ಮೈಸೂರು ಮಕ್ಕಳ ಕೂಟದಲ್ಲಿ  11.29 ನಿಮಿಷಕ್ಕೆ  RAT ಪರೀಕ್ಷೆಗೆ ಒಳಪಟ್ಟೆ. ನಂತರ  ಅದರಲ್ಲಿ  ಪಾಸಿಟಿವ್ ಎಂದು ದೃಢಪಟ್ಟಿದ್ದು, RTPCR ಪರೀಕ್ಷೆಗೆ ಸ್ಯಾOಪಲ್ ನೀಡಿ ತಕ್ಷಣದಲ್ಲಿಯೇ ವಿದ್ಯಾರಣ್ಯಪುರಂ ಕಚೇರಿಯಲ್ಲಿ ಐಸೋಲೇಶನ್ ಗೆ ಒಳಗಾದೆ ನಂತರ RTPCR ಪರೀಕ್ಷೆಯ ವರದಿಯು ಬಂದನಂತರ ಆಸ್ಪತ್ರೆಗೆ ದಾಖಲಾದೆ ಎಂದು ಶಾಸಕ ರಾಮದಾಸ್ ಸ್ಪಷ್ಟನೆ ನೀಡಿದ್ದಾರೆ.mysore-MLA-SA Ramadas-corona positive-clearify

ಹಾಗೆಯೇ ಇದೀಗ ನಾನು ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದೇನೆ. ಆತಂಕ ಪಡುವ ಅಗತ್ಯವಿಲ್ಲ, ನನ್ನ ಆರೋಗ್ಯ ಸ್ಥಿರವಾಗಿದೆ.  ಮೇಲೆ ತಿಳಿಸಿರುವ ಹಾಗೆ ನಾನು ಕೊರೊನಾ ಪರೀಕ್ಷೆ ಮಾಡಿಸಿದ್ದೇ ದಿನಾಂಕ 14.04.2021ರ ಬೆಳಗ್ಗೆ 11.29ಕ್ಕೆ  ಹಾಗೂ ಇದೇ ಮೊದಲ ಬಾರಿಗೆ ನನಗೆ ಕೊರೊನಾ ದೃಢಪಟ್ಟಿದ್ದು ಎಂದು ಈ ಮೂಲಕ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದ್ದಾರೆ.

Key words: mysore-MLA-SA Ramadas-corona positive-clearify