ಯಾವಾಗಲೂ ಅವರನ್ನು ತಬ್ಬಿಕೊಂಡು ಇರಲು ಆಗುತ್ತಾ..? 17 ಮಂದಿ ಒಟ್ಟಾಗಿಲ್ಲ ಎಂಬ ಟೀಕೆಗೆ ಮಾಜಿ ಸಚಿವ ಹೆಚ್.ವಿಶ್ವನಾಥ್ ತಿರುಗೇಟು…

ಮೈಸೂರು,ಫೆ,7,2020(www.justkannada.in):  ಪಕ್ಷಾಂತರಿಗಳು 17 ಜನ ಒಟ್ಟಾಗಿ ಇಲ್ಲವೆಂದು ಟೀಕಿಸುತ್ತಿರುವವರಿಗೆ ತಿರುಗೇಟು ನೀಡಿರುವ ಮಾಜಿ ಸಚಿವ ಹೆಚ್.ವಿಶ್ವನಾಥ್ , ಯಾವಾಗಲು ಅವರನ್ನು ತಬ್ಬಿಕೊಂಡು ಇರಲು ಆಗುತ್ತಾ.?  ಗಂಡ ಹೆಂಡತಿಯೇ ಜೊತೆಯಾಗಿ ಇರೋದಿಲ್ಲ.. ನಾವು ನಾವು ಯಾವಾಗಲು ಜೊತೆಯಾಗೆ ಇರಲು ಆಗುತ್ತಾ.? ಎಂದು ಕಿಡಿಕಾರಿದರು.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ವಿಶ್ವನಾಥ್ , ನಿನ್ನೆ ಕಾರ್ಯಕ್ರಮಕ್ಕೆ ಕೆಲವರು ಬಂದಿಲ್ಲದೆ ಇರಬಹುದು‌. ಬಂದಿಲ್ಲದವರನ್ನ ನೀವು ಕೇಳಿ. ಆದರೆ ನಾವೆಲ್ಲ ಒಟ್ಟಾಗಿ ಇದ್ದೇವೆ, ಸಿಗೋದಕ್ಕೆ ಆಗಿಲ್ಲ ಅಷ್ಟೇ. ನಿನ್ನೆ ನಾನು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗಿದ್ದೆ. ನಿನ್ನೆ ಕಾರ್ಯಕ್ರಮ ಚೆನ್ನಾಗಿ ಆಯಿತು. ನನ್ನ ಅನುಭವ ಬಳಸಿಕೊಳ್ಳಿ ಅಂತ ಕೂಗಿ ಹೇಳೋಕೆ ಆಗೋಲ್ಲ. ಮಂತ್ರಿಯಾಗಿರಲಿ ಆಗಿಲ್ಲದೆ ಇರಲಿ ಅನುಭವಸ್ಥರ ಅನುಭವ ಪಡೆದುಕೊಳ್ಳಬೇಕು ಎಂದು ಹೇಳಿದರು.

‘ಸಿದ್ದು’ ವಿರುದ್ದ ‘ಹಳ್ಳಿಹಕ್ಕಿ’ ಗುಡುಗು…

ಮಂತ್ರಿಗಳನ್ನು ಅನರ್ಹರೆಂದ ಮಾಜಿ ಸಿದ್ದರಾಮಯ್ಯ ವಿರುದ್ದ  ಇದೇ ವೇಳೆ ವಾಗ್ದಾಳಿ ನಡೆಸಿದ  ಹೆಚ್.ವಿಶ್ವನಾಥ್, ಸಿದ್ದರಾಮಯ್ಯರಿಂದ ಸಂವಿಧಾನಕ್ಕೆ ಅಪಚಾರ ಆಗಿದೆ. ಸಿದ್ದರಾಮಯ್ಯ ಸಂವಿಧಾನಕ್ಕೆ ಗೌರವ ಕೊಡ್ತಿದ್ದಾರೋ ಅಥವಾ ಅಗೌರವ ಕೊಡ್ತಿದ್ದಾರೋ. ಜನತಾ ನ್ಯಾಯಾಲಯದಲ್ಲಿ ಗೆದ್ದು ಬಂದವರನ್ನ ನೀವು ಹೇಗೆ ಗೆದ್ರಿ ನನಗೆ ಗೊತ್ತಿದೆ ಅಂದ್ರೆ ಏನರ್ಥ. ಹಾಗಾದರೆ ಇವರು ಹೇಗೆ ಗೆದ್ದರು. ಎಲ್ಲ ಎಲೆಕ್ಷನ್‌ಗಳು ದುಡ್ಡಿನಿಂದಲೇ ಆಗುತ್ತಾ…? ಎಂದು ಪ್ರಶ್ನಿಸಿದರು.

ಸಂವಿಧಾನ ಡೆಂಜರ್ ಅಂತ ಭಾಷಣ ಮಾಡುವ ಸಿದ್ದರಾಮಯ್ಯರೇ ಸಂವಿಧಾನಕ್ಕೆ ಅಗೌರವ ಕೊಡ್ತಿದ್ದಾರೆ. ಹಾಗಾದರೆ ಸುಪ್ರೀಂಕೋರ್ಟ್‌ ತೀರ್ಪಿಗೆ ಸಿದ್ದರಾಮಯ್ಯ ಗೌರವ ಕೊಡ್ತಿಲ್ಲ ಅಂತ ಅರ್ಥ. ಸಿದ್ದರಾಮಯ್ಯರ ಹೇಳಿಕೆಯನ್ನ ನಾನು ಖಂಡಿಸುತ್ತೇನೆ ಎಂದು ಹೆಚ್.ವಿಶ್ವನಾಥ್ ಗುಡುಗಿದರು.

Key words: mysore-Former minister -H Vishwanath -17 member- together