ದಸರ ಮಹೋತ್ಸವ ಯಶಸ್ವಿ : ಮೈಸೂರು ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದ ಪ್ರತಾಪಸಿಂಹ

Promotion

 

ಮೈಸೂರು, ಅ.09, 2019 : ( www.justkannada.in news ) ಪೊಲೀಸ್ ಕಾನ್ಸಟೇಬಲ್ ರಿಂದ ಹಿಡಿದು ಪೊಲೀಸ್ ಕಮಿಷನರ್ ತನಕ ಎಲ್ಲರೂ ದಸರ ಮಹೋತ್ಸವದ ಸಂದರ್ಭದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ

‘ ಮಹಿಷ ದಸರಾ’ ವಿಚಾರದಲ್ಲಿ ಪೊಲೀಸರ ನಡುವಿನ ವಾಗ್ವಾದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು ಹೀಗೆ…
ಮಾಧ್ಯಮ ಮಿತ್ರರು ಮನಸ್ಸಿನಲ್ಲಿ ಏಟು ಇಟ್ಟುಕೊಳ್ಳಬೇಡಿ. 29 ನೇ ತಾರೀಖು ಚಾಮುಂಡಿಗೆ ಪುಷ್ಪಾರ್ಚನೆ ಮಾಡಿ ನಾಡ ಅಧಿದೇವತೆ ಅಂಥ ಹೊತ್ತು ಮೆರೆದು ಕೊಂಡಾಡುತ್ತೇವೆ. ಆದರೆ 27 ನೇ ತಾರೀಖಿನಂದು ಆಕೆಯ ಬಗ್ಗೆ ಅವಳು, ಇವಳು, ಆ ಭಾಷೆಯನ್ನು ಹೇಳಲಿಕ್ಕೆ ಬಯಸಲ್ಲ ಇಲ್ಲಿ. ರವಿಕೆ, ಸೀರೆ ಬಗ್ಗೆ ಮಾತನಾಡಲು ಅವರು ಅವಕಾಶಕೊಟ್ಟು 29 ನೇ ತಾರೀಕು ಪುಷ್ಪಾರ್ಚನೆ ಮಾಡಿದ್ರೆ ಆ ದೇವರು ಮೆಚ್ಚಲ್ಲ. ಸಮಾಜನೂ ಮೆಚ್ಚಲ್ಲ. ಅದಕ್ಕೆ ತಡೆ ಹಾಕುವ ಸಲುವಾಗಿ ಕೆಲವೊಂದು ಕೆಲಸವನ್ನು ಮಾಡಿದ್ದೇವೆ ಅದಕ್ಕೆ ಬೇರೆ ಅನ್ಯತಾ ಭಾವಿಸುವ ಅವಶ್ಯಕತೆ ಇಲ್ಲ.
ಪೊಲೀಸ್ ಕಮಿಷನರ್ ಇರಬಹುದು, ಡಿಸಿಪಿ ಇರಬಹುದು ವೈಯಕ್ತಿಕವಾಗಿ ನಾನೇ ಹೋಗಿ ನನ್ನ ಮನಸ್ಸಿಗೆ ನೋವಾಗಿತ್ತು, ಘಾಸಿಯಾಗಿತ್ತು, ಇಷ್ಟಾದರು ಸಹ ಅಲ್ಲಿ ಅಪಚಾರ ಮಾಡ್ಲಿಕ್ಕೆ ಶಾಮಿಯಾನ ಹಾಕ್ತಿದ್ದಾರೆ ಎಂದು ಆ ಸಂದರ್ಭದಲ್ಲಿ ಆ ಒಂದು ಆವೇಷದಲ್ಲಿ ಮಾತನಾಡಿದ್ದೇನೆ. ಕ್ಷಮಿಸಿ ಅಂತ ಅವರ ಬಳಿಯೂ ಕೇಳಿಕೊಂಡಿದ್ದೇನೆ. ಅವರೆಲ್ಲರೂ ಕೂಡ ನಮಗೆ ಒಂದು ಕುಟುಂಬದ ರೀತಿ ಕೆಲಸ ಮಾಡಿದ್ದೇವೆ. ಬೇರೆನೂ ಯೋಚನೆ ಮಾಡಬೇಡಿ ಎಂದರು.

key words : mysore-dasara-police-done-good-job-mp-prathap-simha-mysore