ಮೈಸೂರು ಅರಮನೆಗೆ ಆಗಮಿಸಿದ ಉತ್ಸವ ಮೂರ್ತಿ: ಸಾಂಪ್ರದಾಯಿಕ ಪೂಜೆ ಸಲ್ಲಿಕೆ.

kannada t-shirts

ಮೈಸೂರು,ಅಕ್ಟೋಬರ್,5,2022(www.justkannada.in):  ಮೈಸೂರು ದಸರಾ ಜಂಬೂ ಸವಾರಿಮೆರವಣಿಗೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದ್ದು ಈ ನಡುವೆ ಮೈಸೂರು ಅರಮನೆಗೆ ಆಗಮಿಸಿದ ಉತ್ಸವ ಮೂರ್ತಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.

ಚಾಮುಂಡಿಬೆಟ್ಟದಿಂದ ತೆರೆದ ವಾಹನದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನ ಮೆರವಣಿಗೆ ಮೂಲಕ ತರಲಾಯಿತು. ಅರಮನೆಯ ರಾಜಮಾರ್ತಾಂಡ ದ್ವಾರದಿಂದ ಪ್ರವೇಶಿಸಿದ ಉತ್ಸವಮೂರ್ತಿಗೆ ಕಲಾತಂಡಗಳ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ಮಾಡಲಾಯಿತು.

ಮಧ್ಯಾಹ್ನ 2.37 ರಿಂದ 2.50ರ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಸಿಎಂ  ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಲಿದ್ದಾರೆ.

ಸಂಜೆ 5. 07  ರಿಂದ 5.18ರ ಶುಭ ಮೀನಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.  ಮೈಸೂರು ಅರಮನೆಯಿಂದ ಪ್ರಾರಂಭವಾಗುವ ಜಂಬೂಸವಾರಿ ಮೆರವಣಿಗೆ ಕೆ.ಆರ್ ರಸ್ತೆ ಆಯುರ್ವೇದಿಕ್ ವೃತ್ತ ಆರ್ ಎಂಸಿ, ತಿಲಕ್ ನಗರ ಮೂಲಕ ಬನ್ನಿ ಮಂಟಪ ತಲುಪಲಿದೆ.

Key words: mysore-dasara-palace-chamundeshwari-jamboosavari

website developers in mysore