ಮಹಾರಾಷ್ಟ್ರದಲ್ಲಿ  ಮತ್ತೆ ಮಳೆ ಹಿನ್ನೆಲೆ: ಅಲಮಟ್ಟಿ ಡ್ಯಾಂನಿಂದ 1.8 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ…

0
502

ವಿಜಯಪುರ,ಸೆ,6,2019(www.justkannada.in):  ಮಹಾರಾಷ್ಟ್ರದಲ್ಲಿ ಮತ್ತೆ ಮಳೆಯಾಗುತ್ತಿರುವ ಹಿನ್ನೆಲೆ ಅಲಮಟ್ಟಿ ಡ್ಯಾಂನಿಂದ ನೀರನ್ನ ಹೊರಗೆ ಬಿಡಲಾಗಿದೆ.

ಮಹಾರಾಷ್ಟ್ರದಲ್ಲಿ ಮತ್ತೆ ಭಾರಿ ಮಳೆಯಾಗುತ್ತಿದ್ದು ಈ ಹಿನ್ನೆಲೆ ನಿನ್ನೆ ಕೊಯ್ನಾ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಹರಿಯಬಿಡಲಾಗಿತ್ತು. ಇದೀಗ ಅಲಮಟ್ಟಿ ಡ್ಯಾಂ ನಿಂದ ನಾರಾಯಣಪುರ ಡ್ಯಾಂಗೆ 1.85 ಲಕ್ಷ ಕ್ಯೂಸೆಕ್ ನೀರನ್ನ ಬಿಡುಗಡೆ ಮಾಡಲಾಗಿದೆ.

ನೀರು ರಿಲೀಸ್ ಮಾಡಿದ ಹಿನ್ನೆಲೆ ನಾರಯಣಪುರ ಡ್ಯಾಂ ಸುತ್ತಮುತ್ತ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.

Key words: Heavy Rain –Maharashtra-1.8 lakh -cusecs –water- released – Alamatti dam