ಸೆ.7 ರಂದು ಕಬಿನಿ ಜಲಾಶಯಕ್ಕೆ ಸಿಎಂ ಬಿಎಸ್ ವೈರಿಂದ ಬಾಗೀನ ಅರ್ಪಣೆ ಕಾರ್ಯಕ್ರಮ…

Promotion

ಮೈಸೂರು, ಸೆ, 4,2019(www.justkannada.in): ರಾಜ್ಯದಲ್ಲಿ ಮೊದಲು ತುಂಬುವ ಜಲಾಶಯ ಎಂಬ ಹೆಸರಿಗೆ ಪಾತ್ರವಾಗಿರುವ ಎಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಅಂತು ಇಂತೂ ಬಾಗೀನ ಭಾಗ್ಯ ಸಿಕ್ಕಿದೆ.

ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸೊ ಕಾರ್ಯಕ್ರಮ ನಿಗದಿಯಾಗಿದೆ. ಸೆಪ್ಟೆಂಬರ್ 7 ಕ್ಕೆ ಬಾಗೀನ ಅರ್ಪಣೆ  ಕಾರ್ಯಕ್ರಮ ನಿಗದಿಯಾಗಿದೆ. ಅಂದು ಶನಿವಾರ ಬೆಳಗ್ಗೆ 11 ಗಂಟೆಗೆ ಸಿಎಂ ಬಿಎಸ್ ಯಡಿಯೂರಪ್ಪ  ಕಬಿನಿ ಜಲಾಶಯಕ್ಕೆ ಬಾಗೀನ ಅರ್ಪಣೆ ಮಾಡಲಿದ್ದಾರೆ. ಈ ವೇಳೆ  ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ, ಸಂಸದ ಪ್ರತಾಪ್ ಸಿಂಹ , ಶಾಸಕ ಅನೀಲ್ ಚಿಕ್ಕಮಾದು  ಸಾಥ್ ನೀಡಲಿದ್ದಾರೆ.

ಕಬಿನಿ ತುಂಬಿ ಒಂದು ತಿಂಗಳಾಗಿದ್ದರೂ ಬಾಗಿನ ಅರ್ಪಿಸಿರಲಿಲ್ಲ.  ಸಂಪೂರ್ಣ ಭರ್ತಿಯಾಗಿರುವ ಕೆ ಆರ್ ಎಸ್ ಜಲಾಶಯಕ್ಕೆ ಮಾತ್ರ ಸಿಎಂ ಯಡಿಯೂರಪ್ಪ ಬಾಗಿನ ಅರ್ಪಿಸಿದ್ದರು. ಇದೀಗ ಕಬಿನಿ ಜಲಾಶಯಕ್ಕೂ ಬಾಗೀನ ಅರ್ಪಣೆ ಕಾರ್ಯಕ್ರಮ ನಿಗದಿಯಾಗಿದೆ.

Key words: mysore-kabini dam- worship- program CM BS yeddyurappa- sep17