ದಸರಾ ಗಜಪಡೆಗೆ ನಾಳೆ ಅಥವಾ ನಾಳಿದ್ದು ತಾಲೀಮು ಆರಂಭ : ಈ ಬಾರಿಯೂ ಅರ್ಜುನನೇ ಬಲಶಾಲಿ.

ಮೈಸೂರು,ಆಗಸ್ಟ್,11,2022(www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಒಂದುವರೆ ತಿಂಗಳಿಗೂ ಮೊದಲೇ ಸಿದ್ಧತೆಗಳು ಆರಂಭವಾಗಿದ್ದು, ಆರಮನೆಗೆ ಆಗಮಿಸಿರುವ ಗಜಪಡೆ ಆನೆಗಳಿಗೆ ನಾಳೆ ಅಥವಾ ನಾಡಿದ್ದು ತಾಲೀಮು ಆರಂಭವಾಗಲಿದೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಅರಣ್ಯಾಧಿಕಾರಿ ಕರಿಕಳಾನ್ ಅವರು, ಆಗಸ್ಟ್ 14 ರಿಂದ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭವಾಗುತ್ತದೆ. ನಮಗೆ ಆನೆಗಳ ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಿಲ್ಲ. ಆನೆಗಳನ್ನ ಆರೋಗ್ಯ ಕಾಪಾಡುವುದಷ್ಟೇ ನಮ್ಮ ಉದ್ದೇಶ. ಆನೆಗಳಿಗೆ ಈಗ ಪ್ರೋಟಿನ್ ಆಹಾರ ಹೆಚ್ಚಿಸುತ್ತೇವೆ. ದಸರಾ ಮುಗಿಯುವುದರೊಳಗೆ ಎಲ್ಲಾ ಆನೆಗಳ ತೂಕ ಹೆಚ್ಚು ಕಮ್ಮಿ 500 ಕೆ.ಜಿ ಹೆಚ್ಚಾಗುತ್ತದೆ ಎಂದು ಹೇಳಿದರು.

ದಸರಾ ಗಜಪಡೆಗಳ ತೂಕ ಪ್ರಕ್ರಿಯೆ: ಈ ಬಾರಿಯೂ ಅರ್ಜುನನೇ ಬಲಶಾಲಿ.

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2022ರ ಹಿನ್ನೆಲೆ ನಗರದ ‌ ದೇವರಾಜ ಮೊಹಲ್ಲಾದಲ್ಲಿ ಗುರುವಾರ ಬೆಳಗ್ಗೆ ಮೈಸೂರಿಗೆ ಆಗಮಿಸಿರುವ ಗಜಪಡೆಯ ತೂಕ ಹಾಕಲಾಯಿತು. ಲಾರಿಗಳಿಗೆ ತೂಕ ಹಾಕುವ ಸಾಯಿ ವೇವ್ ಬ್ರಿಡ್ಜ್ ನಲ್ಲಿ ತೂಕ ಪ್ರಕ್ರಿಯೆ ನಡೆಯಿತು.  ಬರೋಬ್ಬರಿ 5660 ಕೆ.ಜಿ  ಹೊಂದಿರುವ ಅರ್ಜುನ ಈ ಬಾರಿ ಕೂಡ ಬಲಶಾಲಿ ಆಗಿದ್ದಾನೆ. ಇದರ ಜೊತೆಗೆ ಕಾವೇರಿ‌ 3100 ಕೆಜಿ, ಅಭಿಮನ್ಯು 4770 ಕೆಜಿ, ಮಹೇಂದ್ರ 4250 ಕೆಜಿ, ಲಕ್ಷ್ಮೀ  2920 ಕೆಜಿ, ಚೈತ್ರ 3050 ಕೆಜಿ, ಭೀಮ 3920 ಕೆಜಿ, ಧನಂಜಯ 4810 ಕೆಜಿ ಗೋಪಾಲಸ್ವಾಮಿ 5140 ಕೆ.ಜಿ ತೂಕವನ್ನ ಹೊಂದಿವೆ.

Key words: mysore-dasara-gajapade-workout-arjuna- strong