ಮೈಸೂರು ದಸರಾ : ಜಂಬೂಸವಾರಿಯಲ್ಲಿ 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸ ಸಾರುವ ಸ್ತಬ್ದಚಿತ್ರಗಳ ವಿವರ ಹೀಗಿದೆ..

Promotion

ಮೈಸೂರು,ಅಕ್ಟೋಬರ್,5,2022(www.justkannada.in): ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಗೆ ಕೆಲವೇ ಕ್ಷಣಗಳಲ್ಲಿ ಚಾಲನೆ ಸಿಗಲಿದ್ದು ಕ್ಯಾಪ್ಟನ್ ಅಭಿಮನ್ಯುವಿಗೆ ಅಂಬಾರಿ ಕಟ್ಟುವ ಕಾರ್ಯ ನಡೆಯಲಿದೆ.

ಜಂಬೂ ಸವಾರಿ ಮೆರವಣಿಗೆಯಲ್ಲಿ ಮೆರಗು ಹೆಚ್ಚಿಸುವ ಸ್ತಬ್ದಚಿತ್ರಗಳು ಪ್ರದರ್ಶನವಾಗಲಿವೆ. 31 ಜಿಲ್ಲೆಗಳ ಕಲೆ ಸಾಹಿತ್ಯ ಇತಿಹಾಸ ಸಾರುವ ಸ್ತಬ್ದಚಿತ್ರಗಳು ಜನರನ್ನ ತನ್ನತ್ತ ಸೆಳೆಯಲಿವೆ.

ಜಿಲ್ಲಾವಾರು ಸ್ತಬ್ಧಚಿತ್ರಗಳ ಪಟ್ಟಿ ಹೀಗಿದೆ.

ಚಾಮರಾಜನಗರ- ವನ್ಯಧಾಮ, ಶ್ರೀ ಮಹದೇಶ್ವರ ವಿಗ್ರಹ, ಪುನೀತ್‌ ರಾಜ್‌ ಕುಮಾರ್‌ ಪ್ರತಿಮೆ.

ಮಂಡ್ಯ- ಮಂಡ್ಯ ಜಿಲ್ಲೆಯ ದೇವಾಲಯಗಳು

ಮೈಸೂರು- ಮೈಸೂರು ಜಿಲ್ಲೆಯ ವಿಶೇಷತೆಗಳು

ರಾಯಚೂರು- ಸಿರಿಧಾನ್ಯಗಳ ಬೆಳೆಗಳ ಅಭಿಯಾನ

ರಾಮನಗರ- ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ

ಶಿವಮೊಗ್ಗ- ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಶಿಕಾರಿಪುರ

ತುಮಕೂರು- ನಿಟ್ಟೂರಿನ ಎಚ್‌ಎಎಲ್‌ ತಯಾರಿಕಾ ಘಟಕ, ಪಾವಗಡದ ಬೃಹತ್‌ ಸೋಲಾರ್‌ ಪಾರ್ಕ್‌

ಉಡುಪಿ- ಜಿ.ಐ.ಟ್ಯಾಗ್‌ ಹೊಂದಿರುವ ಕೈಮಗ್ಗ ಸೀರೆ ನೇಯ್ಗೆ, ಸಾಂಪ್ರದಾಯಿಕ ಕಲೆಗಳ ಪ್ರದರ್ಶನ

ಉತ್ತರ ಕನ್ನಡ- ಕಾರವಾರ ನೌಕಾಶಾಲೆ

ವಿಜಯಪುರ- ಸಿದ್ದರಾಮೇಶ್ವರ ದೇವಸ್ಥಾನ

ಬಾಗಲಕೋಟೆ- ಮುದೋಳ್‌ ಶ್ವಾನಗಳು, ಇಳಕಲ್‌ ಸೀರೆ

ಬಳ್ಳಾರಿ- ದುರ್ಗಮ್ಮ ದೇವಸ್ಥಾನ

ಬೆಳಗಾವ್- ಶ‍್ರೀ ರೇಣುಕಾದೇವಿ ದೇವಸ್ಥಾನ, ಕಮಲ ಬಸದಿ

ಬೆಂಗಳೂರು(ಗ್ರಾ)- ಕಪಿಲೇಶ್ವರ ದೇವಸ್ಥಾನ, ಜೈನ ಬಸದಿ

ಬೆಂಗಳೂರು(ನ)- ಕಡಲೆಕಾಯಿ ಪರಸೆ, ಬಸವಣ್ಣಗುಡಿ

ಬೀದರ್‌- ಅನುಭವ ಮಂಟಪ

ಚಿಕ್ಕಬಳ್ಳಾಪುರ- ಗ್ರೀನ್‌ ನಂದಿ, ಭೋಗನಂದೀಶ್ವರ ದೇವಸ್ಥಾನ

ಚಿಕ್ಕಮಗಳೂರು- ಸಪ್ತನದಿಗಳ ತವರು

ಚಿತ್ರದುರ್ಗ- ವಾಣಿ ವಿಲಾಸ ಜಲಾಶಯ, ಒನಕೆ ಓಬವ್ವ, ಕುದುರೆ ಮೇಲೆ ಆಸೀನರಾಗಿರುವ ಮದಕರಿ ನಾಯಕ ಪ್ರತಿಮೆ, ದೀಪಸ್ಥಂಭ

ದಕ್ಷಿಣ ಕನ್ನಡ- ಕಂಬಳ, ಹುಲಿವೇಷ, ಭೂತಕೋಲ

ದಾವಣಗೆರೆ- ಸಂತೆ ಬೆನ್ನೂರು, ಪುಷ್ಕರಣೆ

ಧಾರವಾಡ- ಸಂಗೀತ ದಿಗ್ಗಜರು

ಗದಗ- ಶ್ರೀಕ್ಷೇತ್ರ ಶ್ರೀಮಂತಗಢ, ಹೊಳಲಮ್ಮ ದೇವಿ, ಶಿವಾಜಿ

ಹಾಸನ- ಬೇಲೂರು, ಹಳೇಬೀಡ್, ಶ್ರವಣ ಬೆಳಗೊಳ ಗೊಮ್ಮಟಗಿರಿ

ಹಾವೇರಿ- ಗುರುಗೋವಿಂದ ಭಟ್ಟರು, ಸಂತ ಶಿಶುನಾಳ ಶರೀಫರು, ಮುಕ್ತೇಶ್ವರ ದೇವಾಲಯ

ಕಲಬುರ್ಗಿ- ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ

ಕೊಡಗು- ಬ್ರಹ್ಮಗಿರಿ ಬೆಟ್ಟ, ಬೃಗಂಡೇಶ್ವರ ದೇವಾಲಯ, ತಲಕಾವೇರಿ ತೀರ್ಥೋದ್ಭವ

ಕೋಲಾರ- ಬಿ.ಕೆ.ಎಸ್‌ ಅಯ್ಯಂಗಾರ್‌ ಯೋಗಥಾನ್‌, ಅಂತರಗಂಗೆ ಬೆಟ್ಟ

ಕೊಪ್ಪಳ- ಆನೆಗುಂದಿ ಬೆಟ್ಟ, ಕಿನ್ನಾಳ ಗೊಂಬೆಗಳು, ಅಂಜನಾದ್ರಿ ಬೆಟ್ಟ

ವಿಜಯನಗರ- ಉಗ್ರ ನರಸಿಂಹ, ದರೋಜಿ ಕರಡಿಧಾಮ, ಕಲ್ಲಿನ ರಥ

ಯಾದಗಿರಿ- ಸುರಪುರ ಕೋಟೆ

ಸ್ತಬ್ಧಚಿತ್ರಗಳ ಉಪಸಮಿತಿ

ಅರಮನೆ ವಾದ್ಯಗೋಷ್ಠಿ

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಸೋಮನಾಥಪುರ ದೇವಾಲಯ

ಆಜಾದಿ ಕಾ ಅಮೃತ ಮಹೋತ್ಸವ

ಇಲಾಖಾವಾರು

ಸಮಾಜ ಕಲ್ಯಾಣ ಇಲಾಖೆ- ಸಾಮಾಜಿಕ ನ್ಯಾಯ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ- ಐಟಿಐ, ಜಿಟಿಟಿಸಿ, ಕೌಶಲ ತರಬೇತಿ

ಹಾಲು ಉತ್ಪಾದಕರ ಮಹಾಮಂಡಲ- ನಂದಿನಿ ಕ್ಷೀರಧಾರೆ, ಉತ್ಪನ್ನಗಳು

ಮೈಸೂರು ವಿಶ್ವವಿದ್ಯಾಲಯ- 106 ವರ್ಷಗಳ ಇತಿಹಾಸ

ಕಾವೇರಿ ನೀರಾವರಿ ನಿಗಮ- ರೈತರು ಮತ್ತು ಸಾರ್ವಜನಿಕರಿಗೆ ಆಗುವ ಅನುಕೂಲಕಗಳು

ಸೆಸ್ಕ್-‌ ಡಿಡಿಯು ಯೋಜನೆ, ಬೆಳಕು ಯೋಜನೆ, ಪರಿವರ್ತಕ ಅಭಿಯಾನ

ವಾರ್ತಾ ಮತ್ತು ಪ್ರಚಾರ ಇಲಾಖೆ- ಇಲಾಖೆ ಕಾರ್ಯಕ್ರಮಗಳು

ಡಾ.ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮ- ಲಿಡ್ಕರ್‌ ಉತ್ಪನ್ನಗಳು

ಅಖಿಲ ಭಾರತ ವಾಕ್‌ ಮತ್ತು ಶ್ರಾವಣ ಸಂಸ್ಥೆ- ಎಲ್ಲರಿಗೂ ದಯೆ ಮತ್ತು ಪ್ರೀತಿಗಾಗಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಆರ್ಥಿಕ ಹೊರಯಿಂದ ರಕ್ಷಣೆ, ನಮ್ಮ ಕ್ಲಿನಿಕ್‌

ಸಹಕಾರ ಇಲಾಖೆ- ಸಹಕಾರ ಕ್ಷೇತ್ರದ ಯೋಜನೆಗಳು

ಮಂಡ್ಯ ಜಿಲ್ಲೆ ಮಹಾ ಕುಂಭ ಮೇಳ- ಪುಣ್ಯ ಸ್ನಾನ ಮತ್ತು ಶ್ರೀ ಮಹದೇಶ್ವರ ಜ್ಯೋತಿ ಸ್ವೀಕಾರ

ಪ್ರವಾಸೋದ್ಯಮ ಇಲಾಖೆ- ಚನ್ನಕೇಶವ ದೇವಾಲಯ, ಬೇಲೂರು, ಹಂಪಿ ಆನೆಲಾಯ

Key words: Mysore Dasara-31 district-tablo-jamboo savari