ಮೈಸೂರು ದಸರಾ: ಇಂದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಭಾರ ಹೊರಿಸುವ ತಾಲೀಮು.  

ಮೈಸೂರು ,ಆಗಸ್ಟ್,18,2022(www.justkannada.in): ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ದಸರಾಗೂ ಒಂದುವರೆ ತಿಂಗಳಿಗೂ ಮುಂಚೆಯೇ ಕ್ಯಾಪ್ಟನ್ ನೇತೃತ್ವದ ಗಜಪಡೆ ಮೈಸೂರು ಅರಮನೆಗೆ ಆಗಮಿಸಿ ಬೀಡು ಬಿಟ್ಟಿದೆ.

ನಾಡಹಬ್ಬ ದಸರಾ ಆಚರಣೆಗೆ ಮೈಸೂರಿನಲ್ಲಿ ಭರ್ಜರಿ ಸಿದ್ದತೆ ನಡೆದಿದೆ. ಇದರ ಮಧ್ಯೆ ಅಂಬಾರಿ ಆನೆ ʼಅಭಿಮನ್ಯು ನೇತೃತ್ವದ ಆನೆಗಳಿಗೆ ಮರಳಿನ ಮೂಟೆ ಹೊರುವ ತಾಲೀಮು ನಡೆಸಲಾಗುತ್ತದೆ.  ಕ್ಯಾಪ್ಟನ್ ಅಭಿಮನ್ಯು , ಧನಂಜಯ , ಗೋಪಾಲಸ್ವಾಮಿ , ಮಹೇಂದ್ರ , ಭೀಮ ಆನೆಗಳಿಗೆ ಭಾರ ಹೊರುವ ತಾಲೀಮು ನಡೆಯಲಿದೆ.

ಮೊದಲ ದಿನ ಅಭಿಮನ್ಯುಗೆ 300 ಕೆ.ಜಿ.ಯಷ್ಟು ಮರಳು ಮೂಟೆ ಹೊರೆಸಿ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತದೆ ಹಂತ ಹಂತವಾಗಿ 800 ಕೆ.ಜಿ.ವರೆಗೆ ಭಾರ ಹೊರಿಸಿ ಅಭ್ಯಾಸ ನಡೆಸಲಾಗುತ್ತದೆ. ಡಿಸಿಎಫ್ ಕರಿಕಾಳನ್ ನೇತೃತ್ವದಲ್ಲಿ ಗಜಪಡೆಗೆ ಭಾರ ಹೊರಿಸುವ ತಾಲೀಮು ನಡೆಯಲಿದೆ.

Key words: Mysore dasara-workout- gajapade