ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆ: ಸಂತಸ ಹಂಚಿಕೊಂಡ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ…

Promotion

ಮೈಸೂರು,ಆ,14,2019(www.justkannada.in): ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ತಮ್ಮನ್ನ ಆಯ್ಕೆ  ಮಾಡಿರುವುದಕ್ಕೆ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಸಂತಸ ಹಂಚಿಕೊಂಡಿದ್ದಾರೆ.

ನನ್ನನ್ನ ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿದ್ದು ಸಂತೋಷವಾಗಿದೆ. ಸರ್ಕಾರಕ್ಕೆ ನನ್ನ ಧನ್ಯವಾದ ತಿಳಿಸುತ್ತೇನೆ ಎಂದು ಎಸ್.ಎಲ್ ಭೈರಪ್ಪ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಹಿರಿಯ ಸಾಹಿತಿ ಎಸ್‌.ಎಲ್.ಭೈರಪ್ಪ, ನಾನು ಎರಡು ಮೂರು ಬಾರಿ ಹತ್ತಿರದಿಂದ ದಸರಾ ನೋಡಿದ್ದೇನೆ ಅಷ್ಟೇ. 1949ರಿಂದಲೂ ದಸರಾ ನೋಡುತ್ತಾ ಬಂದಿದ್ದೇನೆ. ಅದರ ಬಗ್ಗೆ ಮಾತನಾಡುವಷ್ಟು ನೆನಪುಗಳು ನನ್ನಲ್ಲಿ ಇಲ್ಲ. ಆಗ ಮಹಾರಾಜರು ಅದ್ದೂರಿಯಾಗಿ, ವೈಭವದಿಂದ ದಸರಾ ನಡೆಸುತ್ತಿದ್ದರು.ಈಗ ನನ್ನನ್ನ ಆಯ್ಕೆ ಮಾಡಿರೋದು ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಳೆದ ವರ್ಷ ಕೊಡಗಿಗೆ ಮಳೆ ಬಂದಾಗ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ನೀರು ಕೇಳುವ ತಮಿಳುನಾಡಿನಿಂದ ಕೊಡಗಿಗೆ ಹಣ ಕೇಳಿ ಎಂದದ್ದೆ. ಅವರು ನನ್ನ ಪತ್ರಕ್ಕೆ ಉತ್ತರವು ಬರೆಯಲಿಲ್ಲ ಅದನ್ನ ಗಂಭೀರವಾಗಿಯೂ ಪರಿಗಣಿಸಲಿಲ್ಲ. ಈಗಲೂ ಅದೆ ಒತ್ತಾಯ ಮಾಡ್ತಿನಿ. ರಾಜ್ಯದಲ್ಲಿ ಹೆಚ್ಚು ನೆರೆ ಬಂದಿದೆ. ನಮ್ಮ ಬಳಿ ಇಲ್ಲದಿದ್ದಾಗಲೂ ನೀರು ಕೇಳುವ ತಮಿಳುನಾಡಿನ ನಿಲುವು ಏನು ಅಂತ ಕೇಳಿ. ಅವರು ಎಷ್ಟು ಹಣ ನಮ್ಮ ರಾಜ್ಯಕ್ಕೆ ಕೊಡ್ತಾರೆ ಕೇಳಿ ಎಂದು ಆಗ್ರಹಿಸಿದರು.

ಹಾಗೆಯೇ ಈ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದರೆ ನಾಳೆ ಅದು ಉಪಯೋಗ ಆಗಲಿದೆ. ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ ಸರ್ಕಾರವನ್ನ ಈ ವಿಷಯದಿಂದ ಒತ್ತಾಯಿಸುತ್ತೇನೆ. ದಸರಾ ಆಚರಣೆಯಿಂದ ಸರ್ಕಾರಕ್ಕೆ ಎಷ್ಟು ಲಾಭ ಬರುತ್ತದೊ ಕೇಳಿ. ಒಂದಷ್ಟು ಹಣ ಉಳಿತಾಯ ಮಾಡಬಹುದು ಅಷ್ಟೆ. ಆದರೆ ಇಂದರಿಂದ ಆರ್ಥಿಕವಾಗಿ ಕೂಡ ಅದಾಯ ಹೆಚ್ಚಾಗಲಿದೆ ಎಂದು ಎಸ್ ಎಲ್ ಭೈರಪ್ಪ ಹೇಳಿದರು.

ಎಸ್ ಎಲ್ ಬೈರಪ್ಪ ಅಭಿಮಾನಿಗಳಿಂದ ಸಂಭ್ರಮಾಚರಣೆ….

ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ದಸರಾ ಉದ್ಘಾಟಕರಾಗಿ ಆಯ್ಕೆ  ಮಾಡಿದ ಹಿನ್ನೆಲೆ, ಎಸ್ ಎಲ್ ಬೈರಪ್ಪ ಅವರ ಅಭಿಮಾನಿಗಳು ಸಿಹಿ ಹಂಚಿ  ಸಂಭ್ರಮಾಚರಣೆ ಮಾಡಿದರು. ಅಲ್ಲದೆ ಅಭಿಮಾನಿಗಳಿಂದ ಎಸ್ ಎಲ್ ಭೈರಪ್ಪರಿಗೆ ಅಭಿನಂದನೆಯ ಮಹಾಪೂರ ಹರಿದು ಬಂದಿತು.

Key words: Mysore Dasara – inauguration –Senior Writer- SL bhairappa