ಕೊರೊನಾ ಟೆಸ್ಟ್ ಗೆ ಮಾವುತರಿಂದ ನಕಾರ: ಡಿಎಚ್ ಒ ಜೊತೆ ವಾಗ್ವಾದ

Promotion

ಮೈಸೂರು,ಅಕ್ಟೊಂಬರ್,03,2020(www.justkannada.in) : ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಅರಮನೆಗೆ ಆಗಮಿಸಿ ಬೀಡುಬಿಟ್ಟಿರುವ ದಸರಾ ಆನೆಗಳ ಮಾವುತರಿಗೆ, ಕಾವಾಡಿಗರಿಗೆ ಇಂದು ಕೊರೋನಾ ಟೆಸ್ಟ್ ಮಾಡಲಾಗುತ್ತಿದೆ. ಆದರೆ ಮಾವುತರು ಕಾವಾಡಿಗರು ಕೋವಿಡ್ ಟೆಸ್ಟ್ ಮಾಡಿಸಲು ನಿರಾಕರಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಾವು ಕಾಡಿನ ಜನ ನಮಗೆ ಯಾವ ರೋಗ ಇಲ್ಲ. ರೋಗ ಇದ್ದರೆ ಟೆಸ್ಟ್ ಮಾಡಿಸೋಣ ರೋಗ ಇಲ್ಲದಿದ್ದರೆ ಯಾಕೆ ಎಂದು ಕೊರೊನಾ ಟೆಸ್ಟ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

jk-logo-justkannada-logoಭಾನುವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ನೇತೃತ್ವದಲ್ಲಿ ಆನೆಗಳ ಮಾವುತರಿಗೆ ಕಾವಾಡಿಗರಿಗೆ ಕೊರೊನಾ ಟೆಸ್ಟ್ ಮಾಡಲು ಮುಂದಾದರು.

. coronation-test-coroner-quarrelsome-DHOಈ ಸಂದರ್ಭ  ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಮಾವುತರು ನಿರಾಕರಿಸಿದ್ದು .ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ವಾಗ್ವಾದಗಿಳಿದ ಘಟನೆಯೂ ನಡೆದಿದೆ.  ನಾವು ಕಾಡಿನ ಜನ ನಮಗೆ ಯಾವ ರೋಗ ಇಲ್ಲ. ರೋಗ ಇದ್ದರೆ ಟೆಸ್ಟ್ ಮಾಡಿಸೋಣ ರೋಗ ಇಲ್ಲದಿದ್ದರೆ ಯಾಕೆ? ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ವಾದಿಸಿದ್ದಾರೆ.

 coronation-test-coroner-quarrelsome-DHO

ನಾವು ಯಾವುದೇ ಕಾರಣಕ್ಕೂ ಟೆಸ್ಟ್ ಮಾಡಿಸಲ್ಲ.  ನಮಗೆ ಕೊರೊನಾ ಟೆಸ್ಟ್ ಮಾಡಿಸಿದ್ರೆ ಅನೆಗೂ ಕೊರಾನಾ ಪರೀಕ್ಷೆ ಮಾಡಿಸಿ ಎಂದು ವಾಗ್ವಾದ ನಡೆಸಿದ್ದು,  ಈ ಸಂದರ್ಭ ಆರೋಗ್ಯ ಸಿಬ್ಬಂದಿ ಮಾವುತರ ಮನವೊಲಿಕೆಗೆ ಮುಂದಾದರು.

key words :mysore-dasara-2020-mavutha-kavadi- corona-test-DHO