ರಾಜ್ಯ ಹಾಗೂ ಕೇಂದ್ರ ಸರಕಾರಗಳೆರೆಡು ಕರೋನಾದಿಂದ ಮೃತಪಟ್ಟವರ ಲೆಕ್ಕ ಮುಚ್ಚಿಡುತ್ತಿದೆ: ಕಾಂಗ್ರೆಸ್ ಆರೋಪ.

ಮೈಸೂರು, ಜೂ.01, 2021 : ಕರೋನಾ ಸೋಂಕಿತರ ಸಾವಿನ ಲೆಕ್ಕವನ್ನು ಬಿಜೆಪಿ ಸರಕಾರ ಮುಚ್ಚಿಡುತ್ತಿದೆ. ರಾಜ್ಯ, ಕೇಂದ್ರಗಳೆರೆಡು ಈ ವಿಚಾರದಲ್ಲಿ ಸುಳ್ಳು ಹೇಳುತ್ತಿವೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.jk
ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್ ಹೇಳಿದಿಷ್ಟು…
ಸಾವಿನ ಸಂಖ್ಯೆಯಲ್ಲಿ ಬಿಜೆಪಿ ಸುಳ್ಳು ಹೇಳುತ್ತಿದೆ. ಕಾಂಗ್ರೆಸ್ ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದೆ. ನ್ಯೂಯಾರ್ಕ ಟೈಮ್ಸ್‌, ಸಮೀಕ್ಷೆ ಮಾಡಿ ಒಂದು ವರದಿ ನೀಡಿದೆ. ಈ ವರದಿ ಪ್ರಕಾರ ಏಳು ಲಕ್ಷಕ್ಕೂ ಹೆಚ್ಚು ಜನ ಕೋವಿಡ್ ನಿಂದ ಸತ್ತಿದ್ದಾರೆ. ಬಹಳ ಸೀರಿಯಸ್ ರಿಪೋರ್ಟ್ ಇದು. ಆದರೆ, ನಮ್ಮ ದೇಶದ ಮಾಹಿತಿ ಪ್ರಕಾರ. 3 ಲಕ್ಷದ 20 ಸಾವಿರ ಜನ ಮಾತ್ರ ಕರೋನಾದಿಂದ ಸತ್ತಿದ್ದಾರೆ ಎಂಬ ಮಾಹಿತಿ ನೀಡಿದೆ. ಆ ಮೂಲಕ ನಿಜವಾದ ಸಾವಿನ ಸಂಖ್ಯೆಯಲ್ಲಿ ಸುಳ್ಳು ಹೇಳಿತ್ತಿದೆ.
ಮೈಸೂರಿನಲ್ಲಿ 969 ಜನ ಸತ್ತಿದ್ದಾರೆ ಎಂಬ ಆರೋಪವನ್ನು ಶಾಸಕ ಸಾ ರಾ ಮಹೇಶ್ ಮಾಡಿದ್ದಾರೆ. ಆದರೆ 238 ಮಂದಿ ಮೃತಪಟ್ಟಿರುವ ಬಗ್ಗೆ ಮಹಾನಗರ ಪಾಲಿಕೆ ವರದಿ ನೀಡಿದೆ. ಇಡೀ ಜಿಲ್ಲೆಯಲ್ಲಿ ಸುಮಾರು 3 ಸಾವಿರ ಜನ ಸತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು ಒಂದು ಲಕ್ಷದಷ್ಟು ಜನ ಸತ್ತಿದ್ದಾರೆ. ಆದರೆ ಸರಕಾರ ಮಾತ್ರ 30 ಸಾವಿರ ಮಂದಿ ಸತ್ತಿರುವ ಲೆಕ್ಕ ಕೊಡುತ್ತಿದೆ. ಸರ್ಕಾರ ಸತ್ಯ ಹೇಳಬೇಕು. ಜನ ನಿಮ್ಮ ವಿರುದ್ಧ ಬೀಳುತ್ತಾರೆ ಅಂತ ಸಾವಿನ ಸಂಖ್ಯೆಯಲ್ಲಿ ಸುಳ್ಳು ಹೇಳುತ್ತಿದ್ದಾರೆ. ಇದು ತನಿಖೆ ಆಗಬೇಕು.
ಸಂಸದ ಪ್ರತಾಪ ಸಿಂಹ ಏನೇನೋ ಮಾತನಾಡುತ್ತಿದ್ದಾರೆ. ಶಾಸಕ ಸಾ.ರಾ.ಮಹೇಶ್ ಅವರ ಆರೋಪಕ್ಕೆ ನೀವು ಉತ್ತರ ಕೊಡಬೇಕು. ಮೈಸೂರು ನಗರ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ಕೊಟ್ಟಿರುವ ಸಂಖ್ಯೆ ಎಷ್ಟು.? ಅಥವಾ ನೀವೆ ಮುಚ್ವಿಡುತ್ತಿದ್ದೀರಾ ? ಅಥವಾ ನಿಮಗೇನಾದರು ಸರ್ಕಾರ ಏನಾದ್ರು ಮಾಹಿತಿ ಮುಚ್ಚಿಡಲು ಮೌಕಿಕವಾಗಿ ಹೇಳಿದೆಯಾ.?
ಗಂಗಾನದಿಯಲ್ಲಿ ಹೆಣ ತೇಲುತ್ತಿವೆ. ಇಡೀ ದೇಶದಲ್ಲಿ ಸೂತಕದ ಛಾಯೆ ಕಾಡುತ್ತಿರುವಾಗ ನಿಮಗೆ ಸಂಭ್ರಮಾಚರಣೆ ಬೇಕಾ ? ನಿಮ್ಮ ಇನ್ನೊಂದು ಮುಖವಾಡ ಬಯಲಾಗುತ್ತಿದೆ. ಸಂಸದ ಪ್ರತಾಪ ಸಿಂಹ, ಹಿಟ್ ಅಂಡ್ ರನ್ ಸ್ಟೇಟ್ಮೆಂಟ್ ಕೊಡಬೇಡಿ.
ಪಿಎಂ ಕೇರ್ ಲೆಕ್ಕ ಕೊಡಿ ಮೊದಲು :
ನೀವು ಡಿಸಿಗೆ ಲೆಕ್ಕ ಕೇಳಿದ್ದೀರಿ. ಬೆಳಗ್ಗೆ ಕೇಳಿದ್ರಿ ಸಂಜೆಯೊಳಗೆ ಲೆಕ್ಕ ಕೊಟ್ಟಿದ್ದಾರೆ. ನಿಮಗೆ ಮಾನ ಮರ್ಯಾದೆ ಗೌರವ ಇದ್ರೆ. ಕಳೆದ ಒಂದುವರೆ ವರ್ಷದಲ್ಲಿ ರಾಜ್ಯ ಸರ್ಕಾರದ ಎಷ್ಟು ಹಣ ಖರ್ಚು ಮಾಡಿದ್ದೀರಿ..? ಎಳೆಂಟು ಸಾವಿರ ಕೋಟಿ ರೂ. ಖರ್ಚು ಮಾಡಿದ್ದೀರಿ ಎಂದು ಹೇಳುತ್ತಿದ್ದೀರಿ. ಈ ಬಗ್ಗೆ ಲೆಕ್ಕ ಕೊಡಿ. ನೀವು ಬೇರೆಯವರಿಗೆ ಲೆಕ್ಕ ಕೇಳುತ್ತಿದ್ದೀರಿ. ಈಗ ನೀವು ಲೆಕ್ಕ ಕೊಡಿ. ಪಿಎಂ ಕೇರ್ ಗೆ ಎಷ್ಟು ದುಡ್ ಬಂದಿದೆ ಎಂಬುದನ್ನು ಮೊದಲು ಹೇಳಿ. ಸತ್ಯ ಹರಿಶ್ಚಂದ್ರ ರಾ ನೀವು.! ಇದು ಜನ ಸಾಮಾನ್ಯರು ಕೊಟ್ಟ ದುಡ್ಡು, ಅದರ ಲೆಕ್ಕ ಕೊಡಿ ನೀವು ಎಂದು ಲಕ್ಷ್ಮಣ್ ಪ್ರಶ್ನಿಸಿದರು.arrange-beds-criticizing-good-work-opposite-party-mp-prathap-sinha
ಡಿಸಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದ್ದಾರೆ ಎಂಬ ಪ್ರಶ್ನೆ ಕೇಳುದ್ದೀರಿ. ಆದರೆ ದಿಲ್ಲಿಯಲ್ಲಿ ಕೋಟಿಗಟ್ಟಲ್ಲೇ ಹಣ ವ್ಯಯಿಸಿ ಪ್ರಧಾನಿ ಮನೆ ನಿರ್ಮಾಣ ಮಾಡುತ್ತಿದ್ದೀರಿ. ಪಿಎಂ, ರಾಷ್ಟ್ರಪತಿಗಳ ಓಡಾಟಕ್ಕೆ 16 ಸಾವಿರ ಕೋಟಿ ಕೊಟ್ಟು ವಿಮಾನ ಖರೀದಿ ‌ಮಾಡಿದ್ದೀರಿ. ಈ ಸಂದರ್ಭದಲ್ಲಿ ಇದು ಬೇಕಾ ದಯಮಾಡಿ ಇದನ್ನು ಹೇಳಬೇಕು ಎಂದು ಸಂಸದಗೆ ಎಂ. ಲಕ್ಷ್ಮಣ್ ಪ್ರಶ್ನೆ.symptoms - black fungus- hospital –treatment-Mysore DC- Rohini Sindhuri

ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಸಿಗ್ತಾ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಸಿಕ್ತಿಲ ಯಾಕೆ.? ನೀವು ವ್ಯಾಕ್ಸಿನ ವಿಚಾರದ ದಂದೆ ಮಾಡುತ್ತಿದ್ದೀರಿ. ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರಿ ಸ್ವಾಮ್ಯದ ಕೋವಿಡ್ ಕೇರ್ ಸೇಂಟರ್ ಇಲ್ಲ ಯಾಕೆ. ಇದಕ್ಕೆ ಕಾರ್ಪೊರೇಷನ್ ಕಮಿಷನರ್ ಉತ್ತರ ಕೊಡಬೇಕು. ವೆಂಟಿಲೇಟರ್ ಉಪಯೋಗಿಸುತ್ತಿಲ್ಲ ಅಂತ ಪ್ರತಾಪ್ ಸಿಂಹ ಹೇಳಿದ್ದೀರಿ. ನಿಮ್ಮ‌ಪಿಎಂ ಕೇರ್ ನ 90% ವೆಂಟಿಲೇಟರ್ ಕೆಲವನ್ನೆ ಮಾಡ್ತಾ ಇಲ್ಲ. ಎಲ್ಲಾ ಪಾರ್ಟ್ ಗಳು ಚೈನಾದವು. ಪಿಎಂ ಕೇರ್ ವೆಂಟಿಲೇಟರ್ ಗಳಲ್ಲೂ ದಂದೆ ಮಾಡಿದ್ದೀರಿ. ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಆರೋಪ.KPCC spokesperson -M. Laxman - fierce –opposition- Helipad-mysore

ಮೈಸೂರಿನ ಅಧಿಕಾರ ವರ್ಗವನ್ನು ಬೈಯ್ಯುವ ಕೆಲಸ ಮಾಡಬೇಡಿ. ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಅವರಿಗೆ ಕಾಂಗ್ರೆಸ್ ಪಕ್ಷ ಎಚ್ಚರಿಕೆ ನೀಡುತ್ತಿದೆ. ಜಿಲ್ಲೆಯಲ್ಲಿ ಏನಾದ್ರು ಕೆಲಸ ಆಗಿದ್ರೆ ಅದು ಅಧಿಕಾರಿಗಳು ಮಾಡಿರುವ ಕೆಲಸ. ಪ್ರತಾಪ್ ಸಿಂಹ ನಾನು ಮಾಡಿದೆ ನಾನು ಮಾಡಿದೆ ಅಂತ ಹೇಳಬೇಡಿ. ಅಧಿಕಾರಿಗಳ ಜೊತೆ ಹೊಂದಾಣಿಕೆಯಿಂದ‌ ಕೆಲಸ ಮಾಡಿ. ಬರಿ ಮಾದ್ಯಮ ಗಳಲ್ಲಿ ಮಾತನಾಡಬೇಡಿ. ನಿಮ್ ಕೈಯಿಂದ ಎಷ್ಟು ಹಣ ಖರ್ಚು ಮಾಡಿದ್ದೀರಾ ಮಾಹಿತಿ ಕೊಡಿ. ಬೇರೆಯವರ ಕೆಲಸವನ್ನು ನಾನು ಮಾಡಿದೆ ನಾನು ಮಾಡಿದೆ ಎಂದು ಯಾಕೆ ಹೇಳಿಕೊಳ್ಳುತ್ತೀರಿ. ದಾರಿ ಉದ್ದಕ್ಕೂ ಕಾಲು ಹಾಕುವ ಕೆಲಸ ಮಾಡಬೇಡಿ. ನಿಮ್ಮ‌ ವ್ಯಾಪ್ತಿ ಎಷ್ಟಿದೆಯೋ ಅಷ್ಟರಲ್ಲಿ ನಿಮ್ಮ ಕೆಲಸ ಮಾಡಿ. ಕೊರೊನಾ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದ ಲಕ್ಷ್ಮಣ್.

key words : mysore-congress-lakshman-bjp-dc-rohini sindhoori-corona