ಮೈಸೂರು ನಗರದಲ್ಲಿ ಕ್ರೀಡಾಜ್ಯೋತಿ ಸಂಚಾರ: ಸಂಜೆ ದಸರಾ ಕ್ರೀಡಾಕೂಟಕ್ಕೆ ಚಾಲನೆ…

Promotion

ಮೈಸೂರು,ಅ,1,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಕ್ರೀಡಾಜ್ಯೋತಿ ತಾಲ್ಲೂಕುಗಳ ಸಂಚಾರ ಮುಗಿಸಿ ಮೈಸೂರು ನಗರಕ್ಕೆ ಆಗಮಿಸಿದ್ದು ಮೈಸೂರು ನಗರದಲ್ಲಿ ಕ್ರೀಡಾ ಜ್ಯೋತಿ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಮೈಸೂರು ನಗರದಲ್ಲಿ ಕ್ರೀಡಾ ಜ್ಯೋತಿ ಸಂಚಾರಕ್ಕೆ ಅರಮನೆ ಮುಂಭಾಗ ಕ್ರೀಡಾ ಉಪ ಸಮಿತಿ ಅಧ್ಯಕ್ಷ ಡಾ. ವರ್ಷಾ ಅವರು ಕ್ರೀಡಾಜ್ಯೋತಿ ಸಂಚಾರಕ್ಕೆ ಚಾಲನೆ ನೀಡಿದರು. ಇದೇ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಮಧ್ಯಾಹ್ನ 3ಗಂಟೆಗೆ ನಜರ್‌ಬಾದ್‌ ನ ನಿಂಬುಂಜಾದೇವಿ ದೇಗುಲಕ್ಕೆ ಕ್ರೀಡಾ ಜ್ಯೋತಿ ಆಗಮಿಸಲಿದ್ದು 4ಗಂಟೆಗೆ ಚಾಮುಂಡಿ ವಿಹಾರ ಸ್ಟೇಡಿಯಂ ತಲುಪಲಿದೆ.

ನಂತರ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ. ಸಿಂಧುಗೆ ಕ್ರೀಡಾಜ್ಯೋತಿ ಹಸ್ತಾಂತರವಾಗಲಿದ್ದು,  ಸಂಜೆ 4.30ಕ್ಕೆ ದಸರಾ ಕ್ರೀಡಾಕೂಟಕ್ಕೆ ಪಿ.ವಿ. ಸಿಂಧು ಅವರು ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಿಎಸ್ ವೈ ಹಾಗೂ ಹಲವು ಸಚಿವರು ಭಾಗಿಯಾಗಲಿದ್ದಾರೆ.

Key words: Mysore dasara-2019-kridajyothi-dasara Sports