ಚಿನ್ನದ ಅಂಬಾರಿ ಹೊತ್ತು ‘ರಾಜ ಗಾಂಭೀರ್ಯ’ದಿಂದ ಹೆಜ್ಜೆ ಹಾಕುತ್ತಿರುವ ಕ್ಯಾಪ್ಟನ್ ಅರ್ಜುನ…

ಮೈಸೂರು,ಅ,8,2019(www.justkannada.in): ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ ಬಳಿಕ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅರ್ಜುನ ಬನ್ನಿ ಮಂಟಪದತ್ತ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ.

ಅಂಬಾರಿಯಲ್ಲಿನ ತಾಯಿ ಚಾಮುಂಡೇಶ್ವರಿಗೆ ಶುಭಕುಂಭ ಲಗ್ನದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಅರಮನೆಯಿಂದ 750 ಕೆಜಿ ತೂಕದ ಅಂಬಾರಿ ಹೊತ್ತು ಹೆಜ್ಜೆ ಹಾಕುತ್ತಿರುವ ಕ್ಯಾಪ್ಟನ್ ಅರ್ಜುನ ಜಯಚಾಮರಾಜೇಂದ್ರ ವೃತ್ತ, ಕೆ.ಆರ್ ಸರ್ಕಲ್, ಸಯ್ಯಾಜಿರಾವ್ ವೃತ್ತ, ಆಯುರ್ವೇದಿಕ್ ವೃತ್ತ, ತಿಲಕ್ ನಗರ, ಬಂಬೂ ಬಜಾರ್ ಹೈವೇ ಮೂಲಕ ಸಾಗಿ ಬನ್ನಿಮಂಟಪದ ಪಂಜಿನಕವಾಯತು ಮೈದಾನಕ್ಕೆ ಸಾಗಲಿದ್ದಾನೆ. ಸುಮಾರು 5 ಕಿ.ಮೀ ನಷ್ಟು ಜಂಬೂ ಸವಾರಿ ಮೆರವಣಿಗೆ ಸಾಗಲಿದೆ.

ಜಂಬೂ ಸವಾರಿ ಮೆರವಣಿಗೆಯನ್ನ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಪ್ರವಾಸಿಗರು ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಜಮಾಯಿಸಿದ್ದಾರೆ. ಇನ್ನು ಮೆರವಣಿಗೆ ಸಾಗುವ ಮಾರ್ಗದ್ದುದ್ದಕ್ಕೂ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ.

Key words: mysore dasara-2019-jamboo savari-Captain Arjuna- stepping