ಪ್ರಧಾನಿ ಮೋದಿ ವಿರುದ್ಧ ಟೀಕೆ : ಸುದ್ದಿಯ ನೈಜ್ಯತೆಗೆ ‘ ಜಸ್ಟ್ ಕನ್ನಡ ‘ ಉಲ್ಲೇಖಿಸಿದ ‘ ಇಂಡಿಯಾ ಟುಡೆ ‘.

Promotion

 

ಮೈಸೂರು, ಜು.29, 2020 : (www.justkannada.in news) : ನೇಕಾರ ನೇಣಿಗೆ ಶರಣಾದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಸಲುವಾಗಿ ವೈರಲ್ ಆಗಿದ್ದ ‘ಫೇಕ್ ನ್ಯೂಸ್’ ಗೆ ಸಂಬಂಧಿಸಿದಂತೆ ‘ಇಂಡಿಯಾ ಟುಡೆ’ ಮ್ಯಾಗಜೀನ್, ಫ್ಯಾಕ್ಟ್ ಚೆಕ್ ಮಾಡಿ ಸತ್ಯಾಂಶ ಬಯಲು ಮಾಡಿದೆ.

ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ಸಾಲದ ಶೂಲಕ್ಕೆ ಸಿಲುಕಿ ನೇಕಾರ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕೆಲ ರಾಷ್ಟ್ರೀಯ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಕಳೆದ ಭಾನುವಾರ ಸುದ್ಧಿ ಪ್ರಕಟವಾಗಿತ್ತು.

 mysore-karnataka-justkannada-fact.chek-tindia-today-weaver-suicide
ರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆದ ಫೋಟೋ.

ಈ ಘಟನೆಗೆ ಸಂಬಂಧಿಸಿದಂತೆ ನೆಟಿಜನ್ಸ್ ಗಳು ಪ್ರಧಾನಿ ಮೋದಿ ಅವರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ಸ್ವದೇಶಿ ಬಗ್ಗೆ ಮಾತನಾಡುತ್ತೀರಿ, ಆದರೆ ನಿಮ್ಮ ಕ್ಷೇತ್ರದಲ್ಲೇ ನೇಕಾರ ನೇಣಿಗೆ ಶರಣಾಗಿದ್ದಾರೆ ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದ್ದರು.
ಎಷ್ಟರಮಟ್ಟಿಗೆ ಅಂದ್ರೆ, ಈ ಘಟನೆಗೆ ಸಂಬಂಧಿಸಿದಂತೆ ವಾರಣಾಸಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮ ಖುದ್ದು ಸ್ಪಷ್ಟನೆ ನೀಡಿದರು. ಸೋಷಿಯಲ್ ಮಿಡಿಯಾದಲ್ಲಿ ಪ್ರಕಟವಾಗಿರುವ ಫೋಟೋ ಹಾಗೂ ಸುದ್ದಿ ವಾರಣಾಸಿ ಜಿಲ್ಲೆಗೆ ಸಂಬಂಧಿಸಿದ್ದಲ್ಲ ಎಂದು ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ‘ ಇಂಡಿಯಾ ಟುಡೇ’ ಮ್ಯಾಗಜೀನ್, ವೈರಲ್ ಆದ ಫೋಟೋ ಹಾಗೂ ಸುದ್ದಿಯ ಸತ್ಯಾಸತ್ಯತೆ ತಿಳಿಯಲು ಅದರ ಬೆನ್ನತ್ತಿತು.

 

mysore-karnataka-justkannada-fact.chek-tindia-today-weaver-suicide

ಜಸ್ಟ್ ಕನ್ನಡಗೆ ಕರೆ :

ಈ ಸುದ್ಧಿಯ ನೈಜ್ಯತೆ ಫಾಲೋಅಪ್ ಮಾಡುವ ಹೊಣೆ ಹೊತ್ತಿದ್ದ ‘ ಇಂಡಿಯಾ ಟುಡೆ ‘ ಪತ್ರಿಕೆ ದಿಲ್ಲಿ ಪತ್ರಕರ್ತೆ Jyoti Dwivedi, ನೇರವಾಗಿ ಕರೆ ಮಾಡಿದ್ದು ಜಸ್ಟ್ ಕನ್ನಡ ಡಾಟ್ ಇನ್ ಗೆ.

ವೈರಲ್ ಆದ ನೇಕಾರ ನೇಣಿಗೆ ಶರಣಾದ ಸುದ್ಧಿ ಹಾಗೂ ಫೋಟೋ ಬೆನ್ನತ್ತಿದ್ದ ಈ ಪತ್ರಕರ್ತೆಗೆ, ನೈಜ್ಯ ಸುದ್ಧಿ ಜಸ್ಟ್ ಕನ್ನಡ ಡಾಟ್ ಇನ್ ನಲ್ಲಿ ಪ್ರಕಟಗೊಂಡಿರುವುದು ಸ್ಪಷ್ಟವಾಯಿತು. ಈ ಕಾರಣಕ್ಕೆ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿ ವೈರಲ್ ಆದ ಫೋಟೋ, ಸುದ್ದಿಯ ಬಗೆಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.

jk-logo-justkannada-logo

ಈ ಘಟನೆ ನಡೆದಿರುವುದು ಪ್ರಧಾನಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿಯಲ್ಲ. ಬದಲಿಗೆ ಇದು ಕರ್ನಾಟಕದ ಬೆಂಗಳೂರಿನಲ್ಲಿ ನಡೆದಿರುವ ಘಟನೆ ಎಂದು ಫ್ಯಾಕ್ಟ್ ಚೆಕ್ ಮೂಲಕ ವೈರಲ್ ಆದ ಸುದ್ಧಿಯ ಅಸಲಿಯತ್ತು ಬಹಿರಂಗ ಪಡಿಸಿದರು. ಇದಕ್ಕೆ ಸಂಬಂಧಿಸಿದ ವರದಿಯಲ್ಲಿ ಘಟನೆಗೆ ಸಂಬಂಧಿಸಿದ ನೈಜ್ಯ ಸುದ್ಧಿ ‘ ಜಸ್ಟ್ ಕನ್ನಡ ಡಾಟ್ ಇನ್ ‘ ನಲ್ಲಿ ಪ್ರಕಟಗೊಂಡಿರುವುದನ್ನು ಉಲ್ಲೇಖಿಸಿರುವುದು ವಿಶೇಷ.

 

https://www.indiatoday.in/fact-check/story/fact-check-weaver-s-suicide-wrongly-linked-to-pm-modi-and-his-constituency-1705382-2020-07-28

ooooooo

key words : mysore-karnataka-justkannada-fact.chek-India-today-weaver-suicide