Friday, October 2, 2026

BDA Apartments

ದೆಹಲಿ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ನಗದು ಪತ್ತೆ: ತನಿಖೆ ಆರಂಭಿಸಿದ ಸುಪ...
Home Front Page ಇಂದು ಸಂಜೆ ಸಿಎಂ ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಸಭೆ..

ಇಂದು ಸಂಜೆ ಸಿಎಂ ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಸಭೆ..

ಬೆಂಗಳೂರು,ಆ,26,2019(www.justkannada.in): ಇಂದು ಸಿಎಂ  ಬಿಎಸ್ ಯಡಿಯೂರಪ್ಪ ನೇತೃತ್ವದ  ಬಿಜೆಪಿ ಸರ್ಕಾರದ  ಮೊದಲ ಸಚಿವ  ಸಂಪುಟ  ಸಭೆ ನಡೆಯಲಿದೆ.

ಇಂದು ಸಂಜೆ  4 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ. ಎಸ್  ಯಡಿಯೂರಪ್ಪ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ.  ರಾಜ್ಯದಲ್ಲಿ  ಉಂಟಾಗಿರುವ  ಪ್ರವಾಹ,  ಕೇಂದ್ರ ಸರ್ಕಾರದಿಂದ ಪರಿಹಾರ ಕುರಿತು ಸಿಎಂ ಬಿಎಸ್ ವೈ ಚರ್ಚಿಸಲಿದ್ದಾರೆ. ಸಭೆಯಲ್ಲಿ ಸಚಿವರ ಖಾತೆ ವಿಚಾರವಾಗಿ ಚರ್ಚಿಸುವ ಸಾಧ್ಯತೆ ಇದೆ.

ಈಗಾಗಲೇ  ರಾಜ್ಯದಲ್ಲಿ ಮೂವರು ಉಪ ಮುಖ್ಯಮಂತ್ರಿ ಸ್ಥಾನ  ಸೃಷ್ಠಿಸಲು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗುತ್ತಿದ್ದು, ಈ ಕುರಿತು ಸಭೆಯಲ್ಲಿ  ಚರ್ಚಿಸುವ  ಸಾಧ್ಯತೆ. ಇದೆ. ಇದು  ಆಡಳಿತಕ್ಕೆ  ಬಂದ  ಬಿಜೆಪಿ ಸರ್ಕಾರದ ಮೊದಲ ಸಂಪುಟ ಸಚಿವರ ಸಭೆ ಇದಾಗಿದ್ದು,  ಹಲವು ಜನಪರ ಯೋಜನೆಗಳ ಜಾರಿಯ ಬಗ್ಗೆ ಮಾತುಕತೆ ನಡೆಯಲಿದೆ. ಇನ್ನೂ ಈ ಸಭೆಗೆ  ಬಿಎಸ್ವೈ  ಸೇರಿದಂತೆ  l7ಮಂದಿ ಸಚಿವರು  ಭಾಗಿಯಾಗಲಿದ್ದಾರೆ.

Key words: CM BS Yeddyurappa- cabinet meeting- this evening.