ತಾಯಿ ಚಾಮುಂಡೇಶ್ವರಿಗೆ ಜಿಲ್ಲಾಡಳಿತದ ಸೀರೆಯನ್ನೇ ಉಡಿಸಿ- ಸಚಿವ ವಿ.ಸೋಮಣ್ಣಗೆ ಮನವಿ ಮಾಡಿದ ಇತಿಹಾಸ ತಜ್ಞ ಪ್ರೋ.ನಂಜರಾಜೇ ಅರಸ್..

Promotion

ಮೈಸೂರು,ಸೆ,24,2019(www.justkannada.in): ಕಳೆದ ಬಾರಿ ದಸರಾದಲ್ಲಿ  ತಾಯಿ ಚಾಮುಂಡೇಶ್ವರಿಗೆ ಎರಡು ಸೀರೆ ಉಡಿಸಿ ವಿವಾದ ಸೃಷ್ಟಿಯಾಗಿತ್ತು. ಇದೀಗ ಈ ವಿವಾದಕ್ಕೆ ತೆರೆ ಎಳೆಯಲು ಇತಿಹಾಸ ತಜ್ಞ ಪ್ರೋ.ನಂಜರಾಜೇ ಅರಸ್ ಮುಂದಾಗಿದ್ದಾರೆ.

ಚಾಮುಂಡೇಶ್ವರಿಗೆ ಜಿಲ್ಲಾಡಳಿತದ ಸೀರೆಯನ್ನೇ ಉಡಿಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣಗೆ ಇತಿಹಾಸ ತಜ್ಞ ಪ್ರೋ.ನಂಜರಾಜೇ ಅರಸ್ ಹೊಸ ಬೇಡಿಕೆ‌ ಮುಂದಿಟ್ಟಿದ್ದಾರೆ.  ಇಂದು ಬೆಳೆಗ್ಗೆ  ಸಚಿವ ಸೋಮಣ್ಣ ಅವರನ್ನ ಭೇಟಿ ಮಾಡಿ  ಸೀರೆ ಉಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ತೆರೆ ಎಳೆಯಲು ಪ್ರೊ. ನಂಜರಾಜೇ ಅರಸ್ ಯತ್ನಿಸಿದರು.

ಕಳೆದ ಬಾರಿ ದಸರಾದಲ್ಲಿ ಎರಡು ಸೀರೆ ಉಡಿಸಿ ವಿವಾದ ಸೃಷ್ಟಿಯಾಗಿತ್ತು. ಈ ಹಿನ್ನಲೆಯಲ್ಲಿ ಜನಪ್ರತಿನಿಧಿಗಳಿಗೆ ಅವಕಾಶ ನೀಡದಂತೆ ನಂಜರಾಜೇ ಅರಸ್ ಮನವಿ ಮಾಡಿದರು.

ನಂಜರಾಜೇ ಅರಸ್  ಅವರ ಮನವಿ ಪುರಸ್ಕರಿಸಿದ ಸಚಿವ ವಿ.ಸೋಮಣ್ಣ, ದಸರಾ ಉತ್ಸವ ಮೂರ್ತಿಗೆ ಜಿಲ್ಲಾಡಳಿತದಿಂದಲೇ ಅಲಂಕಾರ ಮತ್ತು ಸೀರೆ ನೀಡಲಾಗುವುದು. ಹಿಂದೆ ಆಗಿದ್ದ ಗೊಂದಲವನ್ನು ತಿಳಿದುಕೊಂಡಿದ್ದೇನೆ. ಯಾರೆ ಏನೇ ಸಮರ್ಪಿಸಿದರೂ ಅದು ಚಾಮುಂಡಿ ಬೆಟ್ಟಕ್ಕೆ ಸಮರ್ಪಿಸಲಿ. ಅಂಬಾರಿಯಲ್ಲಿ ಇಡುವ ಉತ್ಸವ ಮೂರ್ತಿಗೆ ಜಿಲ್ಲಾಡಳಿತದಿಂದಲೇ ಅಲಂಕಾರ ಮಾಡಲಾಗುವುದು ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

Key words: mysore dasara- Chamundeshwari –saree- Prof. Nanjaraje Arus- appealed – Minister V. Somanna.