ರಂಗೇರುತ್ತಿದೆ ದಸರಾ: ಮೈಸೂರು ರಸ್ತೆಗಳಲ್ಲಿ ಎತ್ತಿನಗಾಡಿಗಳ ಸಂಚಾರ !

ಮೈಸೂರು, ಅಕ್ಟೋಬರ್ 01, 2019 (www.justkannada.in): ಅರಮನೆ ನಗರಿ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ದಸರಾ ರಂಗು ಪಡೆದುಕೊಳ್ಳುತ್ತಿದೆ. ಇಂದು ದಸರಾ ಮಹೋತ್ಸವದ ರೈತ ದಸರಾ ಮೆರವಣಿಗೆಗೆ ಸಂಭ್ರಮದಿಂದ ನಡೆಯಿತು.

ಸಚಿವ ಕೋಟ ಶ್ರೀನಿವಾಸ್ ಪೂಜಾರಿ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಮೆರವಣಿಗೆ ಉದ್ಘಾಟಿಸಬೇಕಿದ್ದ ಸಂಸದ ವಿ. ಶ್ರೀನಿವಾಸಪ್ರಸಾದ್ ಗೈರಾದ ಹಿನ್ನೆಲೆಯಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಚಾಲನೆ ನೀಡಿದರು.

ಮೈಸೂರು ಅರಮನೆಯ ಬಲರಾಮ ದ್ವಾರದ ಬಳಿಯಿರುವ ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂಭಾಗದಿಂದ ರೈತ ದಸರಾ ಮೆರವಣಿಗೆ ಜೆಕೆ ಗ್ರೌಂಡ್ಸ್ ವರೆಗೆ ಸಾಗಿತು.

ವೀರಗಾಸೆ, ಡೊಳ್ಳು ಕುಣಿತ, ತಮಟೆ, ನಗಾರಿ ಸೇರಿದಂತೆ ಹತ್ತಾರು ಜನಪರ ಕಲಾಪ್ರಕಾರಗಳಿಂದ ಮೆರವಣಿಗೆಗೆ ರಂಗು ತಂದಿವು.