ಎಲ್ಲೇ ಹೋಗಿ ಏನೇ ಮಾಡಿ ನಿಮ್ಮ ತಾಯಿನಾಡಿಗಾಗಿ ದುಡಿಯಿರಿ- ವಿದ್ಯಾರ್ಥಿಗಳಿಗೆ ಉಪರಾಷ್ಟ್ರಪತಿ ವೆಂಕಯನಾಯ್ಡು ಕರೆ.

ಮೈಸೂರು,ನ,2,2019(www.justkannada.in): ದೇಶದ ಏಳಿಗೆಗೆ ವಿದ್ಯಾರ್ಥಿಗಳ ಪಾತ್ರ ದೊಡ್ಡದು. ಎಲ್ಲೆ ಹೋಗಿ ಏನೇ ಮಾಡಿ ನಿಮ್ಮ ತಾಯಿನಾಡಿಗಾಗಿ ದುಡಿಯಿರಿ ಎಂದು ವಿದ್ಯಾರ್ಥಿಗಳಿಗೆ ಉಪರಾಷ್ಟ್ರಪತಿ ವೆಂಕಯನಾಯ್ಡು ಕರೆ ನೀಡಿದರು.

ಮೈಸೂರಿನ ಜೆಎಸ್ ಎಸ್  ಉನ್ನತ ಮತ್ತು ಸಂಶೋಧನಾ ಅಕಾಡಮಿ ವತಿಯಿಮದ ಆಯೋಜಿಸಿದ್ದ ದಶಮ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ  ಉಪರಾಷ್ಟ್ರಪತಿ ವೆಂಕಟಯ್ಯ ನಾಯ್ಡು. ಭಾಗವಹಿಸಿ ಮಾತನಾಡಿದರು.

ಎಲ್ಲರಿಗು ನಮಸ್ಕಾರ.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಬಹಳ ಸಂತೋಷವಾಗಿದೆ. ಪದಕ ಪಡೆದ ಎಲ್ಲರಿಗೂ ನನ್ನ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಭವಿಷ್ಯದ ಬಗ್ಗೆ ನನ್ನ ಶುಭಾಶಯಗಳು ತಿಳಿಸುತ್ತೇನೆ.ಎಂದು ಕನ್ನಡದಲ್ಲೆ ಭಾಷಣ ಆರಂಭಿಸಿದರು.

ಮೈಸೂರು ಒಂದು ಸುಂದರವಾದ ಮತ್ತು ಅಷ್ಟೇ ಸುಂದರವಾದ ಸ್ವಚ್ಚ  ನಗರ ಮೈಸೂರು. ನಿಮ್ಮ ಒಂದು ಪಾತ್ರ ದೇಶದ ಏಳಿಗೆಯಲ್ಲಿ ಪ್ರಮುಖವಾದ್ದು. ಪಾಶ್ಚಾತ್ಯ ದೇಶಗಳಂತೆ ವೈದ್ಯಕೀಯ ಕ್ಷೇತ್ರಗಳಲ್ಲಿ ಭಾರತವು ಮುನ್ನುಗುತ್ತಿದೆ. ವಿಶ್ವದ ಹತ್ತು ಪ್ರಮುಖ ವೈದ್ಯರಲ್ಲಿ ‌ಶೇ.ಐವತ್ತರಷ್ಡು ಭಾರತೀಯ ವೈದ್ಯರು ಅನ್ನವುದೆ ಹೆಮ್ಮೆ. ಭಾರತದಲ್ಲಿ 45 ವರ್ಷದ ನಂತರ ಸಹಜ ರೋಗಕ್ಕೆ ತುತ್ತಾಗುತ್ತಿದ್ದಾರೆ. ಸರಿಯಾದ ಹೆಲ್ತ್ ಲೈಪ ಸ್ಟೈಲ್ ಇಲ್ಲದಿರುವುದೆ ಇದಕ್ಕೆ ಕಾರಣ. ನೀವುಗಳಲ್ಲೆ ಈ ಸಮಸ್ಯೆ ಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಯೋಗವನ್ನ ನಿಮ್ಮ ಜೀವನಕ್ಕಾಗಿ ಮಾಡಿ ಮೋದಿಗಾಗಿ ಮಾಡಬೇಡಿ.. ಯೋಗ ಪಾಶ್ಚಾತ್ಯ ರಾಷ್ಟ್ರಗಳು ಒಪ್ಪಿ ಅನುಸರಿಸುತ್ತಿವೆ. ಯೋಗ ರಾಜಕೀಯವಲ್ಲ ಧರ್ಮವಲ್ಲ ನಿಮ್ಮ ಆರೋಗ್ಯದ ದೃಷ್ಟಿ ಅಷ್ಟೇ ಎಂದು ಸಲಹೆ ನೀಡಿದರು.

ಭಾರತದಲ್ಲಿ ಉತ್ತಮ ವಾದ ಆಹಾರ ಸಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ರಾಗಿ ಮುದ್ದೆಯಂತಹ ಆರೋಗ್ಯಕರ  ಆಹಾರ ಭಾರತದಾಂತ್ಯದ ಪ್ರಸಿದ್ದ ವಾಗಿದೆ. ಆಹಾರ ಪದ್ದತಿ ಸರಿಪಡಿಸಿಕೊಳ್ಳಿ. ನಿಮ ಬಳಿ ಬರುವ ರೋಗಿಗಳಿಗೆ ಉತ್ತಮ ಆರೋಗ್ಯಕರ ಆಹಾರ ಸೇವನೆ ಬಗ್ಗೆ ತಿಳಿಸಿ. ನಿಮ್ಮ ಸಮಾಜದಲ್ಲಿ ಉತ್ತಮ ಆಹಾರ ಉತ್ತಮ ಜೀವನದ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸಗಳನ್ನ ಮಾಡಿ. ಕೆಲವು ವೈದ್ಯ ರು ಅನಾವಶ್ಯಕ ಔಷಧಿ ನೀಡುತ್ತಾರೆ,ಆದರೆ ನೀವು ರೋಗಿಗಳಿಗೆ ಅವಶ್ಯಕತೆ ಇರುವ ಔಷಧಯನ್ನೆ ನೀಡಿ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದರು.

ನಾವು ಯಾವ ದೇಶದ ಮೇಲು ದಾಳಿ ಮಾಡಿಲ್ಲ. ಆದ್ರೆ ನಮ್ಮ ದೇಶದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ. ನಮಗೆ ಮೋಸ ಮಾಡಿದ್ದಾರೆ, ದ್ರೋಹ ಮಾಡಿದ್ದಾರೆ. ಆದ್ರೆ ನಮ್ಮ ಪಕ್ಕದ ರಾಷ್ಟ್ರ ಭಯೋತ್ಪಾದನೆ ಮಾಡುತ್ತಿದೆ. ನಮ್ಮ‌ ಮೇಲೆ ದಾಳಿ‌ಮಾಡಿದವರ ಜೊತೆಯಲ್ಲೂ ಸ್ನೇಹ ಹಸ್ತ ಚಾಚುತ್ತೇವೆ. ಅದು ನಮ್ಮ ದೌರ್ಬಲ್ಯವಲ್ಲ. ಎಲ್ಲರೂ ಸ್ನೇಹದಿಂದ ಇರಬೇಕು ಎಂಬುದು ನಮ್ಮ ಮನೋಧರ್ಮ.  ಅನ್ಯ ದೇಶಗಳು ನಮ್ಮ ವಿಚಾರದಲ್ಲಿ ಮೂಗು ತೂರಿಸುವುದನ್ನು ಸಹಿಸುವುದಿಲ್ಲ. ಸ್ನೇಹಿತರನ್ನು ಬದಲಾಯಿಸಬಹುದು, ಆದ್ರೆ ಪಕ್ಕದ ರಾಷ್ಟ್ರಗಳನ್ನ ಬದಲಾಯಿಸಲು ಸಾಧ್ಯವಿಲ್ಲ. ಎಲ್ಲರೂ ಸ್ನೇಹದಿಂದಿರಬೇಕು. ವೈರತ್ವದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಜಮ್ಮು ಕಾಶ್ಮೀರದಲ್ಲಿ 370 ನೇ ವಿದಿ ರದ್ದತಿಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಕ್ಕಿತು. ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇರಲಿಲ್ಲ. ಆದ್ರು ಅಲ್ಲಿ ಮೂರನೇ ಎರಡರಷ್ಟು ಬಹುಮತ ಸಿಕ್ಕಿತು. ಆ ಕ್ಷಣ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಹೇಳಿದರು.

Key words:  mysore- jss-  Vice President- Venkayanayudu – students.