ಮಳೆಗಾಲಕ್ಕೂ ಮುಂಚೆಯೇ ಎಚ್ಚೆತ್ತ ಮೈಸೂರು ಮಹಾನಗರ ಪಾಲಿಕೆ: ಬಲಿಗಾಗಿ ಕಾಯುತ್ತಿದ್ದ ಒಣಮರಗಳು ತೆರವು

Promotion

ಮೈಸೂರು,ಮೇ,3,2019(www.justkannada.in):  ಮಳೆಗಾಲಕ್ಕೂ ಮುಂಚೆಯೇ ಎಚ್ಚೆತ್ತಿರುವ ಮೈಸೂರು ಮಹಾನಗರ ಪಾಲಿಕೆ  ಬಲಿಗಾಗಿ ಕಾಯುತ್ತಿದ್ದ ಒಣ ಮರಗಳನ್ನ ಕಟಾವು ಮಾಡಿಸಿದೆ.

ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿ  ಒಣ ಮರಗಳಿದ್ದು, ಪ್ರತಿ ನಿತ್ಯ ನೂರಾರು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಗೂ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು  ಓಡಾಡುತ್ತಿದ್ದರು. ಈ ಹಿಂದೆ ಓರ್ವ ಸರ್ಕಾರಿ ಅಧಿಕಾರಿಯ ಮೇಲೆಯೇ ಮರದ ತುಂಡು ಬಿದ್ದಿತ್ತು.

ಹೀಗಾಗಿ ಮಳೆಗಾಲ ಹತ್ತಿರುವಿದ್ದು ಅದಕ್ಕೂ ಮುನ್ನ ಎಚ್ಚೆತ್ತಿರುವ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಒಣ ಮರಗಳನ್ನ ತೆರವುಗೊಳಿಸಿದ್ದಾರೆ.  ಮೈಸೂರು ಮಹಾ ನಗರ ಪಾಲಿಕೆಯ ಆದೇಶದ ಮೇರೆಗೆ  ಒಣಗಿದ ಮರಗಳು ಹಾಗೂ ರೆಂಬೆಗಳನ್ನ  ಕೆ.ಇ.ಬಿ. ಸಿಬ್ಬಂದಿಗಳು ಕಟಾವು ಮಾಡಿದರು. ಸಿಬ್ಬಂದಿಗಳ ಕಾರ್ಯದಿಂದ ಸಾರ್ವಜನಿಕರು ನಿರಾಳಗೊಂಡಿದ್ದು, ನಗರದ ಇತರೇ ಭಾಗದಲ್ಲಿ ಇರುವ ಒಣ ಮರಗಳನ್ನು ತೆರವು ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

Key words: Mysore -corporation – before- rainy season-dry- trees -cut