ಮೈಸೂರು: ಕೊರೊನಾ ಸಂಕಷ್ಟಕ್ಕೆ ಸಿಲುಕಿರುವವರಿಗೆ ಆಹಾರ ಕಿಟ್ ವಿತರಣೆ…

Promotion

ಮೈಸೂರು,ಜೂ,26,2020(www.justkannada.in):   ಮಾರಣಾಂತಿಕ ಕೊರೋನಾ ಹರಡುವಿಕೆಯನ್ನ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಮಾಡಿದ ಹಿನ್ನೆಲೆ ಮೈಸೂರಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.

ಕೊರೋನಾ ಸಂಕಷ್ಟದಲ್ಲಿರುವವರಿಗೆ ಸ್ವಯಂ ಸೇವಾ ಸಂಸ್ಥೆಗಳಿಂದ ನೆರವಿನ ಕಾರ್ಯ ಮುಂದುವರೆದಿದ್ದು ದೇವರಾಜ್ ಮೂಲಚಂದ್ ನಾಹರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ದಿನಸಿ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು. ಸುತ್ತೂರು ಶ್ರೀಗಳು ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.mysore-delivery-food-kit-affected-corona-distress

ಸಂಕಷ್ಟಕ್ಕೆ ಒಳಗಾಗಿರುವ ಬಡ ಜನರಿಗೆ ದಿನಸಿ ಪದಾರ್ಥಗಳ ಕಿಟ್ ಅನ್ನ ಡಾ.ಸಿ.ಎನ್ ಮೃತ್ಯುಂಜಯಪ್ಪನವರ ಕುಟುಂಬದವರಿಂದ ವಿತರಣೆ ಮಾಡಲಾಯಿತು.  ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ನಾಗೇಂದ್ರ ಸೇರಿದಂತೆ ಮತ್ತಿತ್ತರು ಭಾಗಿಯಾಗಿದ್ದರು.

Key words: Mysore-Delivery -food kit – affected -corona distress