ಮೈಸೂರು ದಸರಾ ಆಚರಣೆ ವಿಚಾರ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್…

Promotion

ಮೈಸೂರು,ಸೆಪ್ಟಂಬರ್,3,2020(www.justkannada.in): ಕೊರೋನಾ ಸಂಕಷ್ಟ ಹಿನ್ನೆಲೆ ಈ ಬಾರಿ ಸರಳ ಹಾಗೂ ಸಂಪ್ರದಾಯ ದಸರಾ ಆಚರಣೆ ಮಾಡುವುದಾಗಿ ಈಗಾಗಲೇ ಸಿಎಂ ಬಿ.ಎಸ್ ಯಡಿಯೂರಪ್ಪ  ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬಾರಿ ಮೈಸೂರು ದಸರಾ ಆಚರಣೆಗೆ ರೈತ ಮುಖಂಡ ಕುರುಬೂರು ಶಾಂತ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.jk-logo-justkannada-logo

ಈ ಬಾರಿ ಅದ್ಧೂರಿ ದಸರೆಯೂ ಬೇಡ ಸರಳ ದಸರೆಯೂ ಬೇಡ. ಒಂದು ವೇಳೆ ದಸರಾ ಹಾಗೂ ಪಂಚಲಿಂಗ ದರ್ಶನ ನಡೆಸೋದಾದರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ರೈತಮುಖಂಡ ಕುರುಬೂರು ಶಾಂತಕುಮಾರ್ ಎಚ್ಚರಿಕೆ  ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕುರುಬೂರು ಶಾಂತಕುಮಾರ್,  ಕಳೆದ ನಾಲ್ಕೈದು ತಿಂಗಳಿನಿಂದ ಜನ ಕೊರೋನಾ ಸಂಕಷ್ಟದಿಂದ ನಲುಗಿ ಹೋಗಿದ್ದಾರೆ. ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೇ ಸಾಯುತ್ತಿದ್ದಾರೆ. ದೇಶದ ಜನ ಸಂಕಷ್ಟದಲ್ಲಿದ್ದಾರೆ, ಈ ಬಾರಿ ದಸರಾ ಆಚರಣೆ ನಿಲ್ಲಿಸಿದರೆ ಏನೂ ಆಗದು. ದಸರಾ ಹಾಗೂ ಪಂಚಲಿಂಗ ದರ್ಶನಕ್ಕೆ ನೂರಾರು ಕೋಟಿ ಹಣ ವ್ಯಯ ಮಾಡುವ ಅವಶ್ಯಕತೆ ಇಲ್ಲ, ಇನ್ನು ಸರ್ಕಾರದ ಬಳಿ ಹಣವೂ ಇಲ್ಲ. ಇಂತಹ  ಸಂದರ್ಭದಲ್ಲಿ ದಸರಾ ಆಚರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.mysore-dasara-farmer-leader-kurubur-shanthakumar-warned-government

ಹಾಗೆಯೇ ಸರ್ಕಾರ ಒಂದು ವೇಳೆ ದಸರಾ ಹಾಗೂ ಪಂಚಲಿಂಗ ದರ್ಶನ ನಡೆಸುವುದಾದರೇ  ಸರ್ಕಾರದ ವಿರುದ್ದ ಹೋರಾಟ ಮಾಡುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Key words: Mysore –dasara- Farmer leader -Kurubur Shanthakumar – warned -government.