Monday, August 31, 2026

BDA Apartments

Home Front Page ಇಸ್ರೋಗೆ ಮೋದಿ ಬಂದಿದ್ದೇ ಅಪಶಕುನ ಎಂದಿದ್ದ ಮಾಜಿ ಸಿಎಂ ಹೆಚ್.ಡಿಕೆಗೆ ಸಚಿವ ಸುರೇಶ್ ಕುಮಾರ್ ತಿರುಗೇಟು…

ಇಸ್ರೋಗೆ ಮೋದಿ ಬಂದಿದ್ದೇ ಅಪಶಕುನ ಎಂದಿದ್ದ ಮಾಜಿ ಸಿಎಂ ಹೆಚ್.ಡಿಕೆಗೆ ಸಚಿವ ಸುರೇಶ್ ಕುಮಾರ್ ತಿರುಗೇಟು…

ಕೊಪ್ಪಳ,ಸೆ,13,2019(www.justkannada.in):  ಪ್ರಧಾನಿ ನರೇಂದ್ರ ಮೋದಿ ಬಂದಿದ್ದೇ ಇಸ್ರೋಗೆ ಅಪಶಕುನ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.

 ಕುಮಾರಸ್ವಾಮಿ ಅವರೇ ಎಲ್ಲದರಲ್ಲೂ ರಾಜಕೀಯ ಬೆರೆಸುವುದು ಒಳ್ಳೆಯದಲ್ಲ. ರಾಜಕೀಯ ಬೆರೆಸುವಂತಹ ವಿಚಾರದಲ್ಲಿ ರಾಜಕೀಯದ ಬಗ್ಗೆ ಮಾತನಾಡಲಿ ಎಂದು ಸಚಿವ ಸುರೇಶ್ ಕುಮಾರ್ ಟಾಂಗ್ ನೀಡಿದ್ದಾರೆ.

ಕೊಪ್ಪಳದಲ್ಲಿ ಇಂದು ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್,  ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದರಲ್ಲಾ ಅಂತಾ ನನಗೆ ನೋವಾಗಿದೆ. ಇಂತಹ ಮಾನಸಿಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ನಮ್ಮ ರಾಜ್ಯದ ಸಿಎಂ ಸ್ಥಾನದಲ್ಲಿ ಕೆಲಸ ಮಾಡಿದ್ರಲ್ಲ ಎಂದು ಬೇಸರವಿದೆ ಎಂದು ಟೀಕಿಸಿದರು.

ಇಸ್ರೋಗೆ  ಹೋಗಿದ್ದ ಪ್ರಧಾನಿ ಮೋದಿ ಅವರು  ವಿಜ್ಞಾನಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದನ್ನು ಇಡೀ ದೇಶವೇ ನೋಡಿದೆ. ಈ ಘಟನೆಯಿಂದ ಮೋದಿಯವರ ವ್ಯಕ್ತಿತ್ವ ಇನ್ನೂ ಎತ್ತರಕ್ಕೆ ಬೆಳೆದಿದೆ. ಹೆಚ್,ಡಿ ಕುಮಾರಸ್ವಾಮಿ ಎಚ್ಚರ ಇಟ್ಟುಕೊಂಡು ಮಾತನಾಡಲಿ ಎಂದು ಸಚಿವ ಸುರೇಶ್ ಕುಮಾರ್ ಕಿಡಿಕಾರಿದರು.

Key words: Former CM- HD Kumaraswamy- PM Modi-ISRO-minister- Suresh Kumar