ಉತ್ಸಾಹಿ ತಂಡದ ನಿರೀಕ್ಷಿತ ‘ಬಬ್ರೂ’ ಚಿತ್ರ ನೂತನ ದಾಖಲೆ: ಒಂದೇ ದಿನ 7 ಪ್ರೀಮಿಯರ್ ಶೋಗಳು ಹೌಸ್​ ಫುಲ್​ ಪ್ರದರ್ಶನ…

ಬೆಂಗಳೂರು,ನ,2,2019(www.justkannada.in):  ಹೊಸ ತಂಡದ ಬಬ್ರೂ ಚಿತ್ರದ 7 ಪ್ರೀಮಿಯರ್​ ಶೋ, ಬಿಸಿ ದೋಸೆಯಂತೆ ಬಿಕರಿಯಾದ ಟಿಕೆಟ್​ ಗಳು, ಅತಿದೊಡ್ಡ ಪ್ರೀಮಿಯರ್​ ಶೋ ಎಂಬ ಕೀರ್ತಿಗೆ ಪಾತ್ರ ಉತ್ಸಾಹಿ ತಂಡದ ಚಿತ್ರವೊಂದು ಬಿಡುಗಡೆಗೂ ಮುನ್ನವೇ ನೂತನ ದಾಖಲೆ ಬರೆದಿದೆ.
ಪ್ರೇಮಕಥೆಯನ್ನು ಹೊಸ ಮಾದರಿಯಲ್ಲಿ ಹೇಳುವ ಅಪರಿಚಿತರ ಪಯಣದ ಭಿನ್ನ ಶೀರ್ಷಿಕೆಯ ಚಿತ್ರ ಬಬ್ರೂವಿನ ಪ್ರೀಮಿಯರ್​ ಶೋ ಅಮೆರಿಕದಲ್ಲಿ ಶನಿವಾರ, ನ.2 ರಂದು ಬಿಡುಗಡೆಯಾಗಿದೆ.
ಇದು ದಾಖಲೆ ನಿರ್ಮಿಸಿದ್ದು ಅಮೆರಿಕದ ಸಿನಿ ಲಾಂಜ್​ ಮಾಲ್​ ನಲ್ಲಿ ಒಂದೇ ದಿನ 7 ದೊಡ್ಡ ಪರದೆಗಳಲ್ಲಿ ಚಿತ್ರದ ಪ್ರೀಮಿಯರ್ ಪ್ರದರ್ಶನ​ ಆಯೋಜನೆಯಾಗಿದೆ. ಅಲ್ಲದೆ 7 ಶೋಗಳ ಎಲ್ಲ ಟಿಕೆಟ್​ ಗಳು ಬಿಕರಿಯಾಗಿವೆ. ಎಲ್ಲ ಪ್ರದರ್ಶನಗಳು ಹೌಸ್​ ಫುಲ್​ ಪ್ರದರ್ಶನ ಕಂಡಿವೆ. ಚಿತ್ರರಂಗದ ಇತಿಹಾಸದಲ್ಲಿ ಚಿತ್ರವು ಬಿಡುಗಡೆಗೂ ಮುನ್ನ ಆಯೋಜನೆಯಾಗುವ ಪ್ರದರ್ಶನ ಇಷ್ಟು ದೊಡ್ಡ ಮಟ್ಟಿಗೆ ಯಶಸ್ಸು ಪಡೆದಿರುವುದು ಇದೇ ಮೊದಲು.

ಹೊಸ ತಂಡದ ಈ ಚಿತ್ರದ ಟ್ರೈಲರ್ ಸೋಮವಾರ, ಅ.21 ರಂದು ಬಿಡುಗಡೆಯಾಗಿತ್ತು. ಸುಮನ್ ನಗರ್ ಕರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರವು ಸುಂದರ ಪ್ರೇಮ ಪಯಣದ ಮಹಾಕಾವ್ಯ ಎಂದು ಟ್ರೈಲರ್ ಬಿಂಬಿಸಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಟ್ರೈಲರ್ ನಲ್ಲಿ ಚಿತ್ರವು ಪ್ರೀತಿಯ ಪಯಣದ ಕಥೆಯನ್ನು ಹೇಳುತ್ತದೆ. ವಿಭಿನ್ನ ದೃಷ್ಟಿಕೋನವನ್ನಿಟ್ಟುಕೊಂಡ ಇಬ್ಬರು ಅಪರಿಚಿತರ ಪಯಣದ ಒಂದು ಸುಂದರ ಮಹಾಕಾವ್ಯ ಎಂದು ಟ್ರೈಲರ್ ತೋರಿಸಿದೆ. ಸೊಮಾರಿ ಯುವಕನೊಬ್ಬ ಒಬ್ಬ ಸುಂದರ ಅಪರಿಚಿತ ಯುವತಿಯೊಡನೆ ಸುಂದರ ಪ್ರಕೃತಿಯ ನಡುವೆ ಪಯಣಿಸುತ್ತಾರೆ.
ಕಾರು ಸಾಗುವ ದೃಶ್ಯಗಳು, ನಂತರ ಪಯಣದಲ್ಲಿ ಬರುವ ತಿರುವುಗಳು, ಭಾವಾಭಿವ್ಯಕ್ತಿಯ ಸನ್ನಿವೇಶಗಳು ಮೊದಲಾದವುಗಳನ್ನು ತೋರಿಸುವ ಟ್ರೈಲರ್ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.
ಅಮೆರಿಕದಲ್ಲಿ ನೆಲೆಸಿರುವ ಉತ್ಸಾಹಿ ಕನ್ನಡಿಗರ ತಂಡವು ಚಿತ್ರವನ್ನು ತಯಾರಿಸಿದೆ. ತಂಡದಲ್ಲಿನ ಬಹುತೇಕರು ಯಶಸ್ವಿ ಸಾಫ್ಟ್ ವೇರ್ ವೃತ್ತಿಪರರಾಗಿದ್ದಾರೆ. ಕನ್ನಡ ಮತ್ತು ಇಲ್ಲಿನ ಚಿತ್ರಗಳ ಮೇಲಿನ ಪ್ರೀತಿಯಿಂದ ತಮಗೆ ಸಿಕ್ಕ ಬಿಡುವಿನ ಅಮೂಲ್ಯ ಸಮಯವನ್ನು ಚಿತ್ರ ತಯಾರಿಗೆ ಮೀಸಲಿರಿಸಿದ್ದಾರೆ.
ಸುಮನ್ ಪ್ರೊಡೊಕ್ಷನ್ಸ್ ಮತ್ತು ಯುಗ ಕ್ರೀಯೇಷನ್ಸ್ ಅರ್ಪಿಸುವ ಈ ಚಿತ್ರಕ್ಕೆ ಸುಜಯ್ ರಾಮಯ್ಯ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಸುಜಯ್​ ಕಥೆ ಮತ್ತು ಚಿತ್ರಕಥೆಯ ಹೊಣೆಯನ್ನೂ ಹೊತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರು ಚಿತ್ರಕ್ಕೆ ರಾಗ ಸಂಯೊಜಿಸಿದ್ದಾರೆ.
ಲೋಕೇಶ್ ಬಿ ಎಸ್ ಅಸೋಸಿಯೇಟ್ ನಿರ್ದೇಶಕ ಮತ್ತು ಲೈನ್ ನಿರ್ಮಾಪಕರಾಗಿದ್ದಾರೆ. ಗುರುದೇವ್ ನಾಗರಾಜ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ. ಸುಮುಖ ಮತ್ತು ಸುಜಯ್ ಫೋಟೊಗ್ರಫಿಯ ಹೊಣೆ ಹೊತ್ತಿದ್ದಾರೆ. ವರುಣ್ ಶಾಸ್ತ್ರಿ ಸಂಭಾಷಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಬಬ್ರೂ ಚಿತ್ರದಲ್ಲಿ ಸುಮನ್ ನಗರ್ ಕರ್, ಮಹಿ ಹಿರೇಮಠ ಪ್ರಧಾನ ಪಾತ್ರದಲ್ಲಿದ್ದಾರೆ, ಉಳಿದಂತೆ ಸನ್ನಿ ಮೋಜಾ, ರೇ ಟೊಸ್ಟಾದೊ, ಪ್ರಕೃತಿ ಕಶ್ಯಪ್, ಗಾನಾ ಭಟ್, ಸಂದೀಪ್ ಬೆಳ್ಳಿಯಪ್ಪ ಮೊದಲಾದವರು ತಾರಾಗಣದಲ್ಲಿದ್ದಾರೆ.
ಚಿತ್ರದ ಪ್ರೀಮಿಯರ್​ ಶೋಗೆ ಈ ಮಟ್ಟದ ಯಶಸ್ಸು ದೊರೆತಿರುವುದು ಚಿತ್ರತಂಡದ ಸಂತಸ ಹೆಚ್ಚಿಸಿದೆ. ಟ್ರೈಲರ್ ಮೂಲಕವೂ ಗಮನ ಸೆಳೆದಿರುವ ಚಿತ್ರವು ಆದಷ್ಟು ಬೇಗ ತೆರೆಗೆ ಅಪ್ಪಳಿಸಲಿದೆ.

key words:Exclusive -‘Babru-‘ movie -new record