ಬರ ಪರಿಹಾರ ವಿಳಂಬ: ಕೇಂದ್ರ ವಿರುದ್ದ ‘ಸೀಟಿ’ ಹೊಡೆದ ರವಿ….

Promotion

ಬೆಂಗಳೂರು,ಅ,3,2019(www.justkannada.in): ಕೇಂದ್ರದಿಂದ ನೆರೆ ಪರಿಹಾರ ವಿಳಂಬ ವಿಚಾರ ಸಂಬಂಧ, ನಾವು ವಿಪಕ್ಷ ಸ್ಥಾನದಲ್ಲಿ ಇದ್ದಿದ್ರೆ ಖಂಡಿತ ಸುಮ್ಮನೆ ಇರ್ತಾ ಇರಲಿಲ್ಲ ನಿಜ . ಈಗ ಆಡಳಿತದಲ್ಲಿದ್ದೂ  ನೆರೆ ಪರಿಹಾರ ಬರದೆ ಇದ್ರೆ ಈಗಲೂ ಸುಮ್ಮನೆ ಇರಲ್ಲ. ನಮಗೆ ಅನ್ಯಾಯ ಆಗುವುದಿಲ್ಲ.  ಅನ್ಯಾಯ ಆದ್ರೆ ಮೊದಲು ಧ್ವನಿ ಎತ್ತುವವನೇ ನಾನು ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ ರವಿ ಹೇಳಿದರು.

ಕೇಂದ್ರ ಸರ್ಕಾರ ನೆರೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ ರವಿ, ನೆರೆ ಪರಿಹಾರದಲ್ಲಿ ತುರ್ತು ಪರಿಹಾರ ನೀಡುವುದನ್ನ ಇತ್ತೀಚೆಗೆ ನಿಲ್ಲಿಸಿದ್ದಾರೆ . ಕರ್ನಾಟಕದ ಪಾಲು ಸಿಕ್ಕೆ ಸಿಗುತ್ತೆ. ನಮ್ಮ ಭಾವನೆ ವ್ಯವಹಾರವನ್ನು ಮೀರಿದ್ದು. ಹತ್ತು ವರ್ಷದಲ್ಲಿ ಕೇಂದ್ರ ಹೇಗೆ ಮತ್ತು ಯಾವಾಗ ಪರಿಹಾರ ನೀಡಿದೆ ಎನ್ನುವುದನ್ನ ತಿಳಿದುಕೊಳ್ಳುತ್ತೇನೆ. ನನ್ನ ಸ್ಟೇಟ್ ಮೆಂಟ್ ನಲ್ಲಿ ತಪ್ಪಿದ್ರೆ ನಾನು ಅದನ್ನು ಸರಿ ಮಾಡಿಕೊಳ್ತೇನೆ. ಪರಿಹಾರ ಬಂದೆ ಬರುತ್ತದೆ. ಆದರೆ ಪರಿಹಾರ ಯಾಕೆ ತಡವಾಗ್ತಿದೆ ಎಂದು ನಾನು ತಿಳಿದುಕೊಳ್ತೇನೆ ಎಂದು ತಿಳಿಸಿದರು.

ಕನ್ನಡ ಅತ್ಯುನ್ನತ ಕೇಂದ್ರದ ಚಟುವಟಿಕೆಗಳ ಕುರಿತು ಕನ್ನಡ‌ ಮತ್ತು ಸಂಸ್ಕೃತಿ‌‌ ಸಚಿವ ಸಿಟಿ ರವಿ ನೇತೃತ್ವದಲ್ಲಿ ಸಾಹಿತಿ ಹಾಗೂ ಚಿಂತಕರ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ  ಸಚಿವ ಸಿ,ಟಿ ರವಿ, 2008ರಲ್ಲಿ ಕೇಂದ್ರ‌ ಸರ್ಕಾರ  ಶಾಸ್ತ್ರೀಯ ಸ್ಥಾನಮಾನ‌ ನೀಡಿತ್ತು. ಸಿಎಐಎಲ್ ನಿರ್ದೇನದಂತೆ ಸೊಸೈಟಿ ರಿಜಿಸ್ಟರ್ ಮಾಡಬೇಕು. ಆಡಳಿತ, ಶೈಕ್ಷಣಿಕ, ಆರ್ಥಿಕ ವಿಭಾಗ ರಚನೆ ಮಾಡಬೇಕು. ಮೈಸೂರಿನಲ್ಲಿ ಸ್ವಲ್ಪ ಜಾಗ ಇದೆ . ಬೆಂಗಳೂರು ಕಲಾಗ್ರಾಮದಲ್ಲಿ ಮೂರು ಎಕರೆ ಜಾಗ ಇದೆ. ತಮಿಳುನಾಡು ಈಗಾಗಲೇ ಕಟ್ಟಡ ನಿರ್ಮಾಣ ಮಾಡಿದೆ. ನಮಗಿಂತ ಅವರು ಮುಂದೆ ಇದಾರೆ. ಕೇಂದ್ರದಿಂದ 10 ಕೋಟಿ ನಮಗೆ ಅನುದಾನ ಸಿಕ್ಕಿದೆ. ನಮ್ಮಲ್ಲಿ ನಿಧಾನಗತಿಯಲ್ಲಿ ಬಾಲಗ್ರಹ ಹಿಡಿದಿರುವ ಯೋಜನೆ ಚುರುಕು ಮಾಡಲು ಸರ್ಕಾರ ಸಿದ್ದವಿದೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ‌ ಆದಷ್ಟು ಶೀಘ್ರವಾಗಿ ಕನ್ನಡ ಅತ್ಯುನ್ನತ ಕೇಂದ್ರದ ಚಟುವಟಿಕೆಗಳನ್ನು ಆರಂಭ ಮಾಡುತ್ತೇವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ  ಹಿಂದಿ‌ ಏರಿಕೆ ಮಾಡಿಲ್ಲ…

ಕೇಂದ್ರ ಸರ್ಕಾರದಿಂದ ಹಿಂದಿ ಹೇರಿಕೆ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ.ಟಿ ರವಿ,  ಕೇಂದ್ರ ಸರ್ಕಾರ ಹಿಂದಿ‌ ಏರಿಕೆ ಮಾಡಿಲ್ಲ. ನಾವು ಪ್ರಾದೇಶಿಕ ಭಾಷೆಗೆ ಹೆಚ್ಚು ಒತ್ತು ನೀಡಿದ್ದೇವೆ. ಇವತ್ತು ಯಾವುದೇ ವಿರೋಧವಿಲ್ಲದೇ ಇಂಗ್ಲೀಷ್ ಅಂತರಾಷ್ಟ್ರೀಯ ಭಾಷೆ ಅಂತ ಒಪ್ಪಿಕೊಂಡಿದ್ದೇವೆ . ಕನ್ನಡಕ್ಕೆ ಕನ್ನಡವೇ ಸಾರ್ವಭೌಮ ಎಂದು ನುಡಿದರು.

ಹಿಂದಿ ಸಂಪರ್ಕ ಭಾಷೆಯಾಗಿ ರಾಷ್ಟ್ರೀಯ ಭಾಷೆಯಾಗಬೇಕು ಅಂತಾ ಕೇಂದ್ರದ ಸರ್ಕಾರ ಹೇಳಿದ್ದು. ನಾವು ನಮ್ಮ ತನ ಕಳೆದುಕೊಳ್ಳಬೇಕು ಅಂತಲ್ಲ. ರಾಷ್ಟ್ರೀಯ ಭಾಷೆ ಹಿಂದಿಯಾಗಬೇಕು ಅಂತಾ ಇಂದಿರಾಗಾಂಧಿಯವರು ಅನುದಾನ ನೀಡಿದ್ರು. ಹಿಂದಿ ಹೇರಬೇಕು ಅನ್ನೋದಲ್ಲ. ಕನ್ನಡದ ಮೇಲೆ ತಮಿಳು ಮೇಲೆ ಹೇರಬೇಕು ಅಂತಲ್ಲ. ಭೌಗೋಳಿಕವಾಗಿ ಸಂಪರ್ಕ ಭಾಷೆ ಬೇಕು. ಮಾನಸಿಕ ಹಿಂಜರಿಕೆಯಿಂದ ಹಿಂದಿ‌ ಕಲಿಕೆ ಬೇಡ ಅನ್ನೋದು‌ ಸರಿ ಅಲ್ಲ ಎಂದು ಆಕ್ಷೇಪಿಸಿದರು.

ಭೌಗೋಳಿಕ ಭಾಷೆಯಯಾಗಿ ಹಿಂದಿ‌ ಕಲಿತರೂ ತಪ್ಪಿಲ್ಲ. ಇಂಗ್ಲೀಷ್ ಕಲಿತರು ತಪ್ಪಿಲ್ಲ, ಚೀನಾ ಭಾಷೆ ಕಲಿತರು ತಪ್ಪಿಲ್ಲ. ಭೌಗೋಳಿಕ ಸಂಪರ್ಕ ಭಾಷೆಗಳ ಕಲಿಕೆ ಅಗತ್ಯವಿದೆ. ಭಾಷೆ ಕಲಿತರೇ ಉದ್ದಾರವಾಗಿದ್ದಾರಾ ಅಂದ್ರೆ ಅದಕ್ಕೆ ಸಮೀಕ್ಷೆ ಮಾಡಬೇಕಾಗುತ್ತದೆ. ಪ್ರಾದೇಶಿಕ ಭಾಷೆಗೆ ಧಕ್ಕೆ ಬಂದರೆ ನಾವು ಕೂಡ ಒಪ್ಪಲ್ಲ ಎಂದು ಸಚಿವ ಸಿ.ಟಿ ರವಿ ಹೇಳಿದರು.

ಬಿಜೆಪಿ ನಾಯಕರು ನಪುಂಷಕರು ಎಂಬ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರ ಕುರಿತು ಮಾತನಾಡಿದ ಸಚಿವ ಸಿಟಿ ರವಿ, ಸಿಎಂ ಇಬ್ರಾಹಿಂ. ಪೊಲಿಟಿಕಲ್ ಜೋಕರ್, ರಾಜಕೀಯ ವಿದೂಷಕ. ರಾಮಕೃಷ್ಣ ಹೆಗ್ಗಡೆ, ಗುಂಡೂರಾವ್ ಬಗ್ಗೆ  ಅವರು ಬಳಸಿದ ಪ್ರೇಮ, ಭಾಷೆ ಗೊತ್ತಿದೆ. ಇಂದಿರಾ ಗಾಂಧಿಯವರ ಬಗ್ಗೆ  ಇಬ್ರಾಹಿಂ ಏನು ಮಾತಾಡಿದ್ರು ಅಂತಾ ಗೊತ್ತಿದೆ. ಅದನ್ನ ನಾನು ಹೇಳಲ್ಲ. ಅವರೊಬ್ಬ ರಾಜಕೀಯ ವಿದೂಷಕ ಎಂದು ಟೀಕಿಸಿದರು.

Key words: mysore- minister- CT Ravi-flood relief- central government