ಇಂದು ಅರಮನೆ ಅಂಗಳಕ್ಕೆ ಆಗಮಿಸುವ ದಸರಾ ಗಜಪಡೆ ಸ್ವಾಗತಕ್ಕೆ ಜಿಲ್ಲಾಡಳಿತ ಸಜ್ಜು…..

Promotion

ಮೈಸೂರು, ಆಗಸ್ಟ್ 25, 2019 (www.justkannada.in): ಕಾಡಿನಿಂದ ನಾಡಿಗೆ ಆಗಮಿಸಿರುವ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜ ಪಡೆ  ಇಂದು ಮೈಸೂರು ಅರಮನೆಯಲ್ಲಿ ಪ್ರವೇಶಿಸಲಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಮೈಸೂರು ಅರಮನೆಗೆ ಮೊದಲ ತಂಡದ 6 ಆನೆಗಳು ಆಗಮಿಸಲಿದೆ.

ಹುಣಸೂರಿನ ವೀರನಹೊಸಹಳ್ಳಿಯಿಂದ ನಗರಕ್ಕೆ ಆಗಮಿಸಿದ ಆನೆಗಳು ಅಶೋಕಪುರಂನ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದೆ. ಇಂದು ಬೆಳಗ್ಗೆ ಅರಣ್ಯ ಭವನದಿಂದ ಹೊರಡಲಿರುವ ಆನೆಗಳು ಅಶೋಕಪುರಂ ಮುಖ್ಯ ರಸ್ತೆ, ರಾಮಸ್ವಾಮಿ ವೃತ್ತ ಬಳಸಿಕೊಂಡು ಚಾಮರಾಜ ಜೋಡಿ ರಸ್ತೆ ಮೂಲಕ ಅರಮನೆ ಪ್ರವೇಶಿಸಲಿದೆ.

ಅರಮನೆ ಅಂಗಳಕ್ಕೆ ಇಂದು ಆಗಮಿಸುವ ಮೊದಲ ಹಂತದ ದಸರಾ ಗಜಪಡೆಯ ಆನೆಗಳಿಗೆ ಸ್ವಾಗತ ಕೋರಲು ಜಿಲ್ಲಾಡಳಿಯ ಸಜ್ಜಾಗಿದೆ. ಮಧ್ಯಾಹ್ನ 12 ಗಂಟೆಗೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಗಜಪಡೆ ಸ್ವಾಗತ ಕೋರಲಾಗುತ್ತದೆ.ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ನಡೆಯುವ ಸ್ವಾಗತ ಕಾರ್ಯಕ್ರಮ ನಡೆಯಲಿದ್ದು,  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ದಸರಾ ಗಜಪಡೆಗಳಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅರಮನೆಗೂ ಮುನ್ನ ಅರಣ್ಯ ಭವನದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಿದ್ದು, ಆನೆಗಳಿಗೆ ಅರಣ್ಯ ಭವನದಿಂದ ಅರಣ್ಯ ಅಧಿಕಾರಿಗಳು ಬೀಳ್ಕೊಡಲಿದ್ದಾರೆ.

key words: mysore-dasara-gajapade-palace-welcome