ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಪೊಲೀಸರ ವಿರುದ್ಧ ದೂರು ನೀಡುವ ವ್ಯವಸ್ಥೆ ಶೀಘ್ರ ಜಾರಿ- ಗೃಹ ಸಚಿವ ಅರಗ ಜ್ಞಾನೇಂದ್ರ.

ಮೈಸೂರು,ಸೆಪ್ಟಂಬರ್,28,2021(www.justkannada.in): ರಾಜ್ಯದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಪೊಲೀಸರ ವಿರುದ್ಧ ದೂರು ನೀಡುವ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮೈಸೂರಿನ ಜ್ಯೋತಿ ನಗರ ಪೊಲೀಸ್ ತರಬೇತಿ ಶಾಲೆ ಮೈದಾನದಲ್ಲಿ  6ನೇ ತಂಡ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಗಳ ನಿರ್ಗಮನ ಪಥಸಂಚಲನ ನೆರವೇರಿತು. ಕಳೆದ 8 ತಿಂಗಳ ತರಬೇತಿ ಪೂರೈಸಿರುವ 242 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮಕ್ಕೆ ಗೃಹಸಚಿವ ಅರಗ ಜ್ಞಾನೇಂದ್ರ ಚಾಲನೆ ನೀಡಿದರು. ಬಳಿಕ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಪ್ರಶಿಕ್ಷಣಾರ್ಥಿಗಳಿಗೆ ಪೋಲೀಸ್ ತರಬೇತಿ ಶಾಲೆ ಪ್ರಾಂಶುಪಾಲೆ ಡಾ.ಧರಣಿದೇವಿ ಮಾಲಗತ್ತಿ ಅವರು ಪ್ರತಿಜ್ಞಾವಿಧಿ ಬೋಧನೆ  ಮಾಡಿದರು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಹರಿಶೇಖರನ್  ಅವರು ಅತ್ಯುತ್ತಮ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಫುಲ್ ಕುಮಾರ್, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಆರ್.ಚೇತನ್ ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಮಹಿಳೆ ಅಬಲೆ ಅಂತಾ ಏಕೆ ಹೇಳಿದರು ಗೊತ್ತಿಲ್ಲ. ನಾನು ಅಬಲೆ ಅಲ್ಲ ಸಬಲೆ, ನನ್ನನ್ನು ಮಾತ್ರವಲ್ಲ ಸಮಾಜವನ್ನು ರಕ್ಷಣೆ ಮಾಡುತ್ತೇನೆ ಅನ್ನೋದನ್ನು ಮಹಿಳೆಯರು ತೋರಿಸಿದ್ದಾರೆ ಎಂದರು.

ವಿದೇಶದಿಂದ ಬರುವ ಶತ್ರುಗಳನ್ನು ಎದುರಿಸಲು ಸೈನಿಕರಿದ್ದಾರೆ. ನಮಗೆ ಸವಾಲಾಗಿರುವುದು 130 ಕೋಟಿಯ ಈ ದೇಶದ ಆತಂರಿಕ ರಕ್ಷಣೆಯ ಸವಾಲು. ಇದನ್ನು ಸೈನಿಕರು ಮಾಡಲು ಸಾಧ್ಯವಿಲ್ಲ. ಅದನ್ನು ಮಾಡುತ್ತಿರುವುದು ಪೊಲೀಸರು. ಶಾಂತಿ ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಉತ್ತಮವಾಗಿ ನಿರ್ವಹಿಸುತ್ತಿದೆ. ಪೊಲೀಸರು ಅಂದರೆ ಗಂಡಸರು ಅನ್ನೋ ಪರಿಕಲ್ಪನೆ ಇತ್ತು. ನೂರಕ್ಕೆ 25 ಭಾಗ ಮಹಿಳೆಯರು ಇರಬೇಕು ರಾಜ್ಯದಲ್ಲಿ ಶೇ 10 ರಷ್ಟು ಇದ್ದಾರೆ. ಪೊಲೀಸ್ ಕಾನ್ಸಟೇಬಲ್ ವಿದ್ಯಾರ್ಹತೆ ಪಿಯುಸಿ. ಆದರೆ ನಿಮ್ಮ ವಿದ್ಯಾರ್ಹತೆ ಪದವಿ ಸ್ನಾತಕೋತ್ತರ ಪದವಿ ಇದೆ. 242 ಜನರಲ್ಲಿ ಹೆಚ್ಚು ಅಭ್ಯರ್ಥಿಗಳು ಪದವಿ ಪಡೆದಿದ್ದೀರಿ. ಇದರಿಂದ ಪೊಲೀಸ್ ಇಲಾಖೆಯ ಶಿಸ್ತು ಸಂಯಮ ಇರಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆಯ ಗುರಿ ಇದೆ.

ಪೊಲೀಸರ ಬಗ್ಗೆ ಜನರಿಗೆ ಭಯ ಇರಬಾರದು. ಅಪರಾಧಿಗಳಿಗೆ ದರೋಡೆಕೋರರ ಕ್ರಿಮಿನಲ್‌ ಗಳಿಗೆ ಟೆರರ್ ಆಗಿರಬೇಕು. ಪೊಲೀಸ್ ಠಾಣೆಗೆ ಬರುವವರನ್ನು ಗೌರವಿಸಬೇಕು. ಪ್ರಕರಣದ ಶೇ 35 ರಷ್ಟು ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯವಾಗುತ್ತಿದೆ. ಮಹಿಳೆ ಎಲ್ಲವನ್ನು ಪುರುಷ ಅಧಿಕಾರಿ ಬಳಿ ಹೇಳಲು ಸಾಧ್ಯವಿಲ್ಲ. ಎಲ್ಲಾ ಪೊಲೀಸ್ ಠಾಣೆಯಲ್ಲಿ ಕನಿಷ್ಠ ಮೂವರು ಮಹಿಳಾ ಪೇದೆಯರು, ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆಯ ಗುರಿ ಇದೆ ಎಂದು ಅರಗ ಜ್ಞಾನೇಂದ್ರ ತಿಳಿಸಿದರು.

ಮಂಗಳೂರಿನಲ್ಲಿ ನಡೆದ ನೈತಿಕ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಇಂತಹ ಪ್ರಕರಣ ನಡೆಯದಂತೆ ಕ್ರಮ ವಹಿಸಲಾಗುತ್ತಿದೆ. ನೈತಿಕ ಪೊಲೀಸ್‌ಗಿರಿ ನಡೆಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಪೊಲೀಸರ ಕಡೆಯಿಂದಲೂ ಇತ್ತೀಚೆಗೆ ಅಪರಾಧ ಹೆಚ್ಚುತ್ತಿವೆ. ಹೀಗಾಗಿ ಪೊಲೀಸರ ವಿರುದ್ಧವೂ ಎಸ್‌ಪಿ, ಡಿಜಿ ಕಚೇರಿಗಳಲ್ಲಿ ದೂರು ನೀಡಲು ವ್ಯವಸ್ಥೆ ಮಾಡಲಾಗಿದೆ. ಪೊಲೀಸರಿಂದ ಅಪರಾಧಕ್ಕೊಳಗಾದವರು ದೂರು ನೀಡಬೇಕು. ಅದಕ್ಕಾಗಿ ಅಗತ್ಯ ವಾತಾವರಣ ನಿರ್ಮಾಣ ಮಾಡಲು ವ್ಯವಸ್ಥೆ ಮಾಡಿದ್ದೇವೆ. ಬೆಂಗಳೂರಿಗೆ ಹೊದ ತಕ್ಷಣ ಈ ಬಗ್ಗೆ ಅಧಿಕಾರಗಳ ಸಭೆ ನಡೆಸುತ್ತೇನೆ. ಪೊಲೀಸರ ಮೇಲೆಯೇ ಕೆಲವೊಂದಷ್ಟು ದೂರುಗಳಿವೆ. ಇದನ್ನ ತಡೆಯಲು ಈ ಕ್ರಮ ಅನಿವಾರ್ಯವಾಗಿದೆ. ಪ್ರತಿ ಜಿಲ್ಲೆಯಲ್ಲೂ ಎರಡು ದೂರವಾಣಿ ಸಂಖ್ಯೆ ಸಮೇತ ಕೇಂದ್ರ ಸ್ಥಾಪನೆ ಮುಂದಾಗುತ್ತಿದ್ದೇವೆ. ಜನಸ್ನೇಹಿ ಪೊಲೀಸ್ ದೃಷ್ಟಿಯಿಂದ ಈ ವ್ಯವಸ್ಥೆ ಶೀಘ್ರದಲ್ಲೇ ಜಾರಿ ಮಾಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

Key words: mysore –  Home Minister -Araga Jnanendra- Complaint -against -police -abusing -power -system

ENGLISH SUMMARY…

‘A complaint system against police who misuse their power to be introduced soon’: Home Minister Araga Jnanendra
Mysuru, September 28, 2021 (www.justkannada.in): Home Minister Araga Jnanendra today informed that a complaint system against the police personnel who misuse their power would be introduced soon.
He inaugurated the 6th Women Police Constable batch parade, held at the Police Training School in Jyothinagara, in Mysuru today. About 242 trainees have completed their eight months of training. The Home Minister received the guard of honour.
In his address, he said there are soldiers to guard us against external forces. “But the challenge we are facing is the internal protection of the 130 crore people of our country. Soldiers can’t do it. It is the police who are doing that work. They are ably performing their duty of maintaining law and order. There was a time when people used to think only about men police. But today there is 10% women police personnel in the state. Whereas it should be increased to 25%. The educational qualification criteria for the selection of police constables are PUC. Whereas many of them have completed their post-graduation. Out of the 242 women police who are passing out today, many of them are graduates. Hence, the police department should have discipline and tolerance,” he said.
Keywords: Police Training School/ parade/ Home Minister/ complaint system