ಸೆ. 26ರಿಂದ ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾರಂಭ: ಈ ಬಾರಿ ವಿಶೇಷತೆ ಏನು..?

Promotion

ಮೈಸೂರು,ಆಗಸ್ಟ್,24,2022(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಒಂದುವರೆ ತಿಂಗಳ ಮುಂಚೆಯೇ ಸಕಲ ಸಿದ್ಧತೆ ಮಾಡಲಾಗುತ್ತಿದ್ದು ಈ ನಡುವೆ  ಸೆಪ್ಟಂಬರ್ 26 ರಿಂದ ಈ ಬಾರಿ ದಸರಾ ವಸ್ತು ಪ್ರದರ್ಶನ ಪ್ರಾರಂಭವಾಗಲಿದೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಮೂರ್ತಿ , ವಿಶೇಷ ಕಾರ್ಯಕ್ರಮಗಳೊಂದಿಗೆ 90 ದಿನಗಳ ಕಾಲ ವಸ್ತುಪ್ರದರ್ಶನ  ಆಯೋಜನೆ ಮಾಡಲಾಗಿದೆ. ಈ ಬಾರಿಯ ವಸ್ತುಪ್ರದರ್ಶನದಲ್ಲಿ ಪುನೀತ್ ರಾಜ್ ಕುಮಾರ್ ನೆನಪಿಗಾಗಿ 7 ಸ್ಯಾಂಡ್ ಮ್ಯೂಸಿಯಂ ಆಯೋಜನೆ ಮಾಡಲಾಗಿದೆ, ಯೋಗ 3ಡಿ ವಿಡಿಯೋ ಮ್ಯಾಪಿಂಗ್ ಇರಲಿದೆ ಎಂದರು.

ಹಾಗೆಯೇ ಆವರಣದಲ್ಲಿ ವೆಜ್ ಅಂಡ್ ನಾನ್ ವೆಜ್ ಪ್ರತ್ಯೇಕ ಸ್ಟಾಲ್ ಇರಲಿದೆ.  6 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಮರಳಾಕೃತಿ ನಿರ್ಮಿಸಲಾಗುತ್ತದೆ, ಆ 6 ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನ  ಇನ್ನು ಆಯ್ಕೆ ಮಾಡಿಲ್ಲ. ಇನ್ನು ಕಾವೇರಿ ಬಹುಮಾಧ್ಯಮ ಕಲಾ ಗ್ಯಾಲರಿ ಉದ್ಘಾಟನೆಯಾಗಲಿದೆ.

ವಸ್ತುಪ್ರದರ್ಶನದ ಅವರಣವನ್ನ ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಣೆ ಹಿನ್ನೆಲೆ ಪ್ಲಾಸ್ಟಿಕ್ ಬಳಸುವಂತಿಲ್ಲ. ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು  ಪ್ರಾಧಿಕಾರದ ವತಿಯಿಂದಲೇ  ಆರ್ ಓ ಪ್ಲಾಂಟ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಎರಡು ವರ್ಷಗಳ ಕೋವಿಡ್ ಬಳಿಕ ಅದ್ದೂರಿ ವಸ್ತು ಪ್ರದರ್ಶನ ನಡೆಯುತ್ತಿದ್ದು, ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ನಗರದ ಜನತೆ ಆಗಮಿಸುವಂತೆ ಮಿರ್ಲೆ ಶ್ರೀನಿವಾಸ್ ಗೌಡ ಮನವಿ ಮಾಡಿದ್ದಾರೆ.

Key words: Mysore dasara- exhibition –sep 26

ENGLISH SUMMARY…

Mysuru Dasara exhibition from Sept. 26: What are this year’s specialities?
Mysuru, August 24, 2022 (www.justkannada.in): Preparations for the historic Mysuru Dasara have already begun. The popular Mysuru Dasara exhibition will begin from September 26 this year.
Addressing a press meet in Mysuru today, Karnataka Exhibition Authority Chairman Mirle Srinivasamurthy informed that the dasara exhibition will be held for 90 days along with several special programs. A sand museum in memory of Sandalwood’s power star Puneeth Rajkumar will be organized at the Dasara exhibition, with Yoga 3D video mapping.
Vegetarian and non vegetarian food stalls will be there. The sand museum will include replicas of 6 freedom fighters in sand. However, the six freedom fighters names are yet to be finalized. Kaveri Multimedia Art Gallery will be inaugurated.
The Dasara Exhibition grounds has been announced as plastic free zone and hence plastic usage has been prohibited. The Authority will make arrangements to provide an RO plant for drinking water purpose, and to prevent plastic usage. Plans have been made to conduct the Dasara exhibition this year in a grand manner, as it was not possible to run the exhibition for the last two years due to Covid. Srinivasgowda has also urged the people to come and see the exhibition in large numbers.
Keywords: Mysuru Dasara Exhibition/ September 26/specialities