ಮೈಸೂರು ದಸರಾ 2019:  ಕ್ಯಾಪ್ಟನ್  ಅರ್ಜುನನಿಗೆ ಭಾರ ಹೊರುವ ತಾಲೀಮು ಶುರು…

Promotion

ಮೈಸೂರು,ಸೆ,6,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಇಂದಿನಿಂದ ಎರಡನೇ ಹಂತದ ತಾಲಿಮು ಶುರುವಾಗಿದೆ.

ದಸರಾ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಂದು ಅಂಬಾರಿ ಹೊರುವ ಕ್ಯಾಪ್ಟನ್ ಅರ್ಜುನನಿಗೆ ಭಾರ ಹೊರುವ ತಾಲೀಮು ಶುರುವಾಗಿದ್ದು  ಸುಮಾರು 350 ಕೆ.ಜಿ. ತೂಕದ ಮರಳು ಮೂಟೆ ಹೊತ್ತು ಅರ್ಜುನ ಹೆಜ್ಜೆ ಹಾಕಿದ್ದಾನೆ. ಕ್ಯಾಪ್ಟನ್ ಅರ್ಜುನನಿಗೆ ಕುಂಕಿ ಆನೆಗಳಾದ ವಿಜಯ, ವರಲಕ್ಷ್ಮೀ ಸಾಥ್ ನೀಡಿವೆ. ಎರಡನೇ ಹಂತದ ತಾಲೀಮಿನಲ್ಲಿ ಧನಂಜಯ, ಈಶ್ವರ ,ಅಭಿಮನ್ಯು ಸೇರಿದಂತೆ ಎಲ್ಲಾ ಆನೆಗಳು ಭಾಗಿಯಾಗಿವೆ.

ಅಂಬಾರಿ ಹೊರುವ ಅರ್ಜುನ ಇಂದಿನಿಂದ ನಿತ್ಯ ಮರಳಿನ ಮೂಟೆ ಹೊತ್ತು ತಾಲೀಮು ನಡೆಸಲಿದ್ದಾನೆ. ಇನ್ನು ದಿನ ಬಿಟ್ಟು ದಿನ ಅರ್ಜುನ, ಅಭಿಮನ್ಯು, ಗಜೇಂದ್ರ ಹಾಗೂ ಅಭಿಮನ್ಯು ಆನೆಗಳಿಗೂ ಭಾರ ತಾಲೀಮು ನಿಗದಿಯಾಗಿದೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಡಿಸಿಎಫ್ ಅಲೆಕ್ಸಾಂಡರ್, ಅಂಬಾರಿ ಒಟ್ಟು 750ಕೆ.ಜಿ  ತೂಕ ಇದೆ. ಅಷ್ಟು ಭಾರವನ್ನು ಹೊರುವುದಕ್ಕೆ ಆನೆಯನ್ನು ತಯಾರು ಮಾಡಬೇಕಿದೆ. ಆ ಕಾರಣಕ್ಕಾಗಿ ೩೫೦ ರಿಂದ ಹಂತ ಹಂತವಾಗಿ ಭಾರ ಹೆಚ್ಚಿಸಿಕೊಂಡು 800 ಕೆ.ಜಿ. ತೂಕದ ಹೊರುವ ಸಾಮರ್ಥ್ಯ ವೃದ್ದಿಸುತ್ತೇವೆ. ಹೈ ಕೋರ್ಟ್ ನಿರ್ದೇಶನದ ಪ್ರಕಾರ 60 ವರ್ಷ ತುಂಬಿದ ಆನೆಗೆ ಭಾರ ಹಾಕಿವಂತಿಲ್ಲ. ಈಗಾಗಿ ಮುಂದಿನ ಭಾರಿ ಅರ್ಜುನನ ಬದಲು ಮತ್ತೊಂದು ಆನೆ ಭಾರ ಹೊರಲಿದೆ. ಅಭಿಮನ್ಯು ಈಗಾಗಲೇ ಅಂಬಾರಿ ಹೊರಲು ರೆಡಿ ಇದ್ದಾನೆ ಎಂದು ಮಾಹಿತಿ ನೀಡಿದರು.

ಧನಂಜಯ, ಜಯಪ್ರಕಾಶ್, ಗೋಪಿ ಸೇರಿದಂತೆ ಎರಡನೇ ತಲೆಮಾರಿನ ಆನೆಗಳಿಗೆ ಭಾರ ಹೊರುವ ತಾಲೀಮು ನೀಡಲಾಗುವುದು ಎಂದು ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದರು.

Key words: Mysore Dasara 2019- Begin – workout – Captain -Arjuna.