ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು 50ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣ ಸಾಧ್ಯತೆ…

Promotion

ಮೈಸೂರು,ಜು,1,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಕೊರೋನಾ ಸ್ಪೋಟಗೊಳ್ಳಲಿದೆ. ಹೌದು, ಇಂದು ಮೈಸೂರಿನಲ್ಲಿ 50ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣ ಬರುವ ಸಾಧ್ಯತೆ ಇದೆ.

ಈ ಕುರಿತು ಮೈಸೂರು ಆರೋಗ್ಯ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ದಿನವೊಂದರ ಪ್ರಕರಣದಲ್ಲಿ ಇಂದು ಅತಿ ಹೆಚ್ಚು ಸಂಖ್ಯೆ ದಾಖಲಾಗುವ ಸಾಧ್ಯತೆ ಇದೆ. 50ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು ಬರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.mysore-corona-positive-52-case-today

ಸದ್ಯ ಮೈಸೂರಿನಲ್ಲಿ 270 ಒಟ್ಟು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಆಕ್ಟಿವ್ ಕೇಸ್‌ಗಳು 89 ಇದೆ. ನಿನ್ನೆ ಮೈಸೂರಿನಲ್ಲಿ 9 ಪ್ರಕರಣಗಳು ಪತ್ತೆಯಾಗಿದ್ದವು. ಇಂದು ಅತಿ ಹೆಚ್ಚು ನಂಬರ್‌ಗಳು ಬರುವುದಾಗಿ ಜಿಲ್ಲಾಧಿಕಾರಿಯೂ ಹೇಳಿದ್ದಾರೆ.

 

Key words: mysore-corona positive- 52 case- today