ನಾಳೆಯಿಂದ ನಾಡ ಹಬ್ಬ ದಸರಾ ಮಹೋತ್ಸವದ ಯುವ ಸಂಭ್ರಮ ಕಾರ್ಯಕ್ರಮ ಪ್ರಾರಂಭ…

Promotion

 

ಮೈಸೂರು, ಸೆ.16, 2019 : (www.justkannada.in news ) ಮೈಸೂರು ದಸರ-2019 ಮಹೋತ್ಸವದ ಅಂಗವಾಗಿ ಆಯೋಜಿಸಿರುವ ‘ ಯುವ ಸಂಭ್ರಮ ‘ ಕಾರ್ಯಕ್ರಮಕ್ಕೆ ನಾಳೆ ಚಾಲನೆ ಸಿಗಲಿದೆ.

ನಾಳೆಯಿಂದ ಸೆಪ್ಟೆಂಬರ್ 26ರ ವರೆಗೂ ಈ ಕಾರ್ಯಕ್ರಮ ನಡೆಯಲಿದೆ. ನಗರದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ lO ದಿನಗಳ ಕಾಲ ನಡೆಯಲಿರುವ ಯುವಸಂಭ್ರಮ ಕಾರ್ಯಕ್ರಮದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿ….

ಕಾರ್ಯಕ್ರಮ ಉದ್ಘಾಟನೆಯನ್ನು ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್ ನೆರವೇರಿಸುವರು. ಈ ವರ್ಷ 26O ಕಾಲೇಜುಗಳ ವಿದ್ಯಾರ್ಥಿಗಳು ಭಾಗಿ. ಮೊದಲ ಬಾರಿಗೆ ಹೆಚ್ಚು ಕಾಲೇಜುಗಳಿಗೆ ಭಾಗವಹಿಸಲು ಅವಕಾಶ ನೀಡಿರುವ ಯುವಸಂಭ್ರಮ ಉಪ ಸಮಿತಿ. ಕಳೆದ ಬಾರಿ 8 ದಿನಗಳು ನಡೆದಿದ್ದ ಕಾರ್ಯಕ್ರಮ ಈ ವರ್ಷ lO ಕಾಲ ನಡೆಯಲಿದೆ. ಸುರಕ್ಷತೆಯ ದೃಷ್ಟಿಯಿಂದ ಬಯಲು ರಂಗಮಂದಿರದ ಸುತ್ತ ಸಿಸಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ ಎಂದರು.

key words : mysore-dasara2019-yuva.sambhrama-mysore