ಮೈಸೂರು ಮೇಯರ್ ಚುನಾವಣೆ ಹಿನ್ನೆಲೆ: ಶಾಸಕ ಸಾ.ರಾ ಮಹೇಶ್ ನೇತೃತ್ವದಲ್ಲಿ  ಜೆಡಿಎಸ್ ಸಭೆ: ಮಾಜಿ ಸಚಿವ ಜಿ.ಟಿಡಿ ಗೈರು…

Promotion

ಮೈಸೂರು,ಜ,13,2020(www.justkannada.in):   ಜನವರಿ 18 ರಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಹಿನ್ನಲೆ. ಜೆಡಿಎಸ್‌ನಲ್ಲಿ ಮೇಯರ್ ಅಯ್ಕೆ ಕಸರತ್ತು ಜೋರಾಗಿದೆ.

ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ಮೇಯರ್ ಹೌಸ್ ನಲ್ಲಿ ಜೆಡಿಎಸ್ ಸಭೆ ನಡೆಯುತ್ತಿದ್ದು, ಸಭೆಯಲ್ಲಿ  ಜೆಡಿಎಸ್ ಮುಖಂಡ ಪ್ರೊ.ರಂಗಪ್ಪ, ಅಬ್ದುಲ್ಲಾ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಮಾಜಿ ಮೇಯರ್ ರವಿಕುಮಾರ್ ಭಾಗಿಯಾಗಿದ್ದಾರೆ.

ಮೇಯರ್ ಆಕಾಂಕ್ಷಿಗಳ ಜೊತೆ  ಜೆಡಿಎಸ್ ಶಾಸಕರು ಮತ್ತು  18 ಕಾರ್ಪೋರೇಟರ್‌ಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಮೇಯರ್ ಆಕಾಂಕ್ಷಿಗಳಾದ ನಮ್ರತಾ ರಮೇಶ್ , ನಿರ್ಮಲಾ ಹರೀಶ್, ತಸ್ಲೀಮ್ ಹಾಗೂ ರೇಷ್ಮಾಭಾನು ನಡುವೆ  ತೀವ್ರ ಪೈಪೋಟಿ ಉಂಟಾಗಿದ್ದು, ಕಾರ್ಪೋರೇಟರ್ ಗಳ ಅಭಿಪ್ರಾಯ ಸಂಗ್ರಹಿಸಿ ಮೇಯರ್ ಆಯ್ಕೆ ಮಾಡಲು ಜೆಡಿಎಸ್ ಮುಂದಾಗಿದೆ.

ಶಾಸಕ ಸಾ.ರಾ ಮಹೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಮೆಯರ್ ಆಯ್ಕೆ ಸಭೆಗೆ ಶಾಸಕ ಜಿಟಿ.ದೇವೇಗೌಡ ಗೈರಾಗಿದ್ದಾರೆ. ಮೇಯರ್ ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಹಾಗೂ ಪಕ್ಷ ಸೂಚಿಸಿದ ಅಭ್ಯರ್ಥಿಗೆ ಮತ ಹಾಕುವುದಾಗಿ ಈಗಾಗಲೇ ಶಾಸಕ ಜಿ.ಟಿ ದೇವೇಗೌಡ ತಿಳಿಸಿದ್ದಾರೆ.

Key words: Mysore -Mayor Election -JDS -meeting – MLA sa.ra Mahesh