ಲಕ್ಷ್ಮಣ್ ಸವದಿ ದೆಹಲಿಗೆ ಹೋಗಿದ್ದು ನನಗೆ ಗೊತ್ತಿಲ್ಲ:  ಮೂರು ವರ್ಷವೂ ಬಿಎಸ್ ವೈ ಅವರೇ ಸಿಎಂ-ಮೈಸೂರಿನಲ್ಲಿ ಮುರುಗೇಶ್ ನಿರಾಣಿ ಹೇಳಿಕೆ…

ಮೈಸೂರು,ಜು,29,2020(www.justkannada.in):  ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆ ವಿಚಾರ ಸದ್ದು ಮಾಡುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ  ಮಾಜಿ ಸಚಿವ ಮುರುಗೇಶ್ ನಿರಾಣಿ, ರಾಜ್ಯರಾಜಕಾರಣದಲ್ಲಿ ಏನಾಗ್ತಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಮುಂದಿನ ಮೂರು ವರ್ಷ ಬಿಎಸ್ ಯಡಿಯೂರಪ್ಪ ಅವರೇ ಸಿಎಂ ಆಗಿರ್ತಾರೆ ಎಂದು ತಿಳಿಸಿದರು.

ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಬಳಿಕ ಮಾತನಾಡಿದ  ಮಾಜಿ ಸಚಿವ ಮುರುಗೇಶ್ ನಿರಾಣಿ, ಆಗಸ್ಟ್ 11ಕ್ಕೆ ಕಾರ್ಖಾನೆ ಫುನರಾರಂಭ ಕಾರ್ಯಕ್ರಮ ಇದೆ. ಕೊರೊನಾ ಹಿನ್ನೆಲೆ ಸರಳವಾಗಿ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಶ್ರೀಗಳಿಗೆ ಆಹ್ವಾನ ಮಾಡಿದ್ದೇನೆ ಎಂದು ತಿಳಿಸಿದರು.

ಹಾಗೆಯೇಮೈ ಶುಗರ್ ಕಾರ್ಖಾನೆ ಮೇಲೆ ನಿರಾಣಿ ಕಣ್ಣಿದೆ ಎಂಬ ಚರ್ಚೆ ವಿಚಾರ ಕುರಿತು ಮಾತನಾಡಿದ ಮುರುಗೇಶ್ ನಿರಾಣಿ, ನಾನೊಬ್ಬ ಕೈಗಾರಿಕೋದ್ಯಮಿ ಇದ್ದೇನೆ. ಟೆಂಡರ್‌ನ ಬಿಡ್ ವೇಳೆ ನನ್ನ ಬಳಿ ಅಷ್ಟು ಹಣ ಇದ್ದರೆ ನಾನು ಬಿಡ್‌ನಲ್ಲಿ ಭಾಗಿಯಾಗುತ್ತೇನೆ. ಗ್ಲೋಬಲ್‌ನಲ್ಲಿ ಬಿಡ್‌ಗೆ ಕೆಲವೊಂದು ನಿಯಮ ಇರುತ್ತೆ. ಇದರಲ್ಲಿ ಯಾರು ಬೇಕಾದರು ಹೋಗಿ‌ ಭಾಗಿಯಾಬಹುದು. ಇದರಲ್ಲಿ ಯಾರ ಹಸ್ತಕ್ಷೇಪವು ನಡೆಯಲ್ಲ. ಫೈನಾನ್ಸಿಯಲ್ ನಾನು ಚೆನ್ನಾಗಿದ್ದರೆ ಬಿಡ್ ಮಾಡುತ್ತೇನೆ’ ಇಲ್ಲವಾದರೆ ಇಲ್ಲ. ನಮ್ಮ ಪಕ್ಷದಲ್ಲಿ ಯಾರು ಇದಕ್ಕೆ ವಿರೋಧ ಮಾಡ್ತಿಲ್ಲ ಎಂದು ಮುರುಗೇಶ್ ನಿರಾಣಿ ತಿಳಿಸಿದರು.

ನಿರಾಣಿ ಒಬ್ಬರು ಕೈಗಾರಿಕೋದ್ಯಮಿಯಾಗಿದ್ದಾರೆ ಎಂದುನಮ್ಮ 224 ಶಾಸಕರಿಗೂ ಗೊತ್ತಿದೆ. ಸ್ಥಳೀಯ ರೈತರು’ ಜನರೆಲ್ಲರು ಈಗಾಗಲೇ ಕಾರ್ಖಾನೆ ನೋಡಿದ್ದಾರೆ. ಕಾರ್ಖಾನೆ ಪ್ರಾರಂಭಕ್ಕೆ ಜೆಡಿಎಸ್’ ಕಾಂಗ್ರೆಸ್ ನಾಯಕರು ಸಹಕಾರ ನೀಡಿದ್ದಾರೆ. ಮಾಜಿ ಸಚಿವ ಪುಟ್ಟರಾಜು ನನ್ನನ್ನ ತಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಕಾರ್ಖಾನೆ ಉದ್ಘಾಟನೆಗೆ ಯಾವುದೇ ಸಮಸ್ಯೆಯು ಇಲ್ಲ ಎಂಧು ಮುರುಗೇಶ್ ನಿರಾಣಿ ಹೇಳಿದರು.

ದೆಹಲಿಗೆ ಡಿಸಿಎಂ ಲಕ್ಷ್ಮಣ್ ಸವದಿ ತೆರಳಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಮುರುಗೇಶ್ ನಿರಾಣಿ, ಲಕ್ಷ್ಮಣ್ ಸವದಿ ದೆಹಲಿಗೆ ಹೋಗಿದ್ದು ನನಗೆ ಗೊತ್ತಿಲ್ಲ. ನಾನು ಬೆಳಗಿನಿಂದ ರಾತ್ರಿವರೆಗೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದೆ. ರಾಜ್ಯ ರಾಜಕಾರಣದಲ್ಲಿ ಏನಾಗುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಇಂದು ಬೆಂಗಳೂರಿಗೆ ಹೋಗಿ ಮಾಹಿತಿ ಪಡೆಯುತ್ತೇನೆ. ಆದರೆ ಮೂರು ವರ್ಷವೂ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರ್ತಾರೆ ಎಂದು ಸ್ಪಷ್ಟನೆ ನೀಡಿದರು.

ನಾನು ರಾಜಕಾರಣದಲ್ಲಿ ಬಹಳ ಚಿಕ್ಕವ. ಕಾರ್ಖಾನೆ ಬಗ್ಗೆ ಕೇಳಿದರೆ ಮಾತ್ರ ನಾನು ಹೇಳ್ತಿನಿ. ರಾಜಕಾರಣದ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ನಾನು ಮಂತ್ರಿ ಆಗಿಲ್ಲ ಅಂದ್ರು ಮಂತ್ರಿಗಿಂತ ಚೆನ್ನಾಗಿದ್ದೇನೆ. 5ಸಾವಿರ ಕೋಟಿ ಟರ್ನ್ ಓವರ್ ಇದೆ‌. ಮುಂದಿನ ಬಾರಿಯ ಚುನಾವಣೆಗೆ ಟಿಕೆಟ್ ಕೊಡದಿದ್ರು. ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.

Key words: mysore- suttur math-Murugesh Nirani- Laxman Savadi – Delhi.