ಮೈಸೂರಿನಲ್ಲಿ ಇಳಿಯಬೇಕಿದ್ದ ಟ್ರ್ಯೂಜೆಟ್ ವಿಮಾನ ಚೆನ್ನೈ ನಲ್ಲಿ ಲ್ಯಾಂಡಿಂಗ್ ..

ಮೈಸೂರು,ನವೆಂಬರ್,18,2020(www.justkannada.in): ಮೈಸೂರಿನಲ್ಲಿ ಇಳಿಯಬೇಕಿದ್ದ ಟ್ರುಜೆಟ್ ವಿಮಾನಯಾನ ಸಂಸ್ಥೆಗೆ ಸೇರಿದ ಟ್ರ್ಯೂಜೆಟ್ ವಿಮಾನ ಹವಾಮಾನ ವೈಪರಿತ್ಯದಿಂದಾಗಿ ಚೆನ್ನೈಗೆ ಡೈವರ್ಟ್ ಮಾಡಿ ತುರ್ತು ಲ್ಯಾಂಡಿಂಗ್ ಮಾಡಿದ ಘಟನೆ ತಡೆವಾಗಿ ಬೆಳಕಿಗೆ ಬಂದಿದೆ.emergency-landing-chennai-trujet-flight-land-mysore

ನಿನ್ನೆ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯಿಂದ ಮೈಸೂರಿಗೆ ಆಗಮಿಸುತ್ತಿದ್ದ ವಿಮಾನ ನಿನ್ನೆ ಸಂಜೆ 8.10ಕ್ಕೆ ಮೈಸೂರಿಗೆ ಬಂದಿಳಿಯಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಮೈಸೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗದೇ ಚೆನ್ನೈಗೆ ಡೈವರ್ಟ್ ಮಾಡಲಾಯಿತು. ಪೈಲಟ್ ಕಾಲ್ ಮೇರೆಗೆ ಚೆನೈಗೆ ಡೈವರ್ಟ್ ಮಾಡಿ ತುರ್ತು ಲ್ಯಾಂಡ್ ಮಾಡಲಾಗಿದೆ.emergency-landing-chennai-trujet-flight-land-mysore

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 47 ಪ್ರಯಾಣಿಕರು, ಐವರು ಸಿಬ್ಬಂದಿ ಸೇರಿ 52 ಜನ ಪ್ರಯಾಣಿಕರು ಸೇಫ್ ಆಗಿದ್ದು, ಸದ್ಯ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.  ಈ ಸಂಬಂಧ ವಿಮಾನಯಾನ ಇಲಾಖೆ ತನಿಖೆಗೆ ಆದೇಶಿಸಿದ್ದು, ಪೈಲೆಟ್ ಸೇರಿದಂತೆ ಸಂವಹನ ಸಿಬ್ಬಂದಿ ವಿಚಾರಣೆಗೆ ಆದೇಶಿಸಲಾಗಿದೆ.

Key words: Emergency -landing -Chennai – Trujet- flight -land – Mysore.