ಗಂಗಾ ಕಾವೇರಿ ನದಿಗಳ ಜೋಡಣೆಗಾಗಿ ಮೈಸೂರಿನ ದಂಪತಿಯಿಂದ ಪಾದಯಾತ್ರೆ…

Promotion

ಮೈಸೂರು,ನವೆಂಬರ್,18,2020(www.justkannada.in): ಗಂಗಾ -ಕಾವೇರಿ ನದಿಗಳ ಜೋಡಣೆಯಿಂದ ರೈತರಿಗೆ ಬಹಳ ಉಪಯೋಗವಾಗಲಿದೆ. ದೇಶದ ಜನರ ಹಿತದೃಷ್ಟಿಯಿಂದ ಈ ಕೂಡಲೇ ನದಿಗಳ ಜೋಡಣೆ ಯೋಜನೆ ಪ್ರಾರಂಭಿಸಬೇಕು ಎಂದು ಮೈಸೂರು ಜಿಲ್ಲಾ ನಗರ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಮಂಜುನಾಥ್ ಹೇಳಿದರು.kannada-journalist-media-fourth-estate-under-loss

ಗಂಗಾ ಕಾವೇರಿ ನದಿಗಳ ಜೋಡಣೆಗಾಗಿ ಮೈಸೂರಿನಿಂದ ತಿರುಪತಿಗೆ ಮೈಸೂರು ಜಿಲ್ಲಾ ನಗರ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಮಂಜುನಾಥ್ ದಂಪತಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಕಳೆದ 27 ವರ್ಷಗಳಿಂದಲೂ ಮಂಜುನಾಥ್ ಪಾದಯಾತ್ರೆ ಕೈಗೊಳ್ಳುತ್ತಿದ್ದು, ಇಂದು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಂಜುನಾಥ್ ದಂಪತಿ ತಿರುಪತಿಗೆ ಕಾಲ್ನಡಿಗೆಯಲ್ಲಿ ತೆರಳಿದರು.mysore-couple-padayatra-ganga-cauvery-rivers-join

ಇದಕ್ಕೂ ಮುನ್ನ ಮಾತನಾಡಿದ ಮಂಜುನಾಥ್, ಉತ್ತರದ ಗಂಗಾ ದಕ್ಷಿಣದ ಕಾವೇರಿ ನದಿಯನ್ನು ಜೋಡಿಸಿದರೆ ಕೋಟ್ಯಾಂತರ ಮಂದಿಗೆ ಅನುಕೂಲವಾಗುತ್ತೆ. ನದಿಗಳ ಜೋಡಣೆಯಿಂದ ರೈತರಿಗೆ ಬಹಳ ಉಪಯೋಗವಾಗಲಿದೆ. ದೇಶದ ಜನಗಳ ಹಿತದೃಷ್ಟಿಯಿಂದ ಈ ಕೂಡಲೇ ನದಿಗಳ ಜೋಡಣೆ ಯೋಜನೆ ಪ್ರಾರಂಭಿಸಬೇಕು. ಅಲ್ಲದೆ ಕೋವಿಡ್ ನಿಂದ ಜನರು ತತ್ತರಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ದೇವರ ಬಳಿ ಪಾದಯಾತ್ರೆ ಮಾಡುವುದಾಗಿ ಸಂಕಲ್ಪ ಹೊತ್ತಿದ್ದೆ. ಹೀಗಾಗಿ ಮೈಸೂರಿನಿಂದ ಇಂದು ತಿರುಪತಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇನೆ ಎಂದು ತಿಳಿಸಿದರು.

English summary….

Mysuru couple set on padayatra demanding joining of Ganga-Kaveri rivers
Mysuru, Nov. 18, 2020 (www.justkannada.in): Mysuru District City Congress Vice President C. Manjunath expressed his view that the joining of Ganga and Kaveri rivers would benefit crores of farmers and demanded the Govt. of India to start the river joining project soon.mysore-couple-padayatra-ganga-cauvery-rivers-join
C. Manjunath and his wife set off on padayatra to Tirupati from Mysuru by offering prayers at the Kote Anjaneya Temple in front of the Mysuru Palace today.

Key words: Mysore- couple –padayatra- Ganga- Cauvery- rivers-join