ಯಶಸ್ವಿಯಾಗಿ ಎರಡನೇ ಇನ್ನಿಂಗ್ಸ್ ಪೂರ್ಣಗೊಳಿಸಿದ ಅಭಿಮನ್ಯು..!

Promotion

 

ಮೈಸೂರು, ಅ.15, 2021 : (www.justkannada.in news) : ಕಳೆದ ವರ್ಷವ್ಷಟೆ ಅಂಬಾರಿ ಆನೆಯ ಪಟ್ಟಕ್ಕೇರಿದ್ದ ಅಭಿಮನ್ಯು, ತನ್ನ ಕರ್ತವ್ಯ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಗಜರಾಜ ಅಭಿಮನ್ಯು ಅಂಬಾರಿ ಹೊತ್ತು ಅರಮನೆ ಆವರಣದಲ್ಲಿ ರಾಜಗಾಂಬಿರ್ಯದಿಂದ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆಯಿತು. ಅಭಿಮನ್ಯುಗೆ ಕುಮ್ಕಿ ಆನೆಗಳಾದ ಚೈತ್ರ ಮತ್ತು ಕಾವೇರಿ ಸಾಥ್ ನೀಡಿತು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆಯೇ ಈ ಬಾರಿ ತಾಯಿಯೂ ಸಹ ಜಂಬೂಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಅಂಬಾ ವಿಲಾಸ ಅರಮನೆ ಆವರಣದ 400 ಮೀಟರ್ ನಲ್ಲಿ ಮೆರವಣಿಗೆ ಸಾಗಿತು.

ಪ್ರತಿ ವರ್ಷ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ದಸರಾ ವೀಕ್ಷಣೆಗೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಮೆರವಣಿಗೆ ವೀಕ್ಷಿಸಲು ಸರಕಾರ ಕೇವಲ 500 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿತ್ತಾದರೂ, ಸಾವಿರಾರು ಮಂದಿ ಅರಮನೆ ಆವರಣದಲ್ಲಿ ಜಮಾಯಿಸಿದ್ದದ್ದು ವಿಶೇಷ.

30 ನಿಮಿಷಗಳಲ್ಲಿ ಮುಕ್ತಾಯ:

ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಬಹಳ ಸರಳವಾಗಿ ನಡೆಯಿತು. ಕೇವಲ 30 ನಿಮಿಷಗಳಲ್ಲಿ ಜಂಬೂ ಸವಾರಿ (Jambu Savari) ಕೊನೆಗೊಂಡಿತು. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯ ಮೇಲೆ ಸರ್ವಾಲಂಕಾರ ಭೂಷಿತಳಾಗಿ ವಿರಾಜಿತಳಾದ ನಾಡದೇವಿ ಚಾಮುಂಡೇಶ್ವರಿಯ ಮೆರವಣಿಗೆ ಅರಮನೆಯ ಆವರಣದಲ್ಲಿ ಸಾಗಿತು.

key words : mysore-dasara-festival-simple-dasara-karnataka