ವಿನೂತನ ಪ್ರಯತ್ನ: ಮೈಸೂರಿನಲ್ಲಿ ಪ್ರಸಾದದ ಬದಲು ಮಾಸ್ಕ್ ವಿತರಣೆ…

ಮೈಸೂರು,ಮಾ,18,2020(www.justkannada.in): ಮೈಸೂರಿನಲ್ಲಿ ಕರೋನ ವೈರಸ್  ಭೀತಿ ಹಾಗೂ ಹಕ್ಕಿಜ್ವರದ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದ್ದು ಮೈಸೂರಿನ ಅವಧೂತ ದತ್ತ ಪೀಠದಲ್ಲಿ ಪ್ರಸಾದದ ಬದಲು ಮಾಸ್ಕ್ ವಿತರಣೆ ಮಾಡುವ ಮೂಲಕ ವಿನೂತನ ಪ್ರಯತ್ನಕ್ಕೆ ಕೈ ಹಾಕಲಾಗಿದೆ.

ಅವಧೂತ ದತ್ತ ಪೀಠದ ಶ್ರೀಗಳಾದ ಸಚ್ಚಿದಾನಂದ ಶ್ರೀಗಳು ಸ್ವತಃ ಮಾಸ್ಕ್ ಧರಿಸಿ ಭಕ್ತರಿಗೆ ದರ್ಶನ, ಆಶಿರ್ವಾದ ನೀಡುತ್ತಿದ್ದಾರೆ. ಜತೆಗೆ ಆಶ್ರಮಕ್ಕೆ ಬಂದ ಭಕ್ತರಿಗೆ ಪ್ರಸಾದದ ಬದಲು ಮಾಸ್ಕ್ ಗಳನ್ನ ವಿತರಣೆ ಮಾಡಲಾಗುತ್ತಿದೆ.  ಕರೋನ ವೈರಸ್  ಭೀತಿ ಹಾಗೂ ಹಕ್ಕಿಜ್ವರದ ಹಿನ್ನೆಲೆಯಲ್ಲಿ ಜನಜಾಗೃತಿಗಾಗಿ ಈ ಕ್ರಮ ಹಮ್ಮಿಕೊಳ್ಳಲಾಗಿದೆ.

ಭಕ್ತಾದಿಗಳು ಹಾಗೂ ಆಶ್ರಮದ ಸಿಬ್ಬಂದಿಗೆ ಗಣಪತಿ ಶ್ರೀಗಳು  ಮಾಸ್ಕ್ ವಿತರಣೆ ಮಾಡುತ್ತಿದ್ದು  ಭಕ್ತರು ಸರತಿ ಸಾಲಿನಲ್ಲಿ ನಿಂತು ಮಾಸ್ಕ್ ಸ್ವೀಕರಿಸುತ್ತಿದ್ದಾರೆ. ಈ ಮೂಲಕ ಕೊರೋನಾ ವೈರಸ್ ತಡೆಗಟ್ಟಲು ಜಾಗೃತಿ ಮೂಡಿಸಲಾಗುತ್ತಿದೆ.

Key words: mysore- Mask -Distribution -instead –Prasada- avdootha data peeta