ಶಾಸಕ ಎಸ್.ಎ.ರಾಮದಾಸ್ : 5 ಲಕ್ಷ ಪರಿಹಾರ ಚೆಕ್ ವಿತರಣೆ

Promotion

 

ಮೈಸೂರು ಆ.10.: ನಿರಂತರವಾಗಿ ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಮನೆಯ ಗೂಡೆ ಕುಸಿದು ಮೃತಪಟ್ಟಿದ್ದ ಗಣಪತಿ ಅವರಿಗೆ ಇಂದು ಶಾಸಕ ರಾಮದಾಸ್ 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು.

ಚೆಕ್ ಮೊತ್ತ 1 ಲಕ್ಷ ರೂ. ಮುಖ್ಯಮಂತ್ರಿಗಳ ಪರಿಹಾರ ನಿಧಿ ಹಾಗೂ 4 ಲಕ್ಷ ರೂ.ಗಳನ್ನು ಕೇಂದ್ರದ ಎನ್.ಡಿ.ಆರ್.ಎಫ್. ನೀಡಲಾಗಿದೆ.
ವೀರನಹೊಸಹಳ್ಳಿಯಲ್ಲಿ ವಾಸವಾಗಿರುವ ಜನರ 212 ಮನೆಗಳು ಶಿಥಿಲಾವ್ಯಸ್ಥೆಯಲ್ಲಿದ್ದು, ನಿರಂತರ ಮಳೆಯಿಂದ ಕುಸಿಯಬಹುದು. ಈ 121 ಮನೆಗಳನ್ನು ಕೆಡವಿ ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ಕೇಂದ್ರದ ಗಿರಿಜನ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಿ ಕೊಡಲಾಗುವುದು. ನಿರ್ಮಾಣವಾಗುವವರೆಗೆ 121 ಮನೆಗಳಲ್ಲಿ ವಾಸಿಸುವವರಿಗೆ ಪುನವರ್ಸತಿ ಕೇಂದ್ರದಲ್ಲಿ ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರಾದ ಅನಿಲ್ ಚಿಕ್ಕಮಾದು, ನಿರಂಜನ್ ಕುಮಾರ್, ಗಣ್ಯರಾದ ಶಿವಣ್ಣ, ಹೆಚ್. ವಿಶ್ವನಾಥ್ ಹಾಗೂ ಬಿ.ವೈ. ವಿಜಯೇಂದ್ರ ಅವರುಗಳು ಉಪಸ್ಥಿತರಿದ್ದರು.

key words : mysore-flood-karnataka