ಜಂಬೂ ಸವಾರಿ ಮೆರವಣಿಗೆಯಲ್ಲಿ ಮನಸೆಳೆಯುತ್ತಿರುವ ಸ್ತಬ್ಥಚಿತ್ರಗಳು: 30ಜಿಲ್ಲೆಗಳ ವಿವಿಧ ಟ್ಯಾಬ್ಲೋಗಳ ಮಾಹಿತಿ ಇಲ್ಲಿದೆ ನೋಡಿ…

ಮೈಸೂರು,ಅ,8,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿದ್ದು ಈ ನಡುವೆ ರಾಜ್ಯದ 30 ಜಿಲ್ಲೆಗಳ ವಿವಿಧ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದು ಜನರ ಮನ ತಣಿಸುತ್ತಿವೆ.

ಜಂಬೂ ಸವಾರಿ ಮೆರವಣಿಗೆಯಲ್ಲಿ ರಾಜ್ಯದ 30 ಜಿಲ್ಲೆಗಳ ಸ್ತಬ್ದಚಿತ್ರಗಳ ಜೊತೆಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 8 ಸ್ತಬ್ದಚಿತ್ರಗಳು ಸೇರಿದಂತೆ ಒಟ್ಟು 38 ಸ್ತಬ್ದ ಚಿತ್ರಗಳು ಸಾಗುತ್ತಿದ್ದು ನೋಡುಗರನ್ನ ಆಕರ್ಷಿಸುತ್ತಿವೆ. ಪ್ರತಿಯೊಂದು ಜಿಲ್ಲೆಯೂ ತನ್ನದೇ ಆದ ವೈಶಿಷ್ಟವನ್ನ ಹೊಂದಿದೆ. ಅದನ್ನ ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳಲ್ಲಿ ಅನಾವರಣಗೊಂಡಿದೆ.

ಇನ್ನು ಇತ್ತೀಚೆಗೆ ಸಂಭವಿಸಿದ ನೆರೆ ಹಾವಳಿ ಕೊಡಗು ಗುಡ್ಡ ಕುಸಿತ ಮುಂತಾದವುಗಳ ಬಗ್ಗೆಯೂ ಸ್ತಬ್ಥ ಚಿತ್ರಗಳು  ಜಂಬೂಸವಾರಿ ಮೆರವಣಿಗೆಯಲ್ಲಿ ಅನಾವರಣಗೊಂಡಿದೆ.  ವಿವಿಧ ಸ್ತಬ್ಧಚಿತ್ರಗಳ ಮಾಹಿತಿ ಇಲ್ಲಿದೆ ನೋಡಿ…

ಚಿತ್ರದುರ್ಗ – ಹೆಣ್ಣು ಬ್ರೂಣಹತ್ಯೆ ಕುರಿತ ಸ್ತಬ್ದ ಚಿತ್ರ.

ದಾವಣಗೆರೆ- ಏರ್ ಸ್ಟ್ರೈಕ್ ಸ್ತಬ್ದಚಿತ್ರ

ಗದಗ- ಬೇಟಿ ಪಡಾವೋ ಬೇಟಿ ಬಚಾವೋ

ಬಾಗಲಕೋಟೆ- ಅತಿವೃಷ್ಟಿ ಚಿತ್ರ

ಚಿಕ್ಕಬಳ್ಳಾಪುರ- ರೇಷ್ಮೆ- ಹೆಚ್.ನರಸಿಂಹಯ್ಯ

ಬಳ್ಳಾರಿ- ಹಂಪಿ ಕಲಾವೈಭವ

ವಾರ್ತಾ ಇಲಾಖೆ-ಸರ್ಕಾರ ಸೌಲಭ್ಯಗಳ ಮಾಹಿತಿ

ಬೆಂಗಳೂರು ನಗರ-ಇಸ್ರೋ ಚಂದ್ರಯಾನ 2 ಸ್ತಬ್ಧಚಿತ್ರ

ದಕ್ಷಿಣ ಕನ್ನಡ ಜಿಲ್ಲೆ- ಮಂಗಳಾದೇವಿ, ಭಾರತದ ಅತಿದೊಡ್ಡ ಪೆಟ್ರೋಲಿಯಂ ಘಟಕ.

ಚಾಮರಾಜನಗರ- ಸಮೃದ್ಧಿ ಸಂಪತ್ತಿನ ಮಧ್ಯೆ ಹುಲಿಯ ಸಂತೃಪ್ತ ತಾಣ

ಉತ್ತರ ಕನ್ನಡ- ಕದಂಬ ಬನವಾಸಿಯ ಚಿತ್ರ.

ಧಾರವಾಡ- ಸಾಂಸ್ಕೃತಿಕ ವೈಭವ ಸ್ತಬ್ದಚಿತ್ರ.

ಯಾದಗಿರಿ- ಅಂಬಿಗರ ಚೌಡಯ್ಯ ಸ್ತಬ್ಧಚಿತ್ರ..

ಮೈಸೂರು- ಜೆಎಸ್ ಎಸ್ ಮಠದಿಂದ ಸಮಾಜಕ್ಕೆ ನೀಡಿರುವ ಕೊಡುಗೆಗಳು…

ಬೆಳಗಾವಿ- ಅತಿವೃಷ್ಠಿಯಿಂದ ನಲುಗಿದ ಬೆಳಗಾವಿ.

ಹಾವೇರಿ – ಶಂಖನಾದ ಮೊಳಗಿಸುತ್ತಿರುವ ಕನಕದಾಸರು.

ಹಾಸನ- ಎತ್ತಿನಹೊಳೆ ಯೋಜನೆ ಸ್ತಬ್ಧಚಿತ್ರ.

ಸ್ತಬ್ಧಚಿತ್ರ ಉಪಸಮಿತಿ-ಒಡೆಯರ್ ಜನ್ಮದಿನೋತ್ಸವ.

ಕೊಡಗು ಜಿಲ್ಲೆ- ಗುಡ್ಡ ಕುಸಿತ ಜಾಗೃತಿ ಸ್ತಬ್ಧಚಿತ್ರ.

ಮಂಡ್ಯ- ಆದಿ ಚುಂಚನಗಿರಿ ಸಂಸ್ಥಾನ ಮಠ..

ಬೀದರ್ – ಫಸಲ್ ಭೀಮಾ ಯೋಜನೆ,

ಕೊಪ್ಪಳ- ಗವಿಸಿದ್ದೇಶ್ವರ ಬೆಟ್ಟ,

ರಾಯಚೂರು- ಗೂಗಲ್ ಬ್ರಿಡ್ಜ್, ಪ್ರಧಾನ ಮಂತ್ರಿ ಸಿಂಚಯಿ ಹಾಗೂ ನರೇಗಾ ಯೋಜನೆ

ಗುಲ್ಬರ್ಗಾ- ಆಯುಷ್ಮಾನ್ ಭಾರತ್,

ಬೆಂಗಳೂರು ಗ್ರಾಮಾಂತರ- ಸ್ವಚ್ಛತೆ ಕಡೆಗೆ ನಮ್ಮ ನಡಿಗೆ,

ಉತ್ತರ ಕನ್ನಡ- ಕದಂಬ ಬನವಾಸಿ ಮಧುಕೇಶ್ವರ ದೇವಸ್ಥಾನ

ವಿಜಯಪುರ- ವಚನ ಪಿತಾಮಹ ಫ.ಹು ಹಳಕಟ್ಟಿ,

ಕೋಲಾರ- ಅಂತರಗಂಗೆ,

ಶಿವಮೊಗ್ಗ-ಫಿಟ್ ಇಂಡಿಯಾ,

ತುಮಕೂರು- ಸಮಗ್ರ ಕೃಷಿ ಪದ್ದತಿ ಹಾಗೂ ನಡೆದಾಡುವ ದೇವರು

ರಾಮನಗರ- ಮಳೂರು ಅಂಬೆಗಾಲು ಕೃಷ್ಣ,

ಗುಲ್ಬರ್ಗಾ- ಆಯುಷ್ಮಾನ್ ಭಾರತ್,

ಉಡುಪಿ- ಕೃಷ್ಣ ಮಠದ ಗೋಪುರ ಸ್ತಬ್ದ ಚಿತ್ರ

ದಸರಾ ಸ್ತಬ್ದಚಿತ್ರ ಉಪ ಸಮಿತಿ- ಆನೆ ಬಂಡಿ

ಜೆ.ಎಸ್.ಎಸ್ ಮಠ, ವಾರ್ತಾ ಇಲಾಖೆ- ಸರ್ಕಾರದ ಸೌಲಭ್ಯಗಳ ಮಾಹಿತಿ,

ಮೈಸೂರು ಜಿಲ್ಲಾಡಳಿತ- ಸಾಮಾಜಿಕ ನ್ಯಾಯ

ಕಾವೇರಿ ನೀರಾವರಿ ನಿಗಮ- ನೀರಾವರಿ ನಿಗಮ ಮಾಹಿತಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ-ಪೋಷಣ ಅಭಿಯಾನ, ರಕ್ತಹೀನತೆ ಮುಕ್ತ ಭಾರತ.

ಪ್ರವಾಸೋದ್ಯಮ ಇಲಾಖೆ- ನಿಮ್ಮ ಸಾಹಸಗಾಥೆ ನೀವೇ ರಚಿಸಿ,

ಮೈಸೂರು ವಿಶ್ವವಿದ್ಯಾನಿಲಯ- ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳ ಕುರಿತು ಬೆಳಕು ಚೆಲ್ಲುವ ಸ್ಥಬ್ಧಚಿತ್ರ

 

Key words: mysore dasara-2019-jamboo savari-tablo-arjuna- ambari