ಹುಣಸೂರಿಗೂ ಶುರುವಾಯ್ತು ಕೊರೋನಾ ಆತಂಕ. …

Promotion

ಮೈಸೂರು,ಮೇ,28,2020(www.justkannada.in);  ಮಹಾಮಾರಿ ಕೊರೋನಾ ಆತಂಕ ಇದೀಗ ಮೈಸೂರು ಜಿಲ್ಲೆ ಹುಣಸೂರಿಗೂ ಶುರುವಾಗಿದೆ.

ಹಾಸನ ಜಿಲ್ಲೆ ಹೊಳೆ ನರಸೀಪುರ ಠಾಣೆಯ ಎ.ಎಸ್.ಐ. ಹುಣಸೂರಿನಲ್ಲಿ ಸಂಚಾರ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.  ಎಎಸ್ ಐ ಹುಣಸೂರಿನ ಕ್ಲಿನಿಕ್‌ನಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಿದ್ದು ಇದೀಗ ಬಸ್ ನಿಲ್ದಾಣದ ಎದುರಿನ ಶ್ರೀಲಕ್ಷ್ಮಿ ಪಾಲಿ ಕ್ಲಿನಿಕ್ ಸೀಲ್‌ಡೌನ್ ಮಾಡಲಾಗಿದೆ.mysore- hunsur-Coronal -Anxiety - Seal down

ಕ್ಲಿನಿಕ್ ಇರುವ ರಸ್ತೆಗೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು ಲಾಕ್ ಮಾಡಿದ್ದಾರೆ. ಇನ್ನು ಕ್ಲಿನಿಕ್ ಸುತ್ತ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ. ಎಎಸ್ ಐ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಮನೆ ಹೊಂದಿದ್ದಾರೆ.

Key words: mysore- hunsur-Coronal -Anxiety – Seal down