ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ: ದಿನಕ್ಕೂ ಮೊದಲೇ ಸ್ಥಳ ಕಾಯ್ದಿರಿಸಿಕೊಂಡ ಜನತೆ…

Promotion

ಮೈಸೂರು,ಅ,7,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ ನಾಳೆ ನಡೆಯಲಿದ್ದು,   ಈ ನಡುವೆ ಜಂಬೂ ಸವಾರಿ ವೀಕ್ಷಿಸಲು ಮೈಸೂರಿಗರು ಈಗಲೇ ಸ್ಥಳ ಕಾಯ್ದಿರಿಸಿಕೊಂಡಿದ್ದಾರೆ.

ನಾಳೆ  ಜಂಬೂ ಸವಾರಿ ಮೆರವಣಿಗೆಯಲ್ಲಿ ಕ್ಯಾಪ್ಟನ್ ಅರ್ಜುನ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ರಾಜಮಾರ್ಗದಲ್ಲಿ ಹೆಜ್ಜೆ ಹಾಕಲಿದ್ದಾನೆ. ಈ ದೃಶ್ಯವನ್ನ ಕಣ್ತುಂಬಿಕೊಳ್ಳಲು  ಜನತೆ ಕಾತರರಾಗಿದ್ದು, ಈಗಾಗಲೇ ಜಂಬೂಸವಾರಿ ಸಾಗುವ ಸಯ್ಯಾಜಿರಾವ್ ರಸ್ತೆಯ ಇಕ್ಕೆಲಗಳಲ್ಲಿ ರಿಜರ್ವೇಷನ್ ಮಾಡಿದ್ದಾರೆ.

ಕಳೆದ ರಾತ್ರಿಯಿಂದಲೇ ಜನರು ಪುಟ್ ಪಾತ್ ಮೇಲೆ ಚಾಪೆ, ಬಟ್ಟೆ ಗೋಣಿಚೀಲಗಳನ್ನು ಇಟ್ಟು ಪುಟ್ ಪಾತ್ ನಲ್ಲಿ ಸ್ಥಳ ಕಾಯ್ದಿರಿಸಿಕೊಂಡಿದ್ದಾರೆ.  ಆಯುರ್ವೇದ ವೃತ್ತದಿಂದ ಬನ್ನೊಮಂಟಪದವರೆಗೂ ಸ್ಥಳವನ್ನ ನಿಗದಿ ಮಾಡಿಕೊಂಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.

Key words: mysore dasara-2019-Tomorrow -jambu ride- Reservation