ಜನ ಸಂಕಷ್ಟದಲ್ಲಿರುವಾಗ ಕುಣಿದು ಕುಪ್ಪಳಿಸುವ ಯುವದಸರಾ, ತಿಂದು ತೇಗುವ ಆಹಾರಮೇಳ ಬೇಕಾ..?- ಅದ್ದೂರಿ ದಸರಾ ಬಗ್ಗೆ ಶ್ರೀನಿವಾಸ್ ಪ್ರಸಾದ್ ಟೀಕೆ …

ಮೈಸೂರು,ಸೆ,24,2019(www.justkannada.in):  ನೆರೆ ಪ್ರವಾಹ ಹಿನ್ನೆಲೆ ಜನ ಸಂಕಷ್ಟದಲ್ಲಿರುವಾಗ ಅದ್ಧೂರಿ ದಸರಾ ಆಚರಣೆ ಬೇಕಾ.. ಕುಣಿದು ಕುಪ್ಪಳಿಸುವ ಯುವದಸರಾ, ತಿಂದು ತೇಗುವ ಆಹಾರ ಮೇಳಾ ಬೇಕಾ..? ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅದ್ದೂರಿ ದಸರಾ ಬಗ್ಗೆ ಟೀಕಿಸಿದರು.

ಮೈಸೂರಿನಲ್ಲಿ ಈ ಬಗ್ಗೆ ಇಂದು ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್,  ಪ್ರವಾಹದಿಂದ ರಾಜ್ಯದ ಜನ ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಕುಣಿದು ಕುಪ್ಪಳಿಸುವ ಯುವದಸರಾ, ತಿಂದು ತೇಗುವ ಆಹಾರ ಮೇಳಾ ಬೇಕಾ..? ಜನ ಕಷ್ಟದಲ್ಲಿ ಮುಳುಗಿರುವಾಗ ಊರು ತುಂಬಾ ದೀಪಾಲಂಕಾರ ಬೇಕಾ..? ಸಿಎಂ ಬಾಯಲ್ಲಿ ಅದ್ದೂರಿ ದಸರಾ ಎನ್ನುವ ಪದ ಬರಲೇಬಾರದು. ಇದು ಜನರ ದಸರಾ ಆಗಬೇಕು. ಜನರ ದಸರಾಕ್ಕೆ ನನ್ನ ಬೆಂಬಲಿವಿದೆ. ಅದ್ದೂರಿ ದಸರಾಗೆ ನನ್ನ ಬೆಂಬಲ ಇಲ್ಲ. ಅದ್ದೂರಿ ದಸರಾ ನಡೆಯುತ್ತಿರುವ ಕಾರಣ ದಸರಾದಿಂದ ದೂರ ಇರ್ತಿನಿ ಎಂದು ಹೇಳಿದರು.

ಸಹಜವಾಗಿ ಹೆಚ್.ವಿಶ್ವನಾಥ್ ರವರು ಭೇಟಿಯಾಗಿದ್ದಾರೆ..

ಅನರ್ಹ ಶಾಸಕ ಹೆಚ್.ವಿಶ್ವನಾಥ್  ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ವಿ.ಶ್ರೀನಿವಾಸ್ ಪ್ರಸಾದ್, ನಾನು ಹಿರಿಯ ರಾಜಕಾರಣಿ. ಬಿಜೆಪಿಯಲ್ಲಿ ಇದ್ದೇನೆ. ಸಹಜವಾಗಿ ವಿಶ್ವನಾಥ್  ಭೇಟಿಯಾಗಿದ್ದಾರೆ. ಯಾವ ರೀತಿ ಚುನಾವಣೆ ಎದುರಿಸಬೇಕು ಎಂಬ ಸಲಹೆ ಕೇಳಿದ್ದಾರೆ. ಅದನ್ನ ನಾನು ಕೊಟ್ಟಿದ್ದೇನೆ. ಶುಕ್ರವಾರದ ಅನರ್ಹ ಶಾಸಕರ ಅಂತಿಮ ತೀರ್ಪು ಬರುವ ನಿರೀಕ್ಷೆ ಇದೆ ಎಂದರು.

ಇನ್ನು  ರಾಜ್ಯ ಸರಕಾರ ಭದ್ರವಾಗಿರುತ್ತೆ. ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತೆ. ಉಪ ಚುನಾವಣೆಯಲ್ಲಿ ಬಿಜೆಪಿಗೆ  ಹೆಚ್ಚಿನ ಸ್ಥಾನ ಸಿಗಲಿದೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ಮಾಡಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿಲ್ಲ‌..

ಮಾಜಿ ಸಿಎಂಗಳ ನಡುವೆ ಟ್ವೀಟ್ ವಾರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿ.ಶ್ರೀನಿವಾಸ್ ಪ್ರಸಾದ್, ಯಾರು ಹದ್ದು, ಯಾರು ಗಿಳಿ ಎಂಬುದು ಜನರಿಗೆ ಗೊತ್ತಾಗುತ್ತಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ಒಗ್ಗಟ್ಟಿನಿಂದ ಕೆಲಸಮಾಡಿಲ್ಲ‌. ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತಲೇ ಒಬ್ಬರ ಮೇಲೋಬ್ಬರು ಆರೋಪ‌ ಮಾಡುತ್ತಿದ್ದಾರೆ. ಅವರ ಹೇಳಿಕೆಗಳನ್ನ ಗಮನಿಸಿದ್ರೆ ಗೊತ್ತಾಗುತ್ತೆ. ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಅತೃಪ್ತ ಶಾಸಕನಾಗಿದ್ದ‌. ಸುಮ್ಮನೆ ಇವರು ಅನರ್ಹ ಶಾಸಕರ ವಿರುದ್ದ ಮಾತನಾಡುತ್ತಿದ್ರು. ಈಗ ಎಲ್ಲದಕ್ಕು ಉತ್ತರ ಸಿಕ್ಕಿದೆ ಎಂದು ನುಡಿದರು.

ಬೈ ಎಲೆಕ್ಷನ್ ನಲ್ಲಿ ಯಾರು ಏನೇ ಕಾರ್ಯ ತಂತ್ರ‌ ಮಾಡಿದ್ರೂ ಬಿಜೆಪಿನೇ ಹೆಚ್ಚು ಸ್ಥಾನ ಗೆಲ್ಲೋದು….

15 ಸ್ಥಾನ ಗೆಲ್ತೇವೆ ಎನ್ನುತ್ತಿರುವ ಜೆಡಿಎಸ್ ಕಾಂಗ್ರೆಸ್ ಹೇಳಿಕೆಗೆ ಟಾಂಗ್ ನೀಡಿದ  ಸಂಸದ ಶ್ರೀನಿವಾಸ ‌ಪ್ರಸಾದ್, 60 ದಿನಗಳ ಹಿಂದಿನ‌ ಫಲಿತಾಂಶವನ್ಙು ಒಮ್ಮೆ ತಿರುಗಿ ನೋಡಲಿ. ಅನರ್ಹ ಶಾಸಕರು ದುರ್ಬಲರಲ್ಲ, ಪ್ರತಿಯೊಬ್ಬರೂ ಪ್ರಬಲರೇ. ಸರ್ಕಾರದ ಆಡಳಿತ ವೈಖರಿಯಿಂದ ಅತೃಪ್ತರಾಗಿ ಹೊರಗೆ‌ ಬಂದವರು. ಬೈ ಎಲೆಕ್ಷನ್ ನಲ್ಲಿ ಯಾರು ಏನೇ ಕಾರ್ಯ ತಂತ್ರ‌ ಮಾಡಿದ್ರೂ ಬಿಜೆಪಿನೇ ಹೆಚ್ಚು ಸ್ಥಾನ ಗೆಲ್ಲೋದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಇನ್ನೂ ಭ್ರಮೆಯಲ್ಲಿದ್ದಾರೆ. ಇನ್ನು ಸಿಎಂ‌ ಆಗೋ ಕನಸು ಕಾಣುತ್ತಿದ್ದಾರೆ ಕಾಣಲಿ. 20 ತಿಂಗಳ ಹಿಂದೆ ಕಾಂಗ್ರೆಸ್ ಜೆಡಿಎಸ್ ದೋಸ್ತಿ ಮಾಡಿಕೊಂಡದ್ದು ಈಗ ಪರಸ್ಪರ ಕಿತ್ತಾಡುತ್ತಿರೋದು‌ ಜನ ನೋಡ್ತಿದ್ದಾರೆ. ವಿಶ್ಬನಾಥ್ ಹುಣಸೂರು ಬೈ ಎಲೆಕ್ಷನ್ ನಲ್ಲಿ ಸ್ಪರ್ಧೆ ಬಗ್ಗೆ ಇನ್ನು ಚರ್ಚೆ ಮಾಡಿಲ್ಲ. ಆದ್ರೆ ಈ ಬಗ್ಗೆ ಚರ್ಚೆ ಮಾಡ್ತೇವೆ. ಅನರ್ಹ ಶಾಸಕರಿಗೆ ಬಿಜೆಪಿ ಸರ್ಕಾರ ರಕ್ಷಣೆ ಕೊಡುತ್ತೆ. ಬೈ ‌ಎಲೆಕ್ಷನ್ ನಂತರ ಎಲ್ಲಾ ಅನರ್ಹ ಶಾಸಕರಿಗೂ ಮಂತ್ರಿ ಸ್ಥಾನ ಸಿಗುತ್ತೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

Key words: mysore-MP Srinivas Prasad -criticizes – Lavish Dasara