ಅತೃಪ್ತ ಶಾಸಕರನ್ನ ಮೊದಲು ದಡ ಸೇರಿಸಲಿ: ನಂತರ ಮತ್ತಷ್ಟು ಶಾಸಕರನ್ನ ಸ್ವೀಕಾರ ಮಾಡ್ಲಿ-ಸಚಿವ ಸೋಮಣ್ಣಗೆ  ಸಾ.ರಾ ಮಹೇಶ್ ಟಾಂಗ್…

kannada t-shirts

ಮೈಸೂರು,ಸೆ,13,2019(www.justkannada.in): ಜಿಟಿ ದೇವೇಗೌಡರ ಜೊತೆ ಇನ್ನೂ  2O ಮಂದಿ ಕಳುಹಿಸಿ ಎಂಬ  ಸಚಿವ ವಿ. ಸೋಮಣ್ಣ ಹೇಳಿಕೆಗೆ ಟಾಂಗ್ ಕೊಟ್ಟ   ಮಾಜಿ ಸಚಿವ  ಸಾ.ರಾ ಮಹೇಶ್, ಈಗಾಗಲೇ ಅಲ್ಲಿಗೆ ಹೋಗಿರುವ ಅತೃಪ್ತ ಶಾಸಕರನ್ನ ಮೊದಲು ದಡ ಸೇರಿಸಲಿ. ನಂತರ ಮತ್ತಷ್ಟು ಶಾಸಕರನ್ನ ಸ್ವೀಕಾರ ಮಾಡಲಿ ಎಂದು ತಿರುಗೇಟು ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಸಾ.ರಾ ಮಹೇಶ್, ಬಿಜೆಪಿ ಹೈ ಕಮಾಂಡ್ ಗಟ್ಟಿಯಾಗಿದೆ, ಅವರ ಬಳಿ ಇಡಿ ಐಟಿ ಇವೆ ಹೀಗಾಗಿ ಬಿಜೆಪಿ ಶಾಸಕರು ಅಲುಗಾಡುತ್ತಿಲ್ಲ. ಬಿಜೆಪಿ ಸರ್ಕಾರ ದ್ವೇಷದ  ರಾಜಕಾರಣ ಮಾಡಿದ್ರೆ ಕಷ್ಟ. ಪ್ರಸ್ತುತ ರಾಜಕೀಯದ‌ ಚಲನವಲನ ನೋಡಿದ್ರೆ  ಮಧ್ಯಾಂತರ‌ ಚುನಾವಣೆ ಅವಶ್ಯಕ. ಆದರೆ ನನ್ನ ವೈಯಕ್ತಿಕವಾಗಿ ಮಧ್ಯಾಂತರ ಚುನಾವಣೆ ಬೇಡ ಎನ್ನುತ್ತೇನೆ. ಈಗಾಗಲೇ ರಾಜ್ಯದ ಜನತೆ ಕಷ್ಟದಲ್ಲಿ ಇದ್ದಾರೆ. ಈ ಪರಿಸ್ಥಿತಿಯಲ್ಲಿ ಮಧ್ಯಾಂತರ ಚುನಾವಣೆಯ ಅವಶ್ಯಕತೆ ಇಲ್ಲ. ಆದರೆ ಬಿಜೆಪಿಯವರ ಆಟವನ್ನು ನೋಡುತ್ತಿದ್ರೆ ಮಧ್ಯಾಂತರ ಚುನಾವಣೆ ಬರಲಿದೆ ಎಂದು ಭವಿಷ್ಯ ನುಡಿದರು.

ಸೋಮಣ್ಣ ಹೆಚ್.ಡಿಕೆ ಅವರ ಸಲಹೆ ಪಡೆಯಲಿ…

ಹೆಚ್.ಡಿ ಕುಮಾರಸ್ವಾಮಿ ಅದೃಷ್ಟದಿಂದ ಸಿಎಂ ಆಗಿದ್ರು ಎಂದು ಹೇಳಿಕೆ ನೀಡಿದ್ದ ವಿ.ಸೋಮಣ್ಣ ವಿರುದ್ದ ವಾಗ್ದಾಳಿ ನಡೆಸಿದ ಸಾ.ರಾ ಮಹೇಶ್, ಹೆಚ್.ಡಿಕೆ ಅವರು ಅದೃಷ್ಟದಿಂದಾದ್ರೂ. ನೀವು ಸರ್ಕಾರ ಹೇಗೆ ಮಾಡಿದ್ರಿ ಅಂತಾ ಆತ್ಮಾವಲೋಕನ ಮಾಡಿಕೊಳ್ಳಿ. ಎರಡು ಬಾರಿ ಸಿಎಂ ಆಗಿದ್ದಾರೆ. ರಾಜ್ಯದಲ್ಲಿ ಎರಡು ಬಾರಿ ಸಿಎಂ ಆಗಿ ಅನುಭವ ಹೊಂದಿರುವ ಹೆಚ್ ಡಿ ಕುಮಾರಸ್ವಾಮಿ ಅವರ ಸಲಹೆಯನ್ನ  ಸೋಮಣ್ಣ  ಸ್ವೀಕರಿಸಲಿ ಎಂದು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಪ್ರವಾಹ ಉಂಟಾಗಿ ಜನ ಕಷ್ಟಕ್ಕೆ ತುತ್ತಾಗಿದ್ದಾರೆ,  ನಿಮ್ಮ ವಸತಿ ಇಲಾಖೆಯ ಪ್ರಯೋಜನ ಅಲ್ಲಿ ನೀಡಿ  ಎಂದು ಹೇಳಿದ್ದಾರೆ,  ದಸರಾಕ್ಕೆ  ಮಾತ್ರ ಸೀಮಿತವಾಗಬೇಡಿ ಎಂದು ಹೆಚ್ಡಿಕೆ  ಹೇಳಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿರುವ ಹೆಚ್ಡಿಕೆ ಅವರಿಗೆ ಜನರ ನೋವು ಏನು ಎಂಬುದು ಗೊತ್ತಿದೆ,  ಹೀಗಾಗಿ ರಾಜ್ಯದ ಜನರ ಪರಿಸ್ಥಿತಿ ನೋಡಿ. ಈ ರಾಜ್ಯದ ಜನತೆಗೆ ನೇರವಾಗಿ ಎಂದು ಸೋಮಣ್ಣ ಗೆ ಸಲಹೆ ನೀಡಿದ್ದಾರೆ ಎಂದು ಹೆಚ್ಡಿಕೆ ಪರ ಸಾ. ರಾ ಮಹೇಶ್  ಬ್ಯಾಟಿಂಗ್ ಮಾಡಿದರು.

ಸೋಮಣ್ಣ ಅವರಿಗಿಂತ ದೊಡ್ಡಗೌಡರ ಮನೆಯವರಿಗೆ ಚಾಮುಂಡೇಶ್ವರಿ ತಾಯಿಯ ಮೇಲೆ ಭಕ್ತಿ ಜಾಸ್ತಿ…..

ಸೋಮಣ್ಣ ಅವರಿಗಿಂತ ದೊಡ್ಡಗೌಡರ ಮನೆಯವರಿಗೆ ಚಾಮುಂಡೇಶ್ವರಿ ತಾಯಿಯ ಮೇಲೆ ಭಕ್ತಿ ಜಾಸ್ತಿ. ಸೋಮಣ್ಣ ಈಗ ಬಂದು ಚಾಮುಂಡೇಶ್ವರಿ ಭಕ್ತಿ ಬಗ್ಗೆ ಮಾತನಾಡ್ತಾರೆ. ಚಾಮುಂಡೇಶ್ವರಿ ಮೇಲೆ ಸೋಮಣ್ಣಗಿಂತ  ದೇವೇಗೌಡರ ಕುಟುಂಬಕ್ಕೆ ಹೆಚ್ಚು ಭಕ್ತಿ ಇದೆ. ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂದು ಚಾಮುಂಡೇಶ್ವರಿ ಬಳಿ ಎಷ್ಟು ಬಾರಿ ಹೋಗಿದ್ದಾರೆ ಎಂದು ರಾಜ್ಯದ ಜನರಿಗೆ ಗೊತ್ತಿದೆ. ಕೊಡಗು ಹಾಗೂ ನೆರೆ ಬಗ್ಗೆ ನಾವು ಜನರ ಪರ ನಿಂತಿದ್ವಿ. ಸೋಮಣ್ಣ ಟೀಕೆ ಮಾಡುವ ಬದಲು ಅವರ ಬಳಿ ದಾಖಲೆಗಳಿದ್ರೆ ಬಿಡುಗಡೆ ಮಾಡಲಿ ಎಂದು ಸಾ.ರಾ ಮಹೇಶ್ ಹೇಳಿದರು.

Key words: mysore-former minister-sa.ra Mahesh-outrage-Minister –v.Somanna

website developers in mysore