ಮೈಸೂರು ದಸರಾ-2021: ನಾಳೆ ಅಭಿಮನ್ಯು ಆ್ಯಂಡ್ ಟೀಮ್ ಗೆ ಸಾಂಪ್ರದಾಯಿಕ ಸ್ವಾಗತ.

Promotion

ಮೈಸೂರು,ಸೆಪ್ಟಂಬರ್,15,2021(www.justkannada.in):  ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದು ನಗರದ ಅರಣ್ಯಭವನದಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ನೇತೃತ್ವದ ಗಜಪಡೆಗೆ ನಾಳೆ ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ.

ನಾಳೆ‌ ಜಿಲ್ಲಾಡಳಿತ ಹಾಗೂ ಅರಮನೆಯಿಂದ‌ ದಸರಾ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಿದ್ದು, ನಾಳೆ ಬೆಳಗ್ಗೆ 8.10  ರಿಂದ 9.11 ಗೆ. ಒಳಗೆ ಗಜಪಡೆ ಅರಮನೆ ಪ್ರವೇಶ ಮಾಡಲಿವೆ. ನಾಳೆ ಬೆಳಗ್ಗೆ 5.30  ರಿಂದ 6.30. ಒಳಗೆ ಅರಣ್ಯ ಭವನದಲ್ಲಿ ಅಧಿಕಾರಿಗಳು ಪೂಜೆ ಸಲ್ಲಿಸಲಿದ್ದಾರೆ.

ಬಳಿಕ  ನಡಿಗೆಯಲ್ಲಿ ದಸರಾ ಆನೆಗಳು ಅರಮನೆ ಅಂಗಳಕ್ಕೆ ತೆರಳಲಿದ್ದು, ದಸರಾ ಆನೆಗಳಿಗೆ ಪೋಲಿಸ್ ಭದ್ರತೆ ನೀಡಲಾಗುತ್ತದೆ. ಇನ್ನು ದಸರಾ ಗಜಪಡೆಗೆ ರಾಜವಂಶಸ್ಥರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.  ನಾಳೆಯಿಂದ ಆರಮನೆ ಆವರಣ ಮತ್ತಷ್ಟು ಕಳೆಗಟ್ಟಲಿದೆ.

Key words: Mysore Dasara -2021- traditional- welcome – Abhimanyu and Team- tomorrow.